ಬೆಳಗಾವಿ: ಜಾನಪದ ಕಲಾವಿದ ನಾಗಪ್ಪ ಪ. ಮಾಡಮಗೇರಿ ನಿಧನ
ಬೆಳಗಾವಿ: ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗಿರಿಯಾಲ ಗ್ರಾಮದ ಖ್ಯಾತ ಹಲಗೆ ವಾದ್ಯ ಬಾರಿಸುವ ಹಿರಿಯ ಜಾನಪದ ಕಲಾವಿದರು ಹಾಗೂ ಕರ್ನಾಟಕ ರಾಜ್ಯ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ನಾಗಪ್ಪ. ಪ. ಮಾಡಮಗೇರಿ ನಿಧನರಾದರು.
ನಾಗಪ್ಪ. ಪ. ಮಾಡಮಗೇರಿ ಬೆಳಗಾವಿ ಭಾಗದ ಸುಮಾರು ಸಾವಿರಕ್ಕೂ ಹೆಚ್ಚು ಸುತ್ತ ಮುತ್ತಲಿನ ಹಳ್ಳಿಗಳ ಪ್ರತಿ ಮದುವೆ ಸಮಾರಂಭಗಳಲ್ಲಿ ಹಲಗೆ ವಾದ್ಯ ಬಾರಿಸುವ ಪ್ರತಿಭಾವಂತರಾಗಿದ್ದು, ರಾಜ್ಯ, ಜಿಲ್ಲಾ ಮತ್ತು ತಾಲೂಕಿನ ಮಟ್ಟದ ಸರ್ಕಾರಿ ಜಾನಪದ ಕಾರ್ಯಕ್ರಮಗಳಲ್ಲಿ ಹಲಗೆ ವಾದ್ಯ ಬಾರಿಸುವ ಮೂಲಕ ಖ್ಯಾತಿ ಪಡೆದು ಜನಪ್ರಿಯ ಜಾನಪದ ಕಲಾವಿದರಲ್ಲಿ ಒಬ್ಬರು.
ಸಂಗ್ಯಾ-ಬಾಳ್ಯ ಜಾನಪದ ನಾಟಕ ಸೇರಿದಂತೆ ಅನೇಕ ನಾಟಕಗಳಲ್ಲಿ ಹಲಗೆ ನುಡಿಸಿದ್ದಾರೆ. ಅವರ ನಿಧನಕ್ಕೆ ಮಾಜಿ ಸಿಎಂ ಬಿ. ಎಸ್.ಯಡಿಯೂರಪ್ಪ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಸಂತಾಪ ಸೂಚಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಭಾಗದ ಹಾಲಿ ಹಾಗೂ ಮಾಜಿ ಶಾಸಕರು, ಬೆಳಗಾವಿ ಸಂಸದೆ, ಹಿರಿಯ ವಕೀಲರು, ಇತರೆ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ