ಅಧ್ಯಯನಕ್ಕೆ ಪ್ರೇರಣೆಯಾದ ಹಿರಿಯ ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ ಬಿದರಿ: ಪ್ರಬಂಧ ಮಂಡನೆ

ವೀರಪ್ಪನ್ ಗ್ಯಾಂಗ್‌ನ ವೈರಿ, ಪೊಲೀಸ್ ಅಧಿಕಾರಿ ಶಂಕರ್ ಎಂ ಬಿದರಿ ಇದೀಗ ಡಾಕ್ಟರೇಟ್ ಪ್ರಬಂಧಕ್ಕೆ ಮಂಡಣೆಗೆ ಪ್ರೇರಣೆಯಾಗಿದ್ದಾರೆ. 
ಶಂಕರ್ ಬಿದರಿ
ಶಂಕರ್ ಬಿದರಿ
Updated on

ಬೆಂಗಳೂರು: ವೀರಪ್ಪನ್ ಗ್ಯಾಂಗ್‌ನ ವೈರಿ, ಪೊಲೀಸ್ ಅಧಿಕಾರಿ ಶಂಕರ್ ಎಂ ಬಿದರಿ ಇದೀಗ ಡಾಕ್ಟರೇಟ್ ಪ್ರಬಂಧಕ್ಕೆ ಮಂಡಣೆಗೆ ಪ್ರೇರಣೆಯಾಗಿದ್ದಾರೆ. 

ಮಾಜಿ ಡಿಜಿಪಿ ಮತ್ತು ಪೊಲೀಸ್ ಆಯುಕ್ತರಾಗಿರುವ ಶಂಕರ ಬಿದರಿ ತಮ್ಮ ಕಾಡುಗಳ್ಳ ವೀರಪ್ಪನ್ ಗ್ಯಾಂಗ್ ನ್ನು ಮಟ್ಟಹಾಕಿದ ಕಾರ್ಯಾಚರಣೆಯಿಂದ ಖ್ಯಾತರು. ಮೈಸೂರು ವಿಶ್ವವಿದ್ಯಾನಿಲಯದಿಂದ ತಮ್ಮ ಬಗ್ಗೆ ಡಾಕ್ಟರೇಟ್ ಪ್ರಬಂಧಕ್ಕಾಗಿ ‘ಕರ್ನಾಟಕ ರಾಜ್ಯ ಪೊಲೀಸ್ ಸಂಸ್ಥೆ ಮತ್ತು ಆಡಳಿತ: ಶಂಕರ್ ಎಂ ಬಿದರಿ ಅವರ ಕೊಡುಗೆ, ಅಧ್ಯಯನ’ ಕುರಿತು ಅಧ್ಯಯನ ಮಾಡಲು ವಿದ್ವಾಂಸರನ್ನು ಪ್ರೇರೇಪಿಸಿದ್ದಾರೆ.

ಇದರಲ್ಲಿ ಪಿಹೆಚ್ ಡಿ ಮಾಡಿದವರು ಶಿಕ್ಷಣ ತಜ್ಞ ನವೀನ್ ಕುಮಾರ್ ಎಂ ಬಿ. ಬಿದರಿಯವರ ಬಗ್ಗೆ ಮೂರೂವರೆ ವರ್ಷಗಳ ಅಧ್ಯಯನ ಮಾಡಿದ ನಂತರ ಪ್ರಬಂಧ ಮಂಡನೆ ಮಾಡಿದ್ದಾರೆ. ಬಿದರಿಯವರು 1978ರಲ್ಲಿ ಐಪಿಎಸ್‌ಗೆ ಸೇರಿ 2012ರಲ್ಲಿ ನಿವೃತ್ತಿಯಾಗುವವರೆಗೆ 34 ವರ್ಷಗಳ ಕಾಲ ಸೇವೆ ಸಲ್ಲಿಸಿದರು.

ಕರ್ನಾಟಕದಲ್ಲಿ ಇಲ್ಲಿಯವರೆಗೂ ಯಾವೊಬ್ಬ ಪೊಲೀಸ್‌ ಅಧಿಕಾರಿಯೂ ಪಿಎಚ್‌ಡಿ ಪ್ರಬಂಧಕ್ಕೆ ಪ್ರೇರಣೆ ನೀಡಿಲ್ಲ ಎಂಬುದು ನಿಜವಾದರೂ, ನಿವೃತ್ತಿಯಾದ ಹಲವು ವರ್ಷಗಳ ನಂತರವೂ ಸ್ಪೂರ್ತಿ ತುಂಬಿದವರು ಬಿದರಿಯವರು. ಶಿಕ್ಷಣ ತಜ್ಞ, ವಿದ್ವಾಂಸರೊಬ್ಬರು ಪೊಲೀಸ್ ಸೇವೆಗೆ ಬಿದರಿ ಅವರ ಅಪ್ರತಿಮ ಕೊಡುಗೆಯನ್ನು ಅಧ್ಯಯನ ಮಾಡಿದ್ದು ನಿಜಕ್ಕೂ ಶ್ಲಾಘನೀಯ ಎಂದು ಎಂಎಂ ಹಿಲ್ಸ್‌ನಲ್ಲಿ ಬಿದರಿ ಅವರ ತಂಡದೊಂದಿಗೆ ಕೆಲಸ ಮಾಡಿದ ಇನ್ನೊಬ್ಬ ಖ್ಯಾತ ಪೊಲೀಸ್ ಅಧಿಕಾರಿ, ಡಿಸಿಪಿ (ನಿವೃತ್ತ) ಬಿ ಎಂ ಪೂಣಚ ಹೇಳುತ್ತಾರೆ. 

ಕುಖ್ಯಾತ ಕಾಡುಗಳ್ಳ ವೀರಪ್ಪನ್ ಗ್ಯಾಂಗ್ ನ್ನು ನಾಶಪಡಿಸಿದವರಲ್ಲಿ ಬಿದರಿಯವರು ಹೆಚ್ಚು ಜನಪ್ರಿಯರು. ವೀರಪ್ಪನ್ ಗ್ಯಾಂಗ್ ಸಂಖ್ಯೆಯನ್ನು 200 ರಿಂದ ಕೇವಲ ಐದು ಜನರಿಗೆ ಅವರು ಇಳಿಸಿದ್ದರು. ಬಿದರಿಯವರು ತಮ್ಮ ವೃತ್ತಿಜೀವನದಲ್ಲಿ ಅತ್ಯಂತ ಕಷ್ಟಕರವಾದ ಸಂದರ್ಭ, ಸನ್ನಿವೇಶಗಳನ್ನು ನಿಭಾಯಿಸಿದ್ದಾರೆ. 

ಬಾಬರಿ ಮಸೀದಿ ಕೆಡವಿದ್ದ ಸಮಯದಲ್ಲಿ ಎಸ್ಪಿಯಾಗಿ ಬಳ್ಳಾರಿಯನ್ನು ಕೋಮು ಗಲಭೆ ಘಟನೆಗಳಿಂದ ಮುಕ್ತಗೊಳಿಸಿದ್ದಕ್ಕಾಗಿ ಇವರನ್ನು ಜನ ನೆನಪಿಸಿಕೊಳ್ಳುತ್ತಾರೆ. ಆ ಸಮಯದಲ್ಲಿ ಕರ್ನಾಟಕದ ಹೆಚ್ಚಿನ ಜಿಲ್ಲೆಗಳು ಭಾರೀ ಕೋಮು ಗಲಭೆಗಳಿಗೆ ಸುದ್ದಿಯಾಗಿದ್ದವು.

ಕರ್ನಾಟಕದ ಪೊಲೀಸ್ ಅಧಿಕಾರಿಗಳಲ್ಲಿ ಅತಿ ಹೆಚ್ಚು ಬಾರಿ ಗೌರವಕ್ಕೆ ಪಾತ್ರರಾದ ಅಧಿಕಾರಿಗಳಲ್ಲಿ ಶಂಕರ್ ಬಿದರಿ ಕೂಡ ಒಬ್ಬರು. ಎರಡು ಬಾರಿ ಶೌರ್ಯ ಪದಕವನ್ನು ಪಡೆದು ಇತಿಹಾಸ ನಿರ್ಮಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com