ನಿವೃತ್ತ ಡಿಜಿ-ಐಜಿಪಿ ಶಂಕರ್ ಬಿದರಿಗೆ ಸೈಬರ್ ವಂಚನೆ: 89 ಸಾವಿರ ರೂ. ವಂಚಿಸಿದ ಖದೀಮರು!

ನಿವೃತ್ತ ಡಿಜಿ ಮತ್ತು ಐಜಿಪಿ ಶಂಕರ್ ಬಿದರಿಯ ಅವರಿಗೆ ಬ್ಯಾಂಕ್ ಅಧಿಕಾರಿ ಸೋಗಿನಲ್ಲಿ ವಂಚಿಸಲಾಗಿದೆ.
ಶಂಕರ್ ಬಿದರಿ
ಶಂಕರ್ ಬಿದರಿ

ಬೆಂಗಳೂರು: ನಿವೃತ್ತ ಡಿಜಿ ಮತ್ತು ಐಜಿಪಿ ಶಂಕರ್ ಬಿದರಿಯ ಅವರಿಗೆ ಬ್ಯಾಂಕ್ ಅಧಿಕಾರಿ ಸೋಗಿನಲ್ಲಿ ವಂಚಿಸಲಾಗಿದೆ.

ಬ್ಯಾಂಕ್ ಅಧಿಕಾರಿ ಸೋಗಿನಲ್ಲಿ ಶಂಕರ್ ಬಿದರಿಗೆ ಕರೆಮಾಡಿ ಕಳ್ಳರು ವಂಚಿಸಿದ್ದಾರೆ. 

ನಿಮ್ಮ ಅಕೌಂಟ್​​ಗೆ ಪಾನ್​ ಕಾರ್ಡ್​ ಲಿಂಕ್​ ಮಾಡಬೇಕು. ಲಿಂಕ್ ಮಾಡದಿದ್ದರೆ ಖಾತೆ ಸ್ಥಗಿತಗೊಳಿಸಲಾಗುವುದು ಎಂದು ಹೇಳಿ ಒಟಿಪಿ ಪಡೆದು ಅಕೌಂಟ್​​ನಲ್ಲಿದ್ದ 89 ಸಾವಿರ ರೂ. ವಂಚನೆ ಮಾಡಿದ್ದಾರೆ. 

ಪ್ರಕರಣಕ್ಕೆ ಸಂಬಂಧಿಸಿದಂತೆ ಆಗ್ನೇಯ ವಿಭಾಗದ ಸಿಇಎನ್ ಠಾಣೆಯಲ್ಲಿ ಶಂಕರ್ ಬಿದರಿ ದೂರು‌ ನೀಡಿದ್ದಾರೆ. ಬಿದರಿ ದೂರಿನ ಮೇರೆಗೆ ಪೊಲೀಸರು ಎಫ್​ಐಆರ್ ದಾಖಲಾಗಿದ್ದು, ಪೊಲೀಸರ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com