ಚಿನ್ನದ ಮೊಬೈಲ್ ಕವರ್
ಚಿನ್ನದ ಮೊಬೈಲ್ ಕವರ್

ಚಿನ್ನದ ಮೊಬೈಲ್ ಕವರ್! ಬೆಂಗಳೂರು ವಿಮಾನ ನಿಲ್ದಾಣದಲ್ಲಿ 1.5 ಕೆಜಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ವ್ಯಕ್ತಿ ವಶಕ್ಕೆ

ದುಬೈನಿಂದ ಬೆಂಗಳೂರಿಗೆ 1.5 ಕೆಜಿ ಚಿನ್ನ ಕಳ್ಳಸಾಗಣೆ ಮಾಡಲು ಯತ್ನಿಸಿದ 30 ವರ್ಷದ ವ್ಯಕ್ತಿಯನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್‌ಐ)ದ ಅಧಿಕಾರಿಗಳು ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದು. ಆ ಚಿನ್ನದ ಮೌಲ್ಯ ಸುಮಾರು 50 ಲಕ್ಷ ...

ಬೆಂಗಳೂರು: ದುಬೈನಿಂದ ಬೆಂಗಳೂರಿಗೆ 1.5 ಕೆಜಿ ಚಿನ್ನ ಕಳ್ಳಸಾಗಣೆ ಮಾಡಲು ಯತ್ನಿಸಿದ 30 ವರ್ಷದ ವ್ಯಕ್ತಿಯನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್‌ಐ)ದ ಅಧಿಕಾರಿಗಳು ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದು. ಆ ಚಿನ್ನದ ಮೌಲ್ಯ ಸುಮಾರು 50 ಲಕ್ಷ ರೂಪಾಯಿ ಎನ್ನಲಾಗಿದೆ. ಈ ವ್ಯಕ್ತಿ ಜಾಣತನದಿಂದ ಚಿನ್ನದ ಪೇಸ್ಟ್ ನಿಂದ ಮೊಬೈಲ್ ಕೇಸ್ ತಯಾರಿಸಿ ಅದರಲ್ಲಿ ಮೊಬೈಲ್ ಇಟ್ಟಿದ್ದರು.

ಮೂಲಗಳ ಪ್ರಕಾರ, ಜೂನ್ 14 ರ ರಾತ್ರಿ ವ್ಯಕ್ತಿಯೊಬ್ಬರು ದುಬೈನಿಂದ ವಿಮಾನದಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಚಿನ್ನವನ್ನು ತರುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಡಿಆರ್‌ಐ ಅಧಿಕಾರಿಗಳು ಈ ವ್ಯಕ್ತಿಯನ್ನು ವಶಪಡಿಸಿಕೊಂಡಿದ್ದಾರೆ.

“ಕೇರಳದ ಕಾಸರಗೋಡು ಮೂಲದ ಈ ವ್ಯಕ್ತಿ(ಹೆಸರು ಹೇಳಲಾಗಿಲ್ಲ) ಪ್ರಯಾಣಿಸುತ್ತಿದ್ದ ಏರೋಬ್ರಿಡ್ಜ್‌ ವಿಮಾನದಿಂದ ಇಳಿದ ತಕ್ಷಣ ಅಧಿಕಾರಿಗಳು ವಶಕ್ಕೆ ಪಡೆದು ತೀವ್ರ ತಪಾಸಣೆ ನಡೆಸಿದ್ದಾರೆ. ಈ ವೇಳೆ ಫೋನ್ ಕೇಸ್ ಹೆಚ್ಚು ಭಾರವಾಗಿತ್ತು ಮತ್ತು ಪ್ಲಾಸ್ಟಿಕ್ ಕೇಸ್‌ನಲ್ಲಿ ಪೇಸ್ಟ್ ರೂಪದಲ್ಲಿದ್ದ ಚಿನ್ನವನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ ”ಎಂದು ಮೂಲಗಳು ತಿಳಿಸಿವೆ.

ಆ ವ್ಯಕ್ತಿ ಚಿನ್ನದ ಕೇಸ್ ನಲ್ಲಿ ತನ್ನ ಫೋನ್ ಅನ್ನು ಇರಿಸಿದ್ದರು. "ಇದರಿಂದ ಸಾಮಾನ್ಯ ಬ್ಯಾಗೇಜ್ ಸ್ಕ್ರೀನಿಂಗ್ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳಬಹುದು ಮತ್ತು ಮೊಬೈಲ್ ಕೇಸ್ ಕವರ್ ಮಾತ್ರ ಎಂದು ತಪ್ಪಾಗಿ ಗ್ರಹಿಸಬಹುದು" ಎಂದು ಮೂಲವೊಂದು ತಿಳಿಸಿದೆ.

ಬೆಂಗಳೂರಿನಿಂದ ಕೇರಳಕ್ಕೆ ಬಸ್ ಮೂಲಕ ಈ ಚಿನ್ನವನ್ನು ಸಾಗಿಸಲು ಈ ವ್ಯಕ್ತಿ ಯೋಜಿಸಿದ್ದರು ಎಂದು ತಿಳಿದು ಬಂದಿದೆ. ನಂತರ ಅಪರಿಚಿತ ವ್ಯಕ್ತಿಯೊಬ್ಬರು ಅವರ ಮನೆಯಲ್ಲಿ ಅವರನ್ನು ಭೇಟಿಯಾಗಬೇಕಿತ್ತು ಮತ್ತು ಅವರಿಂದ ಪ್ಯಾಕೇಜ್ ಪಡೆಯಬೇಕಿತ್ತು ಎಂದು ಮೂಲಗಳು ತಿಳಿಸಿವೆ. ಆತನ ವಿರುದ್ಧ ಕಸ್ಟಮ್ಸ್ ಆಕ್ಟ್ ಸೆಕ್ಷನ್ 111 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com