ಬೆಂಗಳೂರು: ಜೈಲಿನಲ್ಲಿರುವ ಮಗನಿಗೆ ಮಾದಕ ವಸ್ತು ನೀಡಲು ಹೋದ ತಾಯಿಯು ಜೈಲು ಸೇರಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಜೈಲಿನಲ್ಲಿದ್ದ ಮಗನನ್ನು ಭೇಟಿಯಾಗಿ ಬಟ್ಟೆ ಕೊಡುವ ನೆಪದಲ್ಲಿ ಮಾದಕ ವಸ್ತುವಾದ ಹ್ಯಾಶಿಷ್ ಆಯಿಲ್ ನೀಡಲು ಯತ್ನಿಸಿದ್ದ ತಾಯಿಯನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ಪರ್ವೀನ್ ತಾಜ್ ಬಂಧಿತ ಮಹಿಳೆಯಾಗಿದ್ದಾಳೆ.
ಈಕೆಯ ಮಗ ಮೊಹಮ್ಮದ್ ಬಿಲಾಲ್ ಎಂಬಾತ ರಾಬರಿ ಸೇರಿದಂತೆ 11 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಹೀಗಾಗಿ ಕೋಣನಕುಂಟೆ ಪೊಲೀಸರು ಬಿಲಾನ್ ನನ್ನ ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗಟ್ಟಿದ್ದರು. ತಾಯಿ-ಮಗ ಶಿಕಾರಿಪಾಳ್ಯದಲ್ಲಿ ವಾಸವಾಗಿದ್ದರು. ಮಗನನ್ನ ನೋಡಲು ಆಗಾಗ ಪರ್ವೀನ್ ಜೈಲಿಗೆ ಬರುತ್ತಿದ್ದಳು. ಆದರೆ ಕಳೆದ ಜೂನ್ 13ರಂದು ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದ ಈಕೆ ಮಗನಿಗೆ ಬಟ್ಟೆ ಕೊಡುವ ನೆಪದಲ್ಲಿ ಊಟದ ಬಾಕ್ಸ್ ನಲ್ಲಿ 5 ಲಕ್ಷ ಮೌಲ್ಯದ ಹ್ಯಾಶಿಷ್ ಆಯಿಲ್ ತಂದಿದ್ದಳು.
ತಾಯಿ-ಮಗ ಶಿಕಾರಿಪಾಳ್ಯದಲ್ಲಿ ವಾಸವಾಗಿದ್ದರು. ಮಗನನ್ನು ನೋಡಲು ಆಗಾಗ ಪರ್ವೀನ್ ಜೈಲಿಗೆ ಬರುತ್ತಿದ್ದಳು. ಆದರೆ ಕಳೆದ ಜೂನ್ 13ರಂದು ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದ ಈಕೆ ಮಗನಿಗೆ ಬಟ್ಟೆ ಕೊಡುವ ನೆಪದಲ್ಲಿ ಊಟದ ಬಾಕ್ಸ್‌ನಲ್ಲಿ 5 ಲಕ್ಷ ಮೌಲ್ಯದ ಹ್ಯಾಶಿಷ್ ಆಯಿಲ್ ತಂದಿದ್ದಳು.
ಜೈಲು ಸಿಬ್ಬಂದಿ ಈಕೆಯನ್ನು ಪರಿಶೀಲಿಸಿದ ವೇಳೆ ಬಟ್ಟೆಯ ಜೊತೆಯಲ್ಲಿ ಮಾದಕ ವಸ್ತು ಪತ್ತೆಯಾಗಿತ್ತು. ತಕ್ಷಣ ಜೈಲು ಸಿಬ್ಬಂದಿ ಪರಪ್ಪನ ಅಗ್ರಹಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಆರೋಪಿ ತಾಯಿ ಪರ್ವೀನ್ ತಾಜ್ ಹಾಗೂ ಮಗ ಬಿಲಾಲ್ ಮೇಲೆ ಕೇಸ್ ದಾಖಲಿಸಿರುವ ಪರಪ್ಪನ ಅಗ್ರಹಾರ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ನನಗೆ ಯಾರೋ ಪೋನ್ ಮಾಡಿ ಜೈಲಿನಲ್ಲಿರುವ ವ್ಯಕ್ತಿಗೆ ಮಗನ ಮುಖಾಂತರ ಬಟ್ಟೆಯ ಬ್ಯಾಗ್ ನೀಡಬೇಕೆಂದು ಎಂದು ಪೋನ್ ಮಾಡಿದ್ದರು. ಇದರಂತೆ ನಾನು ಬ್ಯಾಗ್ ನೀಡಲು ಒಪ್ಪಿಕೊಂಡೆ. ಬ್ಯಾಗ್‌ನಲ್ಲಿ ಡ್ರಗ್ಸ್ ಇರುವುದು ಗೊತ್ತಿರಲಿಲ್ಲ ಎಂದು ಹೇಳಿಕೆ ನೀಡಿದ್ದಾಳೆ. ಈಕೆ ಹೇಳಿಕೆ ಮೇರೆಗೆ ಫೋನ್ ಬಂದಿದ್ದ ಮೊಬೈಲ್ ನಂಬರ್ ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Advertisement