ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಸರ್ಕಾರ ಮುಕ್ತ, ಕರ್ನಾಟಕ, ದೇಶ ಕಟ್ಟುವ ಕೆಲಸ ಮಾಡಿದವರಿಗೆ ಗೌರವ: ಸಿಎಂ ಬೊಮ್ಮಾಯಿ

ಹಲವಾರು ಸಾಹಿತಿಗಳು, ಮಾಜಿ ಪ್ರಧಾನಿ ದೇವೇಗೌಡರು, ಇತರೆ ಹಿರಿಯರು, ಸ್ವಾಮೀಜಿಗಳು ಪಠ್ಯಪುಸ್ತಕ ಪರಿಷ್ಕರಣೆ ಕುರಿತು ಹೇಳಿರುವ ಸಲಹೆ-ಸೂಚನೆಗಳು, ಮನವಿಗಳನ್ನು ತರಿಸಿಕೊಂಡು ಯಾವ ಬದಲಾವಣೆಗಳನ್ನು ಮಾಡಬೇಕೋ ಸರ್ಕಾರ ಮುಕ್ತವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ
Updated on

ಬೆಂಗಳೂರು: ಹಲವಾರು ಸಾಹಿತಿಗಳು, ಮಾಜಿ ಪ್ರಧಾನಿ ದೇವೇಗೌಡರು, ಇತರೆ ಹಿರಿಯರು, ಸ್ವಾಮೀಜಿಗಳು ಪಠ್ಯಪುಸ್ತಕ ಪರಿಷ್ಕರಣೆ ಕುರಿತು ಹೇಳಿರುವ ಸಲಹೆ-ಸೂಚನೆಗಳು, ಮನವಿಗಳನ್ನು ತರಿಸಿಕೊಂಡು ಯಾವ ಬದಲಾವಣೆಗಳನ್ನು ಮಾಡಬೇಕೋ ಸರ್ಕಾರ ಮುಕ್ತವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪಠ್ಯಪುಸ್ತಕ ಪರಿಷ್ಕರಣೆ ವಿಚಾರವನ್ನು ಸರ್ಕಾರ ಪ್ರತಿಷ್ಠೆಯಾಗಿ ತೆಗೆದುಕೊಂಡಿಲ್ಲ. ಈಗಾಗಲೇ ವೆಬ್ ಸೈಟ್ ಲ್ಲಿ ಹಾಕಿದ್ದು, ಆಕ್ಷೇಪವಿದ್ಧರೆ ಪರಿಗಣನೆಗೆ ತೆಗೆದುಕೊಳ್ಳುತ್ತೇವೆ. ಭಾರತವನ್ನು, ಕರ್ನಾಟಕವನ್ನು ಕಟ್ಟಲು ಶ್ರಮಿಸಿರುವಂತಹ ಹಿರಿಯರು, ರಾಜ-ಮಹಾರಾಜರು, ಸಾಹಿತಿಗಳು, ಕಲಾವಿದರು ಇವರ ಬಗ್ಗೆ ಅಪಾರವಾದ ಗೌರವ, ಯಾವುದೇ ಕಾರಣಕ್ಕೂ ಅವರ ಗೌರವಕ್ಕೆ ಚ್ಯುತಿ ತರುವ ಕೆಲಸ ಸರ್ಕಾರ ಮಾಡುವುದಿಲ್ಲ. ಕರ್ನಾಟಕದ ಘನತೆ-ಗೌರವಗಳನ್ನು ಪಠ್ಯಪುಸ್ತಕದಲ್ಲಿಯೂ ಉಳಿಸಿಕೊಂಡು ಹೋಗುತ್ತೇವೆ ಎಂದು ಸ್ಪಷ್ಟಪಡಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com