ಸಚಿವ ಮುರುಗೇಶ್ ನಿರಾಣಿ
ಸಚಿವ ಮುರುಗೇಶ್ ನಿರಾಣಿ

ಹೊಸ ಅಂತರಿಕ್ಷ ಮತ್ತು ರಕ್ಷಣಾ ನೀತಿಯಡಿ ರಕ್ಷಣಾ ಉತ್ಪಾದನೆಯಲ್ಲಿ ಕರ್ನಾಟಕ ಮುನ್ನಡೆ: ಸಚಿವ ನಿರಾಣಿ

ನವೆಂಬರ್ 2, 3, 4 ರಂದು ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ (ಜಿಐಎಂ) ಕೇವಲ ನಾಲ್ಕು ತಿಂಗಳುಗಳು ಬಾಕಿ ಉಳಿದಿದ್ದು, ಕರ್ನಾಟಕ ಕೈಗಾರಿಕೆ ಇಲಾಖೆಯು ಅಂತರಿಕ್ಷ ಮತ್ತು ರಕ್ಷಣಾ ನೀತಿ(Aerospace and defence)(A and D) (2022-27) ನ್ನು ರಾಜ್ಯದಲ್ಲಿ ಸ್ಥಾಪಿಸುವ ಗುರಿಯನ್ನು ಹೊಂದಿದೆ.
Published on

ಬೆಂಗಳೂರು: ನವೆಂಬರ್ 2, 3, 4 ರಂದು ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ (ಜಿಐಎಂ) ಕೇವಲ ನಾಲ್ಕು ತಿಂಗಳುಗಳು ಬಾಕಿ ಉಳಿದಿದ್ದು, ಕರ್ನಾಟಕ ಕೈಗಾರಿಕೆ ಇಲಾಖೆಯು ಅಂತರಿಕ್ಷ ಮತ್ತು ರಕ್ಷಣಾ ನೀತಿ(Aerospace and defence)(A and D) (2022-27) ನ್ನು ರಾಜ್ಯದಲ್ಲಿ ಸ್ಥಾಪಿಸುವ ಗುರಿಯನ್ನು ಹೊಂದಿದೆ.

ಅಂತರಿಕ್ಷ ಮತ್ತು ರಕ್ಷಣೆ ಉತ್ಪಾದನೆಗೆ ಕರ್ನಾಟಕ ಆದ್ಯತೆಯ ಹೂಡಿಕೆ ತಾಣವಾಗಿದೆ. ರಕ್ಷಣಾ ಸಚಿವಾಲಯವು 2027 ರ ವೇಳೆಗೆ ಶಸ್ತ್ರಾಸ್ತ್ರಗಳಲ್ಲಿ ಶೇಕಡಾ 70 ರಷ್ಟು ಸ್ವಾವಲಂಬನೆಯ ಗುರಿಯನ್ನು ಹೊಂದಿದ್ದು, ಈ ಕ್ಷೇತ್ರದ ಉದ್ಯಮಿಗಳಿಗೆ ಭಾರೀ ನಿರೀಕ್ಷೆಯನ್ನು ಹುಟ್ಟಿಸಿದೆ.

ಮುಂದಿನ ಐದು ವರ್ಷಗಳ ನೀತಿಯ ಅವಧಿಯಲ್ಲಿ ಏರೋಸ್ಪೇಸ್ ಮತ್ತು ರಕ್ಷಣಾ ವಲಯದಲ್ಲಿ 60,000 ಕೋಟಿ ರೂಪಾಯಿಗಳ (USD 6 ಶತಕೋಟಿ) ಹೂಡಿಕೆಯನ್ನು ಆಕರ್ಷಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ. ಹೆಚ್ಚುವರಿ 70,000 ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಮತ್ತು ರಾಜ್ಯವನ್ನು ಉತ್ಪಾದನಾ ಕೇಂದ್ರವಾಗಿ ಅಭಿವೃದ್ಧಿಪಡಿಸುವುದು, ಭಾರತೀಯ ಮಾರುಕಟ್ಟೆ ಮತ್ತು ರಫ್ತು ಎರಡಕ್ಕೂ ಬಾಹ್ಯಾಕಾಶ ಅಪ್ಲಿಕೇಶನ್‌ಗಳು ಅಂತರಿಕ್ಷ ಮತ್ತು ರಕ್ಷಣಾ ನೀತಿಯ ಕೆಲವು ಪ್ರಮುಖ ಲಕ್ಷಣಗಳಾಗಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಮುರುಗೇಶ್ ನಿರಾಣಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾರತದ ಪ್ರಸ್ತುತ ಮಾರುಕಟ್ಟೆ ಗಾತ್ರ ಸುಮಾರು 7 ಬಿಲಿಯನ್ ಡಾಲರ್ ಗಳಾಗಿದ್ದು, 2032ರ ವೇಳೆಗೆ 15 ಶತಕೋಟಿ ಡಾಲರ್ ಗೆ ತಲುಪಲು ಶೇಕಡಾ 7.5ರಷ್ಟು ಬೆಳೆಯುವ ನಿರೀಕ್ಷೆಯಿದೆ ಎಂದು ಮುರುಗೇಶ್ ನಿರಾಣಿ ತಿಳಿಸಿದ್ದಾರೆ. ಕರ್ನಾಟಕವು ರಕ್ಷಣಾ ಎಲೆಕ್ಟ್ರಾನಿಕ್ಸ್ ವ್ಯವಸ್ಥೆಗಳು/ಉತ್ಪನ್ನಗಳಲ್ಲಿ ಶೇಕಡಾ 40ರಷ್ಟು ಪ್ರಮುಖ ಪಾಲನ್ನು ಒದಗಿಸುತ್ತದೆ. ಇದಕ್ಕೆ ಉತ್ತೇಜನ ನೀಡಲು ಅಂತರಿಕ್ಷ ಮತ್ತು ರಕ್ಷಣಾ ನೀತಿಯು ಬಾಹ್ಯಾಕಾಶ, ರಕ್ಷಣಾ ಮತ್ತು ಏರೋಸ್ಪೇಸ್ ತಯಾರಕರು ಮತ್ತು ಇತರ ಉಪ-ವಲಯಗಳಿಗೆ ಬೃಹತ್ ಭೂಮಿ ಮತ್ತು ಆರ್ಥಿಕ ಪ್ರೋತ್ಸಾಹದ ಪ್ಯಾಕೇಜ್‌ಗಳನ್ನು ನೀಡುತ್ತದೆ.

ಆಧುನಿಕ ಯುದ್ಧ ವ್ಯವಸ್ಥೆಗಳಲ್ಲಿ ಎಲೆಕ್ಟ್ರಾನಿಕ್ಸ್ ಪ್ರಾಥಮಿಕ ಸಾಮರ್ಥ್ಯವಾಗಿದ್ದು, ಪ್ರಮುಖ ವೇದಿಕೆಗಳಲ್ಲಿ ಶೇಕಡಾ 40ಕ್ಕಿಂತ ಹೆಚ್ಚಿನ ಕೊಡುಗೆ ನೀಡುತ್ತದೆ. ಅಂತರಿಕ್ಷ ಮತ್ತು ರಕ್ಷಣಾ ನೀತಿಯ ಅಡಿಯಲ್ಲಿ, ರಾಜ್ಯವು 5 ಏರೋಸ್ಪೇಸ್ ಮತ್ತು ಡಿಫೆನ್ಸ್ ಹಬ್‌ಗಳನ್ನು ಅಭಿವೃದ್ಧಿಪಡಿಸುತ್ತದೆ ಅವುಗಳೆಂದರೆ ಬೆಂಗಳೂರು, ಬೆಳಗಾವಿ, ಮೈಸೂರು, ತುಮಕೂರು ಮತ್ತು ಚಾಮರಾಜನಗರ. 

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಹರಳೂರಿನ ಎ & ಡಿ ಪಾರ್ಕ್‌ನ 2 ನೇ ಹಂತಕ್ಕೆ ಇಲಾಖೆ ಈಗಾಗಲೇ 1,200 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸುತ್ತಿದೆ. ಕರ್ನಾಟಕ ಕೈಗಾರಿಕಾ ನೀತಿ (2020-25) ಪ್ರಕಾರ A&D ಪಾರ್ಕ್ ಡೆವಲಪರ್‌ಗಳಿಗೆ ಆರ್ಥಿಕ ಪ್ರೋತ್ಸಾಹವನ್ನು ನಿಗದಿಪಡಿಸಲಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com