ಮೈಸೂರು: ಮೋದಿ ಹೆಲಿಪ್ಯಾಡ್'ನಿಂದಾಗಿ ಕ್ರೀಡಾಪಟುಗಳ 'ಟ್ರ್ಯಾಕ್' ನಾಶ!

ಆರೋಗ್ಯ ಮತ್ತು ಫಿಟ್‌ನೆಸ್‌ನ ಮಹತ್ವವನ್ನು ಸಾರಿದ ಪ್ರಧಾನಿ ನರೇಂದ್ರ ಮೋದಿ ಅವರು, ಜೂನ್.21ರಂದು ಮೈಸೂರಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಚಾಲನೆ ನೀಡಿದರು. ಆದರೆ ಓವಲ್ ಮೈದಾನದಲ್ಲಿ ಅವರಿಗಾಗಿ ಸಿದ್ಧಪಡಿಸಿದ ಹೆಲಿಪ್ಯಾಡ್ ಅಥ್ಲೀಟ್ ಗಳು ತರಬೇತಿ ಪಡೆಯುತ್ತಿದ್ದ...
ಹೆಲಿಪ್ಯಾಡ್ ನಿಂದ ನಾಶಗೊಂಡಿರುವ ಪ್ರದೇಶ.
ಹೆಲಿಪ್ಯಾಡ್ ನಿಂದ ನಾಶಗೊಂಡಿರುವ ಪ್ರದೇಶ.

ಮೈಸೂರು: ಆರೋಗ್ಯ ಮತ್ತು ಫಿಟ್‌ನೆಸ್‌ನ ಮಹತ್ವವನ್ನು ಸಾರಿದ ಪ್ರಧಾನಿ ನರೇಂದ್ರ ಮೋದಿ ಅವರು, ಜೂನ್.21ರಂದು ಮೈಸೂರಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಚಾಲನೆ ನೀಡಿದರು. ಆದರೆ ಓವಲ್ ಮೈದಾನದಲ್ಲಿ ಅವರಿಗಾಗಿ ಸಿದ್ಧಪಡಿಸಿದ ಹೆಲಿಪ್ಯಾಡ್ ಅಥ್ಲೀಟ್ ಗಳು ತರಬೇತಿ ಪಡೆಯುತ್ತಿದ್ದ ಪ್ರದೇಶವನ್ನು ನಾಶಪಡಿಸಿದೆ. ಇದರಿಂದ ಸೂಕ್ತ ರೀತಿಯಲ್ಲಿ ತರಬೇತಿ ಪಡೆಯಲಾಗದೆ ಅಥ್ಲೀಟ್ ಗಳು ಸಂಕಷ್ಟಕ್ಕೆ ಸಿಲುಕಿದಂತಾಗಿದೆ.

ಮೋದಿ ಅವರನ್ನು ಹೆಲಿಕಾಪ್ಟರ್‌'ನಿಂದ ಇಳಿಸಿಲು ಓವಲ್‌ ಮೈದಾನದ ಸ್ಥಳದಿಂದ 100 ಮೀಟರ್‌ ದೂರದಲ್ಲಿ ತಾತ್ಕಾಲಿಕ ಹೆಲಿಪ್ಯಾಡ್‌ ಸಿದ್ಧಪಡಿಸಲಾಗಿತ್ತು. ಇಲ್ಲಿಂದ ಮೋದಿಯವರು ಮಹಾರಾಜ ಮೈದಾನಕ್ಕೆ ತೆರಳಿ ಅಲ್ಲಿ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ್ದರು.

ಹೆಲಿಪ್ಯಾಡ್ ನಿರ್ಮಿಸಿದ್ದ ಸ್ಥಳ ನಾಶಗೊಂಡಿದ್ದು, ಇದರಿಂದ ಕ್ರೀಡಾಪಟುಗಳು ಸೂಕ್ತ ರೀತಿಯಲ್ಲಿ ಅಭ್ಯಾಸ ಮಾಡಲು ಸಾಧ್ಯವಾಗದೆ ಸಮಸ್ಯೆಗಳು ಎದುರಾಗಿದೆ.

ಹಾನಿಗೊಳಗಾಗಿರುವ ಪ್ರದೇಶದಲ್ಲಿ ವಿಶೇಷವಾಗಿ ಮೈಸೂರು ವಿಶ್ವವಿದ್ಯಾನಿಲಯ ಮತ್ತು ಅದರ ಸಂಯೋಜಿತ ಕಾಲೇಜುಗಳಲ್ಲಿ ಓದುತ್ತಿರುವ ಕ್ರೀಡಾಪಟುಗಳು ಕ್ರೀಡಾಭ್ಯಾಸ ಮಾಡುತ್ತಿದ್ದರು.

ರಾಷ್ಟ್ರೀಯ ಮಟ್ಟದ ಕ್ರೀಡಾ ಪಟು ಮತ್ತು ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯೊಬ್ಬರು ಮಾತನಾಡಿ, ಮೋದಿಯವರ ಭೇಟಿ ಬಳಿಕ ಭೂಮಿ ಅತ್ಯಂತ ಗಟ್ಟಿಯಾಗಿದೆ. “ಪ್ರಧಾನಿ ಅವರು ವಿವಿಧ ಸರ್ಕಾರಿ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಲು ಭೇಟಿ ನೀಡಿದ್ದರು, ಆದರೆ, ವಾಸ್ತವದಲ್ಲಿ ಅವರು ಕ್ರೀಡಾಪಡುಗಳ ಸೌಲಭ್ಯಗಳನ್ನು ಕಸಿದುಕೊಂಡಿದ್ದಾರೆ. ಮೋದಿಯವರು ದೆಹಲಿಗೆ ಹೋಗಿ ಮೂರು ದಿನಗಳಾಗಿವೆ. ಆದರೂ ಇನ್ನೂ ಅಧಿಕಾರಿಗಳು ಭೂಮಿ ಸರಿಪಡಿಸುವ ಕೆಲಸ ಮಾಡಿಲ್ಲ ಎಂದು ಹೇಳಿದ್ದಾರೆ.

ಮೋದಿಯವರ ಬೆಂಗಾವಲು ಪಡೆಗಳ ಕಾರುಗಳು ಚಲಿಸಲು ಕೆಲ ಅನುಕೂಲಗಳನ್ನು ಮಾಡಲಾಗಿತ್ತು. ಆದರೆ, ಇದರಿಂದ ಸ್ಥಳಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಕ್ರಾಫರ್ಡ್ ಹಾಲ್ ಪಕ್ಕದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನ ಸೇರಿದಂತೆ ಇತರೆ ಬಯಲು ಪ್ರದೇಶಗಳಿರುವಾಗ ಓವಲ್ ಮೈದಾನವನ್ನೇಕೆ ಅಧಿಕಾರಿಗಳು ಆಯ್ಕೆ ಮಾಡಿಕೊಂಡರು ಮತ್ತೊಬ್ಬ ಕ್ರೀಡಾಪಟು ಪ್ರಶ್ನಿಸಿದ್ದಾರೆ.

ಈ ನಡುವೆ ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಕೃಷ್ಣಯ್ಯ ಅವರು, ಕ್ರೀಡಾಪಟುಗಳ ತರಬೇತಿ ಪ್ರದೇಶ ನಾಶವಾಗಿರುವ ವರದಿಗಳನ್ನು ನಿರಾಕರಿಸಿದ್ದಾರೆ. ಸ್ಥಳದಲ್ಲಿದ್ದ ಚರಂಡಿಗಳನ್ನು ಮುಚ್ಚಲಾಗಿದ್ದು, ಈ ಬಗ್ಗೆ ಪಿಡಬ್ಲ್ಯುಡಿ ಎಂಜಿನಿಯರ್‌ಗಳಿಗೆ ಮಾಹಿತಿ ನೀಡಲಾಗಿದೆ. ಶೀಘ್ರದಲ್ಲೇ ಸಮಸ್ಯೆಗಳ ಪರಿಹರಿಸುವುದಾಗಿ ಭರವಸೆ ನೀಡಿದ್ದಾರೆಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com