ಬೀಜ ನಿಗಮದಲ್ಲಿನ 'ಗುತ್ತಿಗೆ ಕಾರ್ಮಿಕರ ನೇಮಕಾತಿ' ಅಕ್ರಮ ತನಿಖೆ ಮಾಡಿ: ಸಿಎಜಿಗೆ ಹೈಕೋರ್ಟ್ ಆದೇಶ

ಕೃಷಿ ಇಲಾಖೆ ಅಧೀನದಲ್ಲಿರುವ 'ರಾಜ್ಯ ಸರ್ಕಾರ ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ' (ಕೆಎಸ್‌ಎಸ್‌ಸಿಎಲ್‌) ಗುತ್ತಿಗೆ ಕಾರ್ಮಿಕರನ್ನು ಹೇಗೆ ನೇಮಕ ಮಾಡಿಕೊಳ್ಳುತ್ತಿದೆ ಎಂಬುದರ ಕುರಿತು ತನಿಖೆ ನಡೆಸುವಂತೆ ನಿಯಂತ್ರಣಾಧಿಕಾರಿ ಮತ್ತು ಮಹಾ ಲೆಕ್ಕ ಪರಿಶೋಧಕರಿಗೆ (ಸಿಎಜಿ) ಹೈಕೋರ್ಟ್‌ ನಿರ್ದೇಶನ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೃಷಿ ಇಲಾಖೆ ಅಧೀನದಲ್ಲಿರುವ 'ರಾಜ್ಯ ಸರ್ಕಾರ ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ' (ಕೆಎಸ್‌ಎಸ್‌ಸಿಎಲ್‌) ಗುತ್ತಿಗೆ ಕಾರ್ಮಿಕರನ್ನು ಹೇಗೆ ನೇಮಕ ಮಾಡಿಕೊಳ್ಳುತ್ತಿದೆ ಎಂಬುದರ ಕುರಿತು ತನಿಖೆ ನಡೆಸುವಂತೆ ನಿಯಂತ್ರಣಾಧಿಕಾರಿ ಮತ್ತು ಮಹಾ ಲೆಕ್ಕ ಪರಿಶೋಧಕರಿಗೆ (ಸಿಎಜಿ) ಹೈಕೋರ್ಟ್‌ ನಿರ್ದೇಶನ ನೀಡಿದೆ.

2007ರಿಂದ 2015ರ ನಡುವೆ ಗುತ್ತಿಗೆ ಆಧಾರದ ಮೇಲೆ ನಿಗಮದಲ್ಲಿ ಕೆಲಸ ಮಾಡಿರುವ ಸಿ.ಸುಜಾತಾ ಸಲ್ಲಿಸಿದ್ದ ಒಂದು ಅರ್ಜಿ ಹಾಗೂ ನಿಗಮ ಸಲ್ಲಿಸಿದ್ದ ಇನ್ನೊಂದು ಅರ್ಜಿ ಸೇರಿ ಎರಡು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.

ಒಪ್ಪಂದದ ಮೇಲಿನ ಉದ್ಯೋಗದ ವಿಧಾನವು ನಿಜವಾದ ಮತ್ತು ಪ್ರಾಮಾಣಿಕ ವ್ಯವಹಾರವೇ ಅಥವಾ ನಿಗಮವು ಅಳವಡಿಸಿಕೊಂಡ ಕಾಟಾಚಾರದ ವಿಧಾನವೇ ಎಂಬುದನ್ನು ಸಹ ಸಿಎಜಿ ಪರಿಶೀಲಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ನಿಗಮವು ಅಳವಡಿಸಿಕೊಂಡ ವಿಧಾನಗಳು ಭಾರತದ ಸಂವಿಧಾನದ ಪೀಠಿಕೆಯಲ್ಲಿ ಪ್ರತಿಪಾದಿಸಲಾದ ಕಲ್ಯಾಣ ರಾಜ್ಯದ ತತ್ವಗಳಿಗೆ ವಿರುದ್ಧವಾಗಿದೆಯೇ ಎಂದು ಕಂಡುಹಿಡಿಯಲು ಸಿಎಜಿಯನ್ನು ಸೂಚಿಸಿರುವ ನ್ಯಾಯಾಲಯವು 2023ರ ಅಕ್ಟೋಬರ್ 15 ರೊಳಗೆ ವರದಿ ನೀಡುವಂತೆ ಸಿಎಜಿ ನಿರ್ದೇಶನ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com