ಹೆಸರಘಟ್ಟ ಮೀಸಲು ಪ್ರದೇಶವಾಗಬೇಕು: ಮುಖ್ಯಮಂತ್ರಿಗೆ ಕರ್ನಾಟಕ ವನ್ಯಜೀವಿ ಮಂಡಳಿ ಪತ್ರ

ಹೆಸರಘಟ್ಟ ಹುಲ್ಲುಗಾವಲು ಪ್ರದೇಶವನ್ನು "ಸಂರಕ್ಷಣಾ ಪ್ರದೇಶ" ಎಂದು ಘೋಷಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.
ಹೆಸರಘಟ್ಟ ಹುಲ್ಲುಗಾವಲು ಪ್ರದೇಶದ ಮೇಲೆ ಹಾರಾಡುತ್ತಿದ್ದ ಪಕ್ಷಿ
ಹೆಸರಘಟ್ಟ ಹುಲ್ಲುಗಾವಲು ಪ್ರದೇಶದ ಮೇಲೆ ಹಾರಾಡುತ್ತಿದ್ದ ಪಕ್ಷಿ
Updated on

ಬೆಂಗಳೂರು: ಹೆಸರಘಟ್ಟ ಹುಲ್ಲುಗಾವಲು ಪ್ರದೇಶವನ್ನು "ಸಂರಕ್ಷಣಾ ಪ್ರದೇಶ" ಎಂದು ಘೋಷಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.

ಬೆಂಗಳೂರಿಗೆ ಹುಲ್ಲುಗಾವಲು ಪ್ರದೇಶದ ಪ್ರಾಮುಖ್ಯತೆಯನ್ನು ವಿವರಿಸಿ ನವೆಂಬರ್ 7 ರಂದು ಸಹಿ ಮಾಡಿದ ಮನವಿಯನ್ನು ಮುಖ್ಯಮಂತ್ರಿಗೆ ಕಳುಹಿಸಲಾಗಿದೆ. ಆರು ಪುಟಗಳ ಪತ್ರದಲ್ಲಿ, ಇದು ಜನರನ್ನು ಭೂದೃಶ್ಯದಿಂದ ಹೊರಗಿಡುವುದಿಲ್ಲ ಎಂದು ಸದಸ್ಯರು ವಿವರಿಸಿದ್ದಾರೆ.

ಸಂಪೂರ್ಣ 5,100 ಎಕರೆ ಭೂಮಿಯು ರಾಜ್ಯ ಸರ್ಕಾರಕ್ಕೆ ಸೇರುತ್ತದೆ ಎಂದು ಪತ್ರದಲ್ಲಿ ಪುನರುಚ್ಚರಿಸಿದ್ದಾರೆ. ಇದು 3,500 ಎಕರೆಗಳಲ್ಲಿ ಸರ್ಕಾರಿ ಸಂಸ್ಥೆಗಳನ್ನು ಹೊಂದಿದೆ. ಉಳಿದದ್ದು ಕೆರೆ ಭೂಮಿಯಾಗಿದೆ. ಸಂರಕ್ಷಣಾ ಪ್ರದೇಶ ಎಂದು ಪ್ರಸ್ತಾಪಿಸಿದರೂ, ಸ್ಥಳೀಯ ಸಮುದಾಯಗಳು ಮತ್ತು ಗ್ರಾಮಸ್ಥರಿಂದ ಭೂಮಿಯ ಬಳಕೆ ಮುಂದುವರಿಯುತ್ತದೆ ಎಂದು ಸದಸ್ಯರು ಪ್ರತಿಪಾದಿಸಿದರು.

ಇಲ್ಲಿ ಯಾವುದೇ ಹೊಸ ಬಗೆಗಳನ್ನು ಪರಿಚಯಿಸುವುದಿಲ್ಲ. ಬದಲಿಗೆ ಈಗಿರುವುಗಳನ್ನು ರಕ್ಷಿಸಲೆಂದೆ ಸಂರಕ್ಷಿತ ಪ್ರದೇಶ ಎಂದು ಘೋಷಿಸುವ ಆಲೋಚನೆ ಇದೆ. ರಾಷ್ಟ್ರೀಯ ಉದ್ಯಾನವನದಂತೆ ಈ ಪ್ರದೇಶದ ಸುತ್ತಲೂ ಬಫರ್ ಅಥವಾ ಪರಿಸರ-ಸೂಕ್ಷ್ಮ ವಲಯವನ್ನು ಘೋಷಿಸುವ ಯಾವುದೇ ಆದೇಶವಿಲ್ಲ. ಇದರಿಂದಾಗಿ ಅಸ್ತಿತ್ವದಲ್ಲಿರುವ ಮತ್ತು ಯೋಜಿತ ಹೊಸ ರಚನೆಗಳು ಯಾವುದೇ ಸಮಸ್ಯೆಯನ್ನು ಹೊಂದಿರುವುದಿಲ್ಲ ಎಂದು ರಾಜ್ಯ ವನ್ಯಜೀವಿ ಮಂಡಳಿ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಅವರಿಗೆ ಸದಸ್ಯರು ವಿವರಿಸಿದ್ದಾರೆ.

ಪಶುಸಂಗೋಪನೆ ಮತ್ತು ಅರಣ್ಯ ಇಲಾಖೆಗಳ ಪ್ರಸ್ತಾವನೆ ಮಾತ್ರ ಸಾಕಾಗದ ಕಾರಣ ಸಿಎಂ ಸಾರ್ವಜನಿಕ ಚರ್ಚೆಗೆ ಕರೆದ ಕೆಲವೇ ದಿನಗಳಲ್ಲಿ ಸದಸ್ಯರು ಪತ್ರ ನೀಡಿದ್ದಾರೆ.

ಏನಿದು ಪ್ರಕರಣ?

ಹೆಸರುಘಟ್ಟ ಸುತ್ತಮುತ್ತಲಿನ ಸುಮಾರು 5 ಸಾವಿರ ಎಕರೆ ಪ್ರದೇಶವನ್ನು ಗ್ರೇಟರ್ ಹೆಸರುಘಟ್ಟ ಹುಲ್ಲುಗಾವಲು ಸಂರಕ್ಷಿತ ಪ್ರದೇಶ ಎಂದು ಘೋಷಿಸುವ ಪ್ರಸ್ತಾವವನ್ನು ಕೈಬಿಡಲು ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ 2021ರ ಜನವರಿ 19ರಂದು ನಡೆಸಿದ ಸಭೆಯಲ್ಲಿ ತೀರ್ಮಾನಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

‘ಹೆಸರಘಟ್ಟ ಸುತ್ತಮುತ್ತಲಿನ ಸುಮಾರು 5 ಸಾವಿರ ಎಕರೆ ಪ್ರದೇಶವನ್ನು ಗ್ರೇಟರ್ ಹೆಸರುಘಟ್ಟ ಹುಲ್ಲುಗಾವಲು ಸಂರಕ್ಷಿತ ಪ್ರದೇಶ ಎಂದು ಘೋಷಿಸುವ ಪ್ರಸ್ತಾವವನ್ನು ಕೈಬಿಡುವ ನಿರ್ಧಾರವನ್ನು ಪುನರ್ ಪರಿಶೀಲಿಸಿ’ ಎಂದು ಹೈಕೋರ್ಟ್‌, ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಗೆ (ಕೆಎಸ್‌ಬಿಡಬ್ಲ್ಯುಎಲ್‌) ನಿರ್ದೇಶಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com