ಮೈಸೂರು: ಚಾಮುಂಡಿ ಬೆಟ್ಟದಲ್ಲಿ ನಂದಿ ವಿಗ್ರಹಕ್ಕೆ ಅದ್ಧೂರಿ ಮಹಾಭಿಷೇಕ

ಚಾಮುಂಡಿಬೆಟ್ಟದ ಮೇಲಿನ ಏಕಶಿಲಾ ವಿಗ್ರಹ ಮಹಾ ನಂದಿಗೆ ಭಾನುವಾರ ಮಹಾಭಿಷೇಕ ನೆರವೇರಿತು.
ಚಾಮುಂಡಿಬೆಟ್ಟದ ಮೇಲಿನ ಏಕಶಿಲಾ ವಿಗ್ರಹ ಮಹಾ ನಂದಿಗೆ ಭಾನುವಾರ ಮಹಾಭಿಷೇಕ ನೆರವೇರಿತು.
ಚಾಮುಂಡಿಬೆಟ್ಟದ ಮೇಲಿನ ಏಕಶಿಲಾ ವಿಗ್ರಹ ಮಹಾ ನಂದಿಗೆ ಭಾನುವಾರ ಮಹಾಭಿಷೇಕ ನೆರವೇರಿತು.

ಮೈಸೂರು: ಚಾಮುಂಡಿಬೆಟ್ಟದ ಮೇಲಿನ ಏಕಶಿಲಾ ವಿಗ್ರಹ ಮಹಾ ನಂದಿಗೆ ಭಾನುವಾರ ಮಹಾಭಿಷೇಕ ನೆರವೇರಿತು.

ಸುತ್ತೂರು ಮಠದ ಶ್ರೀ ಶಿವರತ್ರಿ ದೇಶಿಕೇಂದ್ರ ಸ್ವಾಮೀಜಿ ಮತ್ತು ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಈ ಮಹಾಭಿಷೇಕವನ್ನು ಬೆಟ್ಟದ ಬಳಗ ಚಾರಿಟಬಲ್ ಟ್ರಸ್ಟ್ ನವರು ಆಯೋಜಿಸಿದ್ದರು.

ಅನೇಕ ವರ್ಷಗಳಿಂದ ಪ್ರತಿವರ್ಷದ ಕಾರ್ತಿಕ ಮಾಸದಲ್ಲಿ ಟ್ರಸ್ಟ್ ವತಿಯಿಂದ ಮಹಾಭಿಷೇಕ ಆಯೋಜಿಸುತ್ತಿದ್ದು, ಇದು 17ನೇ ಬಾರಿಗೆ ಆಯೋಜಿಸಲಾಗಿದೆ. ಮಹಾನಂದಿಗೆ 32 ಬಗೆಯ ಪೂಜೆ ನೆರವೇರಿಸಲಾಯಿತು.

ವಿವಿಧ ಹಣ್ಣು, ಹಾಲು, ಚಂದನ, ಶ್ರೀಗಂಧ, ಬಿಲ್ವಪತ್ರೆ, ಖರ್ಜೂರ, ಕೊಬ್ಬರಿ ಹರಿಶಿಣ ಮತ್ತು ಕುಂಕುಮದಿಂದ ಅಭಿಷೇಕ ನೆರವೇರಿಸಲಾಯಿತು. ನಂತರ ಕೊನೆಯಲ್ಲಿ ಜಲಾಭಿಷೇಕದೊಡನೆ ಮಹಾಭಿಷೇಕವನ್ನು ಸಮಾಪ್ತಿಗೊಳಿಸಲಾಯಿತು. ಈ ವೇಳೆ ನೂರಾರು ಮಂದಿ ಭಕ್ತರು ಹಾಜರಿದ್ದರು.

ದೇಶದ ಮೂರನೇ ಅತಿದೊಡ್ಡ ನಂದಿ ಪ್ರತಿಮೆಯನ್ನು 17 ನೇ ಶತಮಾನದಲ್ಲಿ ಮೈಸೂರು ದೊರೆ ದೊಡ್ಡ ದೇವರಾಜ ಒಡೆಯರ್ ಸ್ಥಾಪಿಸಿದರು ಎಂದು ನಂಬಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com