ರಾಜ್ಯ ಕಬ್ಬು ಬೆಳೆಗಾರರ ​​ಸಂಘದ ಉಪಾಧ್ಯಕ್ಷ ತೇಜಸ್ವಿ ಪಟೇಲ್‌
ರಾಜ್ಯ ಕಬ್ಬು ಬೆಳೆಗಾರರ ​​ಸಂಘದ ಉಪಾಧ್ಯಕ್ಷ ತೇಜಸ್ವಿ ಪಟೇಲ್‌

ಮೂಗ ಯುವತಿ ವಿವಾಹಕ್ಕೆ ಕಾಂಗ್ರೆಸ್‌ ಟಿಕೆಟ್‌ ಶುಲ್ಕ ನೀಡಲು ರೈತ ಮುಖಂಡ ತೇಜಸ್ವಿ ಪಟೇಲ್‌ ಮುಂದು!

ಚನ್ನಗಿರಿ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿರುವ ರಾಜ್ಯ ಕಬ್ಬು ಬೆಳೆಗಾರರ ​​ಸಂಘದ ಉಪಾಧ್ಯಕ್ಷ ತೇಜಸ್ವಿ ಪಟೇಲ್‌ ಅವರು, ಮಂಗಳವಾರ ತಮ್ಮ ಟಿಕೆಟ್‌ ಅರ್ಜಿ ಶುಲ್ಕವನ್ನು ಮೂಗ ಯುವತಿ ಮದುವೆಗೆ ನೀಡಲು ನಿರ್ಧರಿಸಿದ್ದಾರೆ.

ದಾವಣಗೆರೆ: ಚನ್ನಗಿರಿ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿರುವ ರಾಜ್ಯ ಕಬ್ಬು ಬೆಳೆಗಾರರ ​​ಸಂಘದ ಉಪಾಧ್ಯಕ್ಷ ತೇಜಸ್ವಿ ಪಟೇಲ್‌ ಅವರು, ಮಂಗಳವಾರ ತಮ್ಮ ಟಿಕೆಟ್‌ ಅರ್ಜಿ ಶುಲ್ಕವನ್ನು ಮೂಗ ಯುವತಿ ಮದುವೆಗೆ ನೀಡಲು ನಿರ್ಧರಿಸಿದ್ದಾರೆ.

ಚನ್ನಗಿರಿ ತಾಲೂಕಿನ ಬೆಳಗಲಗೆರೆ ಗ್ರಾಮದ ನಿವಾಸಿಗಳಾದ ಅಖಾಡ ರಂಗಪ್ಪ ಮತ್ತು ಯೆಲ್ಲಮ್ಮ ದಂಪತಿಗೆ ಆರು ಜನ ಮಕ್ಕಳಿದ್ದು, ಅವರಲ್ಲಿ ಐವರು ಶ್ರವಣ ಮತ್ತು ವಾಕ್ ದೋಷವುಳ್ಳವರಾಗಿದ್ದಾರೆ. ಯೆಲ್ಲಮ್ಮ ಅವರ ಪತಿ ರಂಗಪ್ಪ ಅವರು ಮೃತಪಟ್ಟಿದ್ದು, ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಈ ನಡುವೆ ಯೆಲ್ಲಮ್ಮ ಅವರ 27 ವರ್ಷದ ಕಿರಿಯ ಮಗಳು ಕೆಂಚಮ್ಮ ಎಂಟು ತಿಂಗಳ ಹಿಂದೆ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದ ವಾಕ್ ಮತ್ತು ಶ್ರವಣ ದೋಷ ಹೊಂದಿರುವ ವಡ್ಡಳ್ಳಿ ಮಂಜುನಾಥ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಮದುವೆ ಮಾಡಿಕೊಡಲು ಕುಟುಂಬ ಆರ್ಥಿಕ ಸಮಸ್ಯೆ ಎದುರಿಸುತ್ತಿದೆ. ಹೀಗಾಗಿ ಯುವತಿಯ ವಿವಾಹಕ್ಕೆ ನೆರವಾಗಲು ತೇಜಸ್ವಿ ಪಟೇಲ್ ಅವರು ಮುಂದಾಗಿದ್ದಾರೆ.

ನನಗೆ ಮಾನವೀಯತೆಯೇ ಮೊದಲು. ನನ್ನ ಆತ್ಮಸಾಕ್ಷಿಯ ಮಾತನ್ನು ನಾನು ಕೇಳುತ್ತೇನೆಂದು ತೇಜಸ್ವಿ ಪಟೇಲ್ ಅವರು ಹೇಳಿದ್ದಾರೆ.

ಚನ್ನಗಿರಿಯಿಂದ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಲು ಮುಂದಾಗಿದ್ದೆ. ಈ ಮಧ್ಯೆ ವಿಚಾರ ತಿಳಿದು ನೆರವು ನೀಡಲು ನಿರ್ಧರಿಸಿದೆ. ಮದುವೆ ಸಮಾರಂಭ ನಡೆಸಲು ಕೆಂಚಮ್ಮನ ಕುಟುಂಬಕ್ಕೆ ಅರ್ಜಿ ಶುಲ್ಕ 2 ಲಕ್ಷ ನೀಡಲು ನಿರ್ಧರಿಸಿದ್ದೇನೆಂದು ತಿಳಿಸಿದ್ದಾರೆ. ಅಲ್ಲದೆ, ನನ್ನ ಅರ್ಜಿಯನ್ನು ಶುಲ್ಕವಿಲ್ಲದೆ ಪರಿಗಣಿಸಬೇಕು ಕಾಂಗ್ರೆಸ್'ಗೆ ಮನವಿ ಮಾಡಿಕೊಂಡಿದ್ದಾರೆ.

ರೂ.2 ಲಕ್ಷದ ಡಿಮ್ಯಾಂಡ್ ಡ್ರಾಫ್ಟ್ ಅನ್ನು ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರ ಸಮ್ಮುಖದಲ್ಲಿ ಕೆಂಚಮ್ಮ ಅವರಿಗೆ ಶೀಘ್ರದಲ್ಲೇ ನೀಡಲಾಗುವುದು ಎಂದು ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com