ಬೆಂಗಳೂರು: ಬೈಕ್ ಟ್ಯಾಕ್ಸಿ ರಾಪಿಡೋ ರೈಡರ್ ನಿಂದ ಮಾಡೆಲ್ ಗೆ ಲೈಂಗಿಕ ಕಿರುಕುಳ!

ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ರಾಪಿಡೋ ರೈಡರ್ ಓರ್ವ ಮಾಡೆಲ್ ಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ನಡೆದಿದೆ. 
ಲೈಂಗಿಕ ಕಿರುಕುಳ
ಲೈಂಗಿಕ ಕಿರುಕುಳ

ನವದೆಹಲಿ: ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ರಾಪಿಡೋ ರೈಡರ್ ಓರ್ವ ಮಾಡೆಲ್ ಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ನಡೆದಿದೆ. 

ರೂಪದರ್ಶಿ ರಾಪಿಡೋ ಬೈಕ್ ಟ್ಯಾಕ್ಸಿಯ ರೈಡರ್ ವಿರುದ್ಧ ದೂರು ದಾಖಲಿಸಿದ್ದಾರೆ. 21 ವರ್ಷದ ಸಂತ್ರಸ್ತೆ, ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಮಂಜುನಾಥ್ ತಿಪ್ಪೇಸ್ವಾಮಿ ಎಂಬ ವ್ಯಕ್ತಿ ವಿರುದ್ಧ ದೂರು ದಾಖಲಿಸಿದ್ದಾರೆ ಹಾಗೂ ರಾಪಿಡೋ ಸಂಸ್ಥೆಯನ್ನೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ. 

ಕೆಲಸ ಮುಗಿಸಿ ಜಕ್ಕೂರಿನಿಂದ ಬಾಬುಸಾಪಾಳ್ಯಕ್ಕೆ ರಾತ್ರಿ 10:30 ವೇಳೆಗೆ ಮನೆಗೆ ತೆರಳಲು ರಾಪಿಡೋ ಬುಕ್ ಮಾಡಿದಾಗ KA51 H 5965 ನ ದ್ವಿಚಕ್ರವಾಹನದ ಚಾಲಕ ರೈಡ್ ನ್ನು ಒಪ್ಪಿಕೊಂಡಿದ್ದಾರೆ. ಬೈಕ್ ಹತ್ತಿದಾಗ, ಚಾಲಕ ತನ್ನ ಮೊಬೈಲ್ ಆಫ್ ಆಗಿದ್ದು ಒಟಿಪಿ ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಅದ್ದರಿಂದ ಮಾರ್ಗವನ್ನು ತಿಳಿಸಿ ಎಂದು ಕೇಳಿದ್ದಾರೆ. ಸಂತ್ರಸ್ತೆ ಮಾರ್ಗವನ್ನು ತಿಳಿಸುತ್ತಿದ್ದಾಗ ಆರೋಪಿ ಹಿಂಬದಿಯಿಂದ ತನ್ನನ್ನು ಅನುಚಿತವಾಗಿ ಮುಟ್ಟಿದ್ದಾನೆ. ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಮಾಡಲ್ ತನ್ನ ದೂರಿನಲ್ಲಿ ಆರೋಪಿಸಿದ್ದಾಳೆ. ಐಪಿಸಿ ಸೆಕ್ಷನ್ 354 (A) ಅಡಿಯಲ್ಲಿ ಪೊಲೀಸರು  ದಾಖಲಿಸಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com