'ಹಿಂಸೆ, ಕಿರುಕುಳ ಸಹಿಸಲು ಸಾಧ್ಯವಾಗುತ್ತಿಲ್ಲ, ದಯಮಾಡಿ ನನ್ನನ್ನು ನನ್ನ ಪಾಡಿಗೆ ಬಿಟ್ಟುಬಿಡಿ': ಶಾಸಕ ರಾಮದಾಸ್

ಮೈಸೂರಿನ ಬಸ್ ನಿಲ್ದಾಣದ ಮೇಲೆ ಗುಂಬಜ್ ಮಾದರಿಯ ರಚನೆಯ ಬಗ್ಗೆ ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಮತ್ತು ಶಾಸಕ ಎಸ್ ಎ ರಾಮದಾಸ್ ನಡುವಿನ ಪರೋಕ್ಷ ವಾಕ್ಸಮರ ದಿನಕ್ಕೊಂದು ಹೊಸ ತಿರವು ಪಡೆದುಕೊಳ್ಳುತ್ತಿದೆ. 
ರಾತ್ರಿ ಬೆಳಗಾಗುವುದರಲ್ಲಿ ಕೆಂಪು ಬಣ್ಣವನ್ನು ಹಚ್ಚಿದ ಮೈಸೂರಿನ ಬಸ್ ನಿಲ್ದಾಣ
ರಾತ್ರಿ ಬೆಳಗಾಗುವುದರಲ್ಲಿ ಕೆಂಪು ಬಣ್ಣವನ್ನು ಹಚ್ಚಿದ ಮೈಸೂರಿನ ಬಸ್ ನಿಲ್ದಾಣ
Updated on

ಮೈಸೂರು: ಮೈಸೂರಿನ ಬಸ್ ನಿಲ್ದಾಣದ ಮೇಲೆ ಗುಂಬಜ್ ಮಾದರಿಯ ರಚನೆಯ ಬಗ್ಗೆ ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಮತ್ತು ಶಾಸಕ ಎಸ್ ಎ ರಾಮದಾಸ್ ನಡುವಿನ ಪರೋಕ್ಷ ವಾಕ್ಸಮರ ದಿನಕ್ಕೊಂದು ಹೊಸ ತಿರವು ಪಡೆದುಕೊಳ್ಳುತ್ತಿದೆ. 

ಬಸ್ ನಿಲ್ದಾಣವನ್ನು ಕೆಡವಿ ಹಾಕುವುದಾಗಿ ಸಂಸದ ಪ್ರತಾಪ್ ಸಿಂಹ ನೀಡಿರುವ ಹೇಳಿಕೆ ಬೆನ್ನಲ್ಲೇ ಬಸ್ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸುತ್ತೂರು ಮಠದ ಸ್ವಾಮೀಜಿಯವರ ಭಾವಚಿತ್ರಗಳನ್ನು ಬಸ್ ನಿಲ್ದಾಣದಲ್ಲಿ ಅಂಟಿಸಲಾಗಿದೆ. 

ನಿನ್ನೆ ಗುರುವಾರ ಚಿನ್ನದ ಬಣ್ಣದಲ್ಲಿ ರಚನೆಯಾಗಿದ್ದ ಗುಂಬಜ್ ಗೆ ನಿನ್ನೆ ಕೆಂಪು ಬಣ್ಣವನ್ನು ಮತ್ತೆ ಬಳಿಯಲಾಗಿತ್ತು. ಈ ಬಗ್ಗೆ ಕೇಳಿದಾಗ ಶಾಸಕ ರಾಮದಾಸ್, ಈ ವಿಚಾರದ ಬಗ್ಗೆ ಏನೂ ಕೇಳಬೇಡಿ, ಬಸ್ ನಿಲ್ದಾಣ ನಿರ್ಮಿಸಲು ಖರ್ಚಾದ ಸಾರ್ವಜನಿಕ ಹಣವನ್ನು ತಮ್ಮ ವೇತನದಲ್ಲಿ ಭರಿಸುವುದಾಗಿ ತಿಳಿಸಿದ್ದಾರೆ. ತಾವು ಯಾವುದೇ ತಪ್ಪು ಮಾಡಿದರೂ ಶಿಕ್ಷೆ ಎದುರಿಸಲು ಸಿದ್ಧ. ಕಳೆದ 20 ವರ್ಷಗಳಲ್ಲಿ ಮೈಸೂರಿನಲ್ಲಿ ಬಿಜೆಪಿಯ 11 ಶಾಸಕರಲ್ಲಿ 10 ಮಂದಿ ಪಕ್ಷವನ್ನು ಕಿರುಕುಳ, ಹಿಂಸೆ ತಾಳಲಾರದೆ ಬಿಟ್ಟರು. ಈಗ ನಾನೊಬ್ಬ ಉಳಿದುಕೊಂಡಿದ್ದೇನೆ, ದಯವಿಟ್ಟು ನನ್ನ ಪಾಡಿಗೆ ನನ್ನನ್ನು ಬಿಟ್ಟುಬಿಡಿ ಎಂದರು.

ರಾಮದಾಸ್ ಅವರ ಕಿರುಕುಳ ಹೇಳಿಕೆಗೆ ನಿನ್ನೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ಪ್ರಧಾನಿ ಮೋದಿಯವರೇ ರಾಮದಾಸ್ ಅವರ ಬೆನ್ನು ತಟ್ಟಿದ್ದಾರೆ ಅಂದ ಮೇಲೆ ಅವರಿಗೆ ಕಿರುಕುಳ ನೀಡಲು ನನಗೆ ಎಲ್ಲಿದೆ ಅಧಿಕಾರ ಎಂದು ವ್ಯಂಗ್ಯವಾಡಿದರು.

ಮೈಸೂರಿನ ಬಸ್ ನಿಲ್ದಾಣಗಳಲ್ಲಿ ಗುಮ್ಮಟದಂತಹ ರಚನೆಗಳು ಬರುತ್ತಿವೆ ಎಂದು ಪ್ರತಾಪ್ ಸಿಂಹ ವಾದಿಸಿದರೆ, ರಾಮದಾಸ್ ಇದನ್ನು ಮೈಸೂರು ಅರಮನೆಯನ್ನು ಹೋಲುವಂತೆ ನಿರ್ಮಿಸಲಾಗಿದೆ, ಇದು ಗುಂಬಜ್ ಅಲ್ಲ ಎಂದು ಪ್ರತಿಪಾದಿಸಿದರು. ಅನಗತ್ಯ ಕಿರುಕುಳ ನೀಡಲಾಗುತ್ತಿದೆ ಎಂದು ದೂರಿದ್ದರು. 

ಗುಮ್ಮಟದಂತಹ ರಚನೆಯನ್ನು ಕೆಡವುವುದರಿಂದ ಟಿಪ್ಪು ಸುಲ್ತಾನನ ಅನುಯಾಯಿಗಳಿಗೆ ಬೇಸರವಾಗಬಹುದು, ಆದರೆ ಶಿವಾಜಿಯ ಅನುಯಾಯಿಗಳಿಗೆ ಅಲ್ಲ. ತನಗೆ ಕಿರುಕುಳ ನೀಡಲಾಗುತ್ತಿದೆ ಎಂದು ರಾಮದಾಸ್ ಯಾವ ರೀತಿಯಲ್ಲಿ ಹೇಳುತ್ತಾರೋ ಗೊತ್ತಿಲ್ಲ’ ಎಂದು ಪ್ರತಾಪ್ ಸಿಂಹ ಹೇಳಿದರು. ನಾನು ಇಲ್ಲಿ ರಾಜಕೀಯದಲ್ಲಿದ್ದೇನೆ, ರಿಯಲ್ ಎಸ್ಟೇಟ್‌ನಲ್ಲಿ ಅಲ್ಲ. ಮೈಸೂರಿನ ರಾಜಕಾರಣಿಗಳ ಬಳಿ ತುಂಬಾ ಹಣವಿದ್ದು ಅದರಲ್ಲಿ ನನ್ನನ್ನು ಸುಟ್ಟು ಹಾಕಬಹುದು. ಅಭಿವೃದ್ಧಿಯ ಉದ್ದೇಶದಿಂದ ರಾಜಕೀಯಕ್ಕೆ ಬಂದಿದ್ದೇನೆ ಎಂದು ಕೂಡ ಪ್ರತಾಪ್ ಸಿಂಹ ತಿರುಗೇಟು ನೀಡಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಬಸ್ ನಿಲ್ದಾಣವನ್ನು ಅಕ್ರಮವೆಂದು ಪರಿಗಣಿಸಿದ್ದು ಅವರೇ ಯಾವುದೇ ಸಂದರ್ಭದಲ್ಲಿ ಕೆಡವುವ ಸಾಧ್ಯತೆಯಿದೆ. ರಾತ್ರಿ ಕೆಲಸ ಮಾಡುವವರು ಕಳ್ಳರು. ರಾತ್ರಿಯಿಡೀ ಇದನ್ನು ಹೇಗೆ ಮಾಡಬಹುದು ಅದರಲ್ಲಿ ತುಂಬಾ ಉಲ್ಲಂಘನೆಯಾಗಿದೆ. ಆರಂಭಿಕ ಯೋಜನೆಯಲ್ಲಿ ಗುಂಬಜ್ ಮಾದರಿಯ ರಚನೆ ಇರಲಿಲ್ಲ, ಆದರೆ ಹೊಸ ಯೋಜನೆಯಲ್ಲಿ ಇದನ್ನು ಪರಿಷ್ಕರಿಸಲಾಗಿದೆ, ಇದು ಶಾಸಕರ ಆಪ್ತ ಸಹಾಯಕರ ಸಹಿಯನ್ನು ಹೊಂದಿದೆ ಎಂದು ಪ್ರತಾಪ್ ಸಿಂಹ ಆರೋಪಿಸಿದರು. 

ಈ ವಿವಾದವು ಮುಖ್ಯಮಂತ್ರಿ ಕಚೇರಿವರೆಗೆ ತಲುಪಿದ್ದು,  ಸಿಎಂ ಜೊತೆ ರಾಮದಾಸ್ ಅವರು ರಹಸ್ಯ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಬಸ್ ತಂಗುದಾಣವನ್ನು ನಿರ್ಮಿಸುವ ಮೊದಲು ಅನುಮೋದನೆಯನ್ನು ತೆಗೆದುಕೊಳ್ಳದ ಮೈಸೂರು ಮಹಾನಗರ ಪಾಲಿಕೆ ಮತ್ತು KRIDL ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com