ಭದ್ರಾ ಮೇಲ್ದಂಡೆ ಯೋಜನೆಯಿಂದ ಮಧ್ಯ ಕರ್ನಾಟಕ ಹಸಿರು- ಸಿಎಂ ಬೊಮ್ಮಾಯಿ

ಭದ್ರಾ ಮೇಲ್ದಂಡೆ ಯೋಜನೆಗೆ ರಾಜ್ಯ ಸರ್ಕಾರದಿಂದ 3 ಸಾವಿರ ಕೋಟಿ ರೂಪಾಯಿ ಅನುದಾನ ನೀಡಿದೆ. ಇದರಿಂದ ಮಧ್ಯ ಕರ್ನಾಟಕ ಹಸಿರಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಜನ ಸಂಕಲ್ಪ ಯಾತ್ರೆಯಲ್ಲಿ ಸಿಎಂ ಬೊಮ್ಮಾಯಿ ಮತ್ತಿತರರು
ಜನ ಸಂಕಲ್ಪ ಯಾತ್ರೆಯಲ್ಲಿ ಸಿಎಂ ಬೊಮ್ಮಾಯಿ ಮತ್ತಿತರರು

ದಾವಣಗೆರೆ: ಭದ್ರಾ ಮೇಲ್ದಂಡೆ ಯೋಜನೆಗೆ ರಾಜ್ಯ ಸರ್ಕಾರದಿಂದ 3 ಸಾವಿರ ಕೋಟಿ ರೂಪಾಯಿ ಅನುದಾನ ನೀಡಿದೆ. ಇದರಿಂದ ಮಧ್ಯ ಕರ್ನಾಟಕ ಹಸಿರಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಜಗಳೂರಿನಲ್ಲಿಂದು ಆಯೋಜಿಸಿದ್ದ ಬಿಜೆಪಿ ಜನಸಂಕಲ್ಪ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಭದ್ರಾ ಮೇಲ್ದಂಡೆ ಯೋಜನೆ ಅಡಿ 45 ಸಾವಿರ  ಎಕರೆಗೆ ಹನಿ ನೀರಾವರಿ ಒದಗಿಸಲು 1, 400 ಕೋಟಿ ರೂ. ಅನುದಾನ ನೀಡಿ, ಯೋಜನೆಯನ್ನು ಚಾಲನೆಗೊಳಿಸಲಾಗುತ್ತಿದೆ ಎಂದರು. 
 
ಮನೆಮೆನಗೆ ನೀರು ಕೊಡುವ ಯೋಜನೆ: ಜಲಜೀವನ್ ಮಿಷನ್ ಯೋಜನೆಯಡಿ 9,000 ಕೋಟಿ ರೂ. ಅನುದಾನದಲ್ಲಿ ರಾಜ್ಯದ 25 ಲಕ್ಷ ಮನೆಗಳಿಗೆ ಕುಡಿಯುವ ನೀರು ಒದಗಿಸುವ ಗುರಿ ಹೊಂದಿದ್ದು, ಈ ವರ್ಷ 14 ಕೋಟಿ ಮನೆಗಳಿಗೆ ಕುಡಿಯುವ ನೀರು ಒದಗಿಸಲಾಗಿದೆ.  ಬಿಜೆಪಿ ಸರ್ಕಾರದ 3 ವರ್ಷ ಅವಧಿಯಲ್ಲಿ ಒಟ್ಟು 30 ಲಕ್ಷ ಮನೆಗಳಿಗೆ ಕುಡಿಯು ನೀರು ಒದಗಿಸಿರುವುದು ಡಬಲ್ ಇಂಜಿನ್  ಸರ್ಕಾರದ ಶಕ್ತಿಯಾಗಿದೆ .154 ಗ್ರಾಮಗಳಿಗೆ 482 ಕೋಟಿ ರೂ. ಮನೆಮೆನಗೆ ನೀರು ಕೊಡುವ ಯೋಜನೆ ಮಾಡಲಾಗಿದೆ ಎಂದರು.

ಮುಂದಿನ ತಿಂಗಳು 23 ಕಸುಬುಗಳಿಗೆ ವಿಶೇಷ ಯೋಜನೆ ಘೋಷಣೆ:  23 ಕಸುಬುಗಳಿಗೆ ಬ್ಯಾಂಕಿನ ಸಾಲ ನೀಡುವ ವಿನೂತನ ಯೋಜನೆಯನ್ನು ಬರುವ ತಿಂಗಳು  ಘೋಷಿಸಲಾಗುವುದು. ಎಲ್ಲಾ ವರ್ಗದ ಜನರಿಗೆ ಸಮಾನ ಗೌರವ, ಅವಕಾಶ, ಶಿಕ್ಷಣ, ಕಾಯಕ   ನೀಡುವ ಮೂಲಕ ರಾಜ್ಯದ ಅಭಿವೃದ್ಧಿಯಲ್ಲಿ ಎಲ್ಲಾ ವರ್ಗದ ಜನರ ಪಾಲನ್ನು ಪಡೆಯುತ್ತಿದ್ದೇವೆ. ದಾವಣಗೆರೆ ಜಿಲ್ಲೆ ಮಹತ್ವದ ಜಿಲ್ಲೆ ಚಿತ್ರದರ್ಗ, ದಾವಣಗೆರೆ ಅಭಿವೃದ್ಧಿಯಾಗಬೇಕು ಎಂಬ ಪರಿಕಲ್ಪನೆ.  ನಾವು ತುಮಕೂರು ದಾವಣಗೆರೆ ರೈಲ್ವೆಗೆ ಅಗತ್ಯವಿರುವ ಅನುದಾನವನ್ನು ಬಿಡುಗಡೆ ಮಾಡುವುದಾಗಿ ಕೇಂದ್ರ ರೈಲ್ವೆ ಸಚಿವರು ತಿಳಿಸಿದ್ದು.  ಜನವರಿಯಲ್ಲಿ ಕೆಲಸ ಪ್ರಾರಂಭವಾಗುತ್ತಿದೆ. 1 ಸಾವಿರ ಎಕರೆಯಲ್ಲಿ ಕೈಗಾರಿಕಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ವಿಮಾನನಿಲ್ದಾಣಕ್ಕೆ ಸ್ಥಳ ನೀಡದಿದರೆ ವಿಮಾನನಿಲ್ದಾಣವೂ ಬರಲಿದೆ ಎಂದು ಅವರು ತಿಳಿಸಿದರು. 

ಸ್ವಾವಲಂಬಿ ಜೀವನ ನಡೆಸಲು ನೆರವು: ರೈತಾಪಿ ವರ್ಗದವರ ಮಕ್ಕಳಿಗೆ ಶಿಕ್ಷಣ ನೀಡಲು ರೈತ ವಿದ್ಯಾನಿಧಿ ಯೋಜನೆ ಜಾರಿಗೊಳಿಸಲಾಗಿದೆ. ಪ್ರತಿ ಗ್ರಾಮದಲ್ಲಿ  2 ಸಂಘಗಳಿಗೆ 5 ಲಕ್ಷ ರೂ.ಗಳನ್ನು ನೀಡುವ ಸ್ತ್ರೀಸಾಮಾರ್ಥ್ಯ ಯೋಜ‌ನೆ ಜಾರಿಗೊಳಿಸಲಾಗುತ್ತಿದೆ.  5 ಲಕ್ಷ ಹೆಣ್ಣುಮಕ್ಕಳಿಗೆ  ಸ್ವಯಂ ಉದ್ಯೋಗದಲ್ಲಿ ತೊಡಗಿಸುವ ಯೋಜನೆ ಇದಾಗಿದೆ. ಪ್ರತಿ ಗ್ರಾಮದಲ್ಲಿ ಎರಡು ಯುವಕ ಸಂಘಕ್ಕೆ ಸ್ವಾಮಿ ವಿವೇಕಾನಂಧ ಯೋಜನೆಯಡಿ 5 ಲಕ್ಷ ರೂ.ಗಳ ಸಾಲಸೌಲಭ್ಯ ನೀಡಿ  ಸ್ವಯಂ ಉದ್ಯೋಗ ಕಲ್ಪಿಸಲಾಗುವುದು. ಸ್ವಾವಲಂಬಿ ಜೀವನ ನಡೆಸಲು ಇದರಿಂದ ಅನುಕೂಲವಾಗಲಿದೆ ಎಂದರು. 

 ಈ ಬಾರಿ ಕುರಿಗಾರರ ಪ್ರತಿ ಸಂಘಕ್ಕೆ 5 ಲಕ್ಷ ರೂ.ಗಳನ್ನು ಒದಗಿಸಿ, 20 ಕುರಿಗಳನ್ನು ನೀಡಲಾಗುವುದು. ಇದಕ್ಕಾಗಿ 354 ಕೋಟಿ ರೂ.ಗಳ ಅನುದಾನ ನೀಡಲಾಗುವುದು. ಕಾಡಿನಲ್ಲಿ ಇರುವ ಜನರಿಗೆ ಸಹಾಯ ಮಾಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com