ಸ್ಟೀಲ್ ಸ್ಕೇಲ್ ನಿಂದ ಶಿಕ್ಷಕನಿಂದ ಥಳಿತ, ವಿದ್ಯಾರ್ಥಿ ಕೈಗೆ 6 ಹೊಲಿಗೆ, ದೂರು ದಾಖಲು!

ಶಾಲಾ ಶಿಕ್ಷಕನೋರ್ನ ವಿದ್ಯಾರ್ಥಿಗೆ ಥಳಿಸಿದ ಪರಿಣಾಮ ಆತನ ಕೈಗೆ ಆರು ಹೊಲಿಗೆ ಹಾಕಲಾಗಿರುವ ಘಟನೆ ಕರ್ನಾಟಕದ ಹೆಚ್.ಡಿ.ಕೋಟೆಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಶಾಲಾ ಶಿಕ್ಷಕನೋರ್ನ ವಿದ್ಯಾರ್ಥಿಗೆ ಥಳಿಸಿದ ಪರಿಣಾಮ ಆತನ ಕೈಗೆ ಆರು ಹೊಲಿಗೆ ಹಾಕಲಾಗಿರುವ ಘಟನೆ ಕರ್ನಾಟಕದ ಹೆಚ್.ಡಿ.ಕೋಟೆಯಲ್ಲಿ ನಡೆದಿದೆ.

ಕ್ಷುಲ್ಲಕ ಕಾರಣಕ್ಕೆ ಶಿಕ್ಷಕರೊಬ್ಬರು ಸ್ಟೀಲ್ ಸ್ಕೇಲ್‌ನಿಂದ ವಿದ್ಯಾರ್ಥಿಗೆ ಥಳಿಸಿದ್ದಾರೆ ಎನ್ನಲಾಗಿದ್ದು, ಎಚ್.ಡಿ.ಕೋಟೆ ಪಟ್ಟಣದ ಶಾಂತಿಪುರ ಗ್ರಾಮದ ಖಾಸಗಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಾಲೆಯ ಶಿಕ್ಷಕನಿಂದ ಹೊಡೆತ ತಿಂದ ವಿದ್ಯಾರ್ಥಿ ಕೈಗೆ ಗಂಭೀರವಾದ ಗಾಯವಾಗಿದೆ. 

8ನೇ ತರಗತಿಯ ಅಮೃತ್ ಗಾಯಗೊಂಡ ವಿದ್ಯಾರ್ಥಿಯಾಗಿದ್ದು, ಬಿಡುವಿನ ವೇಳೆಯಲ್ಲಿ ಶಾಲಾ ಕೊಠಡಿಯಲ್ಲಿ ಸೀಮೆಸುಣ್ಣ ಮುರಿದು ಅಮೃತ್ ಆಟವಾಡುತ್ತಿದ್ದ. ಸೀಮೆಸುಣ್ಣ ಮುರಿದಿದಕ್ಕೆ ವಿದ್ಯಾರ್ಥಿಗೆ ಶಿಕ್ಷಕ ಸಿದ್ದರಾಜು ಮನಬಂದಂತೆ ಥಳಿಸಿದ್ದಾರೆ ಎನ್ನಲಾಗಿದೆ. ಸ್ಟೀಲ್ ಸ್ಕೇಲ್ ನಿಂದ ಶಿಕ್ಷಕ ಸಿದ್ದರಾಜು ವಿದ್ಯಾರ್ಥಿ ಅಮೃತ್ ಕೈಗೆ ಥಳಿಸಿದ್ದು, ಇದರಿಂದ ವಿದ್ಯಾರ್ಥಿ ಕೈಗೆ ಗಂಭೀರವಾಗಿ ಗಾಯವಾಗಿದೆ. ಈ ವೇಳೆ ಅಮೃತ್ ಪೋಷಕರಿಗೆ ಮಾಹಿತಿ ನೀಡಿದ ಶಿಕ್ಷಕ ಸಿದ್ದರಾಜು ಪೋಷಕರ ಬಳಿ ಆತ ಕಟರ್ ನಿಂದ ಕೈ ಕಟ್ ಮಾಡಿಕೊಂಡಿದ್ದಾನೆ ಎಂದು ಸುಳ್ಳು ಹೇಳಿದ್ದಾರೆ.

ಈ ಬಗ್ಗೆ ಅಮೃತ್ ಪೋಷಕರಿಗೆ ಮಾಹಿತಿ ನೀಡಿದ್ದು ಶಿಕ್ಷಕರೇ ಹೊಡೆದ ವಿಚಾರವನ್ನು ಬಾಯಿ ಬಿಟ್ಟಿದ್ದಾನೆ. ಇದರಿಂದ ಆಕ್ರೋಶಗೊಂಡ ಪೋಷಕರು ಶಾಲಾ ಆಡಳಿತ ಮಂಡಳಿಗೆ ದೂರು ನೀಡಿದ್ದು, ಗಾಯಾಳು ಅಮೃತ್‌ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.  ಆತನ ಕೈಗೆ ಆರು ಹೊಲಿಗೆ ಹಾಕಲಾಗಿದೆ ಎಂದು ತಿಳಿದುಬಂದಿದೆ. ಶಾಲೆಗೆ ತಾಲ್ಲೂಕು ಶಿಕ್ಷಣಾದಿಕಾರಿ ಉದಯಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಹೆಚ್ ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com