ಮಂತ್ರಿ ಎನರ್ಜಿಯ ಯೋಜನೆಯ ಫಾರೆನ್ಸಿಕ್ ಆಡಿಟ್ ಗೆ ಕೆ-ರೇರಾ ಆದೇಶ

ಕೆ ಆರ್ ಪುರಂ ನ ರಾಚೇನಹಳ್ಳಿ ಗ್ರಾಮದಲ್ಲಿ ಮಂತ್ರಿ ಮಾನ್ಯತಾ ಎನರ್ಜಿಯಾ ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ರಿಯಲ್ ಎಸ್ಟೇಸ್ ನಿಯಂತ್ರಣ ಪ್ರಾಧಿಕಾರ ಇತ್ತೀಚೆಗೆ ಮತ್ರಿ ಟೆಕ್ನಾಲಜಿ ಕಾನ್ಸ್ಟಲ್ಲೇಶನ್ ಪ್ರೈವೇಟ್ ಲಿಮಿಟೆಡ್ ನ ಲೆಕ್ಕ ಪರಿಶೋಧನೆ ಪುಸ್ತಕಗಳಿಗೆ ಸಂಬಂಧಿಸಿ ಫೋರೆನ್ಸಿಕ್ ಆಡಿಟ್ ಗೆ ಆದೇಶಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕೆ ಆರ್ ಪುರಂ ನ ರಾಚೇನಹಳ್ಳಿ ಗ್ರಾಮದಲ್ಲಿ ಮಂತ್ರಿ ಮಾನ್ಯತಾ ಎನರ್ಜಿಯಾ ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ರಿಯಲ್ ಎಸ್ಟೇಸ್ ನಿಯಂತ್ರಣ ಪ್ರಾಧಿಕಾರ ಇತ್ತೀಚೆಗೆ ಮತ್ರಿ ಟೆಕ್ನಾಲಜಿ ಕಾನ್ಸ್ಟಲ್ಲೇಶನ್ ಪ್ರೈವೇಟ್ ಲಿಮಿಟೆಡ್ ನ ಲೆಕ್ಕ ಪರಿಶೋಧನೆ ಪುಸ್ತಕಗಳಿಗೆ ಸಂಬಂಧಿಸಿ ಫೋರೆನ್ಸಿಕ್ ಆಡಿಟ್ ಗೆ ಆದೇಶಿಸಿದೆ.

ಏನಿದು ಫೋರೆನ್ಸಿಕ್ ಆಡಿಟ್?: ಕಂಪನಿಯ ಖಾತೆಗಳ ತೀವ್ರ ಪರಿಶೀಲನೆಯನ್ನು ಒಳಗೊಂಡಿರುತ್ತದೆ, ಇದು ಅಪರೂಪದ ಪ್ರಕರಣಗಳಲ್ಲಿ ಮಾಡಲಾಗುತ್ತದೆ. ನವೆಂಬರ್ 9 ರಂದು ಹೊರಡಿಸಲಾದ ಆದೇಶವನ್ನು ಇದೀಗ ಸಾರ್ವಜನಿಕಗೊಳಿಸಲಾಗಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಕಾಯಿದೆಯ ಸೆಕ್ಷನ್ 35 ರ ಅಡಿಯಲ್ಲಿ ಲೆಕ್ಕಪರಿಶೋಧನೆಯನ್ನು ನಡೆಸಲು K-RERA CAಗಳು, JAA ಮತ್ತು ಅಸೋಸಿಯೇಟ್‌ಗಳನ್ನು ನೇಮಿಸಿತು. ದೂರುದಾರರಿಗೆ (ಮನೆ ಖರೀದಿದಾರರು) ಲೆಕ್ಕಪರಿಶೋಧನೆಯ ವೆಚ್ಚವನ್ನು ಪ್ರಾಧಿಕಾರದಲ್ಲಿ ಠೇವಣಿ ಮಾಡುವ ಮೂಲಕ ಭರಿಸುವಂತೆ ನಿರ್ದೇಶಿಸಲಾಗಿದೆ.

ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ರೇರಾ ಅಧ್ಯಕ್ಷ ಹೆಚ್ ಸಿ ಕಿಶೋರ್ ಚಂದ್ರ, ಸದಸ್ಯರಾದ ನೀಲಮಣಿ ಎನ್ ರಾಜು ಮತ್ತು ಮಾಜಿ ಸದಸ್ಯ ಡಿ ವಿಷ್ಣುರಾದನ ರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಯೋಜನೆಯ ವಾಸ್ತವತೆಯನ್ನು ಪರಿಶೀಲಿಸಿದ್ದರು. ಇಂತಹ ಲೆಕ್ಕಪರಿಶೋಧನೆಗೆ ಆದೇಶ ನೀಡುವುದು ಅಪರೂಪದಲ್ಲಿ ಅಪರೂಪ ಪ್ರಕರಣವಾಗಿದೆ ಎಂದರು. 

ರಿಯಲ್ ಎಸ್ಟೇಟ್ ಪ್ರವರ್ತಕರು ತಮ್ಮ ಫ್ಲಾಟ್‌ಗಳ ನಿರ್ಮಾಣಕ್ಕೆ ತಮ್ಮಿಂದ ಸಂಗ್ರಹಿಸಿದ ದೊಡ್ಡ ಮೊತ್ತವನ್ನು ಹೂಡಿಕೆ ಮಾಡಿದ್ದಾರೆಯೇ ಅಥವಾ ಇತರ ಉದ್ದೇಶಗಳಿಗಾಗಿ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆಯೇ ಎಂದು ಪರಿಶೀಲಿಸಲು ಖರೀದಿದಾರರು ಬಯಸಿದ್ದರು. ಶೇಕಡಾ 3ರಷ್ಟು ಮಾತ್ರ ಕೆಲಸ ಪೂರ್ಣಗೊಂಡಿದೆ ಎಂದು ದೂರುದಾರರು ಆರೋಪಿಸಿದ್ದಾರೆ, ಆದರೆ ಬಿಲ್ಡರ್ ಯೋಜನೆಗೆ ಅಗತ್ಯವಿರುವ 475.92 ಕೋಟಿ ರೂಪಾಯಿಗಳಲ್ಲಿ 75.17 ಕೋಟಿ ರೂಪಾಯಿಗಳನ್ನು ಖರೀದಿದಾರರಿಂದ ಸಂಗ್ರಹಿಸಿದೆ.

ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ ಕಂಪೆನಿಯ ಮಂಡಳಿಯನ್ನು ಕಳೆದ ಜೂನ್ ತಿಂಗಳಲ್ಲಿ ರದ್ದು ಮಾಡಿ ಕರ್ನಾಟಕ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ಆನಂದ್ ಬೈರಾರೆಡ್ಡಿ ಅವರನ್ನು ಆಡಳಿತಾಧಿಕಾರಿಯಾಗಿ ನೇಮಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com