ಬೆಳಗಾವಿ: ನಿರಾಕರಿಸಿದ ಅಧಿಕಾರಿಗಳು, ಸ್ಟ್ರೆಚರ್‌ನಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿಗೆ ಬಂದ 79 ವರ್ಷದ ವೃದ್ಧೆ

ಸರ್ಕಾರಿ ಅಧಿಕಾರಿಗಳು ಮನಸ್ಸಿಗೆ ತೋಚಿದ್ದನ್ನೇ ಮಾಡುವುದು ಎಂಬುದಕ್ಕೆ ಉದಾಹರಣೆಯಾಗಿ ಬೆಳಗಾವಿಯ ಟಿಳಕವಾಡಿ ಗ್ರಾಮದಲ್ಲಿ ಶುಕ್ರವಾರ ಆಸ್ಪತ್ರೆಗೆ ದಾಖಲಾಗಿದ್ದ ಹಾಸಿಗೆ ಹಿಡಿದ 79 ವರ್ಷದ ವೃದ್ಧೆಯನ್ನು ಆಸ್ತಿ ಪತ್ರಗಳ ಮೇಲೆ ಸಹಿ ಮತ್ತು ಹೆಬ್ಬೆರಳಿನ ಗುರುತು ಹಾಕಲು ಸ್ಟ್ರೆಚರ್‌ನಲ್ಲಿ ಸಬ್‌ರಿಜಿಸ್ಟ್ರಾರ್ ಕಚೇರಿಗೆ ಕರೆತರಲಾಗಿದೆ.
ಸ್ಟ್ರೆಚರ್‌‌ನಲ್ಲಿಯೇ ಸರ್ಕಾರಿ ಕಚೇರಿಗೆ ಬಂದಿದ್ದ ಮಹಾದೇವಿ ಅಗಸಿಮನಿ
ಸ್ಟ್ರೆಚರ್‌‌ನಲ್ಲಿಯೇ ಸರ್ಕಾರಿ ಕಚೇರಿಗೆ ಬಂದಿದ್ದ ಮಹಾದೇವಿ ಅಗಸಿಮನಿ

ಬೆಳಗಾವಿ: ಸರ್ಕಾರಿ ಕೆಲಸ ದೇವರ ಕೆಲಸ ಎನ್ನುವ ಮಾತಿದೆ. ಆದರೆ, ದೇವರದ್ದಾದರೂ ಅಷ್ಟೆ ಅಲ್ಲದಿದ್ದರೂ ಅಷ್ಟೆ. ಸರ್ಕಾರಿ ಅಧಿಕಾರಿಗಳು ಮನಸ್ಸಿಗೆ ತೋಚಿದ್ದನ್ನೇ ಮಾಡುವುದು ಎಂಬುದಕ್ಕೆ ಉದಾಹರಣೆಯಾಗಿ ಬೆಳಗಾವಿಯ ಟಿಳಕವಾಡಿ ಗ್ರಾಮದಲ್ಲಿ ಶುಕ್ರವಾರ ಆಸ್ಪತ್ರೆಗೆ ದಾಖಲಾಗಿದ್ದ ಹಾಸಿಗೆ ಹಿಡಿದ 79 ವರ್ಷದ ವೃದ್ಧೆಯನ್ನು ಆಸ್ತಿ ಪತ್ರಗಳ ಮೇಲೆ ಸಹಿ ಮತ್ತು ಹೆಬ್ಬೆರಳಿನ ಗುರುತು ಹಾಕಲು ಸ್ಟ್ರೆಚರ್‌ನಲ್ಲಿ ಸಬ್‌ರಿಜಿಸ್ಟ್ರಾರ್ ಕಚೇರಿಗೆ ಕರೆತರಲಾಗಿದೆ.

ಸಂಬಂಧಿಕರ ಪ್ರಕಾರ, ಬೆಳಗಾವಿಯ ಹಿರೇ ಬಾಗೇವಾಡಿ ಗ್ರಾಮದ ವಯೋವೃದ್ಧೆ ಮಹಾದೇವಿ ಅಗಸಿಮನಿ ಅವರನ್ನು ಉಪನೋಂದಣಾಧಿಕಾರಿ ಕಚೇರಿಗೆ ಕರೆತರುವುದು ಬಿಟ್ಟು ಬೇರೆ ದಾರಿ ಇರಲಿಲ್ಲ. ಏಕೆಂದರೆ, ಆಸ್ಪತ್ರೆಯಲ್ಲಿರುವ ಆಕೆಯನ್ನು ಭೇಟಿಮಾಡಬೇಕೆಂದರೆ ಬರೋಬ್ಬರಿ 2 ಲಕ್ಷ ಲಂಚ ನೀಡಬೇಕೆಂದು ಅಧಿಕಾರಿಗಳು ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಸರ್ಕಾರವು 'ಖಾಸಗಿ ಹಾಜರಾತಿ' ಆಯ್ಕೆಯನ್ನು ಅನುಮತಿಸುತ್ತದೆ, ಅಲ್ಲಿ ಅಧಿಕಾರಿಗಳೇ ಫಲಾನುಭವಿಗಳನ್ನು ಭೇಟಿ ಮಾಡಬೇಕು ಮತ್ತು ಹೆಚ್ಚುವರಿ ಶುಲ್ಕವಾಗಿ 1,000 ರೂ.ಗಳನ್ನು ಪಾವತಿಸಿದ ನಂತರ ಅಗತ್ಯ ಕೆಲಸಗಳನ್ನು ಮಾಡಬೇಕಾಗುವ ಆಯ್ಕೆಯಿದೆ.

ವಯೋಸಹಜ ಕಾಯಿಲೆಗಳಿಂದ ಬಳಲುತ್ತಿರುವ ಮಹಾದೇವಿ, ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತನ್ನ ಇಬ್ಬರು ಮಕ್ಕಳಾದ ವಿದ್ಯಾ ಹೊಸಮನಿ (54) ಮತ್ತು ರವೀಂದ್ರನಾಥ ಗುರಪ್ಪ ಅಗಸಿಮನಿ (51) ಅವರಿಗೆ ತನ್ನ 2 ಎಕರೆ 35 ಗುಂಟಾ ಅಳತೆಯ ಕೃಷಿ ಭೂಮಿಯನ್ನು ಹಂಚಲು ಬಯಸಿದ್ದಳು. ಹೀಗಾಗಿ, ಪೇಪರ್ಸ್ ಡ್ರಾ ಮಾಡಿದ ನಂತರ, ಕುಟುಂಬವು ಮಹಾದೇವಿ ಹಾಸಿಗೆ ಹಿಡಿದಿರುವುದರಿಂದ ಆಸ್ಪತ್ರೆಯಲ್ಲಿಯೇ ಅಗತ್ಯ ಕೆಲಸಗಳನ್ನು ಮಾಡುವಂತೆ ಅಧಿಕಾರಿಗಳನ್ನು ವಿನಂತಿಸಿದ್ದರು.

ಕುಟುಂಬದವರು ಮನವಿ ಸಲ್ಲಿಸಿದಾಗ, ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಲು ನಿರಾಕರಿಸಿದ್ದರು.

ಸಹಾಯಕ ಸಬ್ ರಿಜಿಸ್ಟ್ರಾರ್ ಸಚಿನ್ ಮಾಂಡೆಡ್ ಮಾತನಾಡಿ, ತಾನು ಶುಕ್ರವಾರ ರಜೆಯಲ್ಲಿದ್ದೆ, ಆದರೆ ಸಬ್ ರಿಜಿಸ್ಟ್ರಾರ್ ಪದ್ಮನಾಭ್ ಗುಡಿ ಅವರು ಕಚೇರಿಯಲ್ಲಿದ್ದರು. ಖಾಸಗಿ ಹಾಜರಾತಿಗಾಗಿ ಕುಟುಂಬ ಅರ್ಜಿ ಸಲ್ಲಿಸಿಲ್ಲ ಎಂದು ಅವರು ಹೇಳಿದರು.

ಜಿಲ್ಲಾ ನೋಂದಣಾಧಿಕಾರಿ ಶಿವುಕುಮಾರ ಅಪರಂಜಿ ಮಾತನಾಡಿ, ವಿವರಣೆ ಕೇಳಿದ್ದೇನೆ. ಖಾಸಗಿ ಹಾಜರಾತಿ ಬಗ್ಗೆ ಜನರನ್ನು ತಪ್ಪು ದಾರಿಗೆ ಎಳೆಯುವ ಬಗ್ಗೆ ಶಿಸ್ತು ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com