ಬಸನಗೌಡ ಪಾಟೀಲ್ ಯತ್ನಾಳ್ ಬಗ್ಗೆ ಹಗರುವಾಗಿ ಮಾತನಾಡಬೇಡಿ: ಅರುಣ್ ಸಿಂಗ್ ಗೆ ಶ್ರೀಗಳ ತಾಕೀತು!

ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಯಾವುದೇ ಕಾರಣಕ್ಕೂ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರ ವಿರುದ್ಧ ಹಗುರವಾಗಿ ಮಾತನಾಡದಂತೆ ತಾಕೀತು ಮಾಡಬೇಕು.
ಅರುಣ್ ಸಿಂಗ್
ಅರುಣ್ ಸಿಂಗ್
Updated on

ಬೆಳಗಾವಿ: ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಯಾವುದೇ ಕಾರಣಕ್ಕೂ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರ ವಿರುದ್ಧ ಹಗುರವಾಗಿ ಮಾತನಾಡದಂತೆ ತಾಕೀತು ಮಾಡಬೇಕು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ  ಆಗ್ರಹಿಸಿದ್ದಾರೆ.

ಯತ್ನಾಳ್ ನಮ್ಮ ನಾಯಕನಲ್ಲ ಎಂಬ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್ ಹೇಳಿಕೆ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಬಸನಗೌಡ ಪಾಟೀಲ್ ಯತ್ನಾಳ ಯಾರು ಎಂದು ಇಡೀ ರಾಜ್ಯಕ್ಕೆ ಗೊತ್ತಿದೆ. ಯತ್ನಾಳ ಅವರು ನಾಯಕರಲ್ಲ ಎಂದು ಅರುಣ್ ಸಿಂಗ್ ಹೇಳಿರುವುದು ನಮ್ಮ ಸಮಯದಾಯದವರಿಗೆ ನೋವು ಉಂಟಾಗಿದೆ ಎಂದರು.

ಹುಕ್ಕೇರಿಯಲ್ಲಿ ನಡೆಯುವ ಪಂಚಮಸಾಲಿ ಸಮಾವೇಶದಲ್ಲಿ ಇದಕ್ಕೆ ಉತ್ತರ ಕೊಡಲಿದ್ದೇವೆ. ಅರುಣ್ ಸಿಂಗ್ ಅವರು ಯತ್ನಾಳ್ ಸೇರಿದಂತೆ ಪಂಚಮಸಾಲಿ ಸಮಾಜದ ನಾಯಕರಿಗೆ ಅವಮಾನಕರ ಹೇಳಿಕೆ ನೀಡಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ ಕಟೀಲ್ ಸೂಚನೆ ನೀಡಬೇಕೆಂದು ಆಗ್ರಹಿಸಿದರು.

ಪಂಚಮಸಾಲಿ ಸುಮುದಾಯಕ್ಕೆ 2ಎ ಮೀಸಲಾತಿ ‌ನೀಡಬೇಕೆಂದು ಆಗ್ರಹಿಸಿ ಇದೇ ಅಕ್ಟೋಬರ್ 21ರಂದು ರಾಜ್ಯ ಮಟ್ಟದ ಲಿಂಗಾಯತ ಪಂಚಮಸಾಲಿಯ ಬೃಹತ್ ಸಮಾವೇಶ ಹುಕ್ಕೇರಿಯಲ್ಲಿ ಆಯೋಜಿಸಲಾಗಿದೆ. ಹುಕ್ಕೇರಿಯಲ್ಲಿ ನಡೆಯುವ ಪಂಚಮಸಾಲಿ ಸಮಾವೇಶದಲ್ಲಿ ಮೀಸಲಾತಿ ನೀಡದ ಸರಕಾರದ ವಿರುದ್ಧ ಹೋರಾಟದ ರೂಪರೇಷೆಗಳನ್ನು ಸಿದ್ಧ ಪಡಿಸುವ ನಿರ್ಣಯ ತೆಗೆದುಕೊಳ್ಳಲಾಗುವುದು. ವಿಧಾನ ಸೌಧದ ಮುಂಭಾಗದಲ್ಲಿ 25 ಲಕ್ಷ ಪಂಚಮಸಾಲಿ ಸಮಾಜದವರು ಆಗಮಿಸಿ ಸರಕಾರಕ್ಕೆ ಒತ್ತಡ ಹಾಕುವ ಪ್ರಯತ್ನ ಮಾಡಿ ಶಕ್ತಿ ಪ್ರದರ್ಶನ ಮಾಡುವ ಅನಿವಾರ್ಯತೆ ಇದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com