ಬಾಗಲಕೋಟೆ: ಮದುವೆ ಮಾಡುವುದಾಗಿ ನಂಬಿಸಿ ಕರೆದೊಯ್ದು ಪ್ರೇಮಿಗಳ ಮರ್ಯಾದಾ ಹತ್ಯೆ; ಮೂವರ ಬಂಧನ

ಅನ್ಯಜಾತಿಯ ಯುವಕನನ್ನು ಪ್ರೀತಿಸಿದ್ದಳೆಂಬ ಕಾರಣಕ್ಕೆ ಮಗಳು ಹಾಗೂ ಆಕೆಯ ಪ್ರಿಯಕರನನ್ನು ತಂದೆ ಹತ್ಯೆ ಮಾಡಿರುವ ಘಟನೆ ತಾಲ್ಲೂಕಿನ ಬೇವಿನಮಟ್ಟಿಯಲ್ಲಿ ನಡೆದಿದೆ.
ಕೊಲೆಯಾದ ಪ್ರೇಮಿಗಳು
ಕೊಲೆಯಾದ ಪ್ರೇಮಿಗಳು
Updated on

ಬಾಗಲಕೋಟೆ: ಅನ್ಯಜಾತಿಯ ಯುವಕನನ್ನು ಪ್ರೀತಿಸಿದ್ದಳೆಂಬ ಕಾರಣಕ್ಕೆ ಮಗಳು ಹಾಗೂ ಆಕೆಯ ಪ್ರಿಯಕರನನ್ನು ತಂದೆ ಹತ್ಯೆ ಮಾಡಿರುವ ಘಟನೆ ತಾಲ್ಲೂಕಿನ ಬೇವಿನಮಟ್ಟಿಯಲ್ಲಿ ನಡೆದಿದೆ.

ಬಾಗಲಕೋಟೆಯ ಬೇವಿನಮಟ್ಟಿ ಗ್ರಾಮದಲ್ಲಿ ಈ ಕೊಲೆ ನಡೆದಿದೆ. ಬೇವಿನಮಟ್ಟಿ ಗ್ರಾಮದ 18ವರ್ಷದ ರಾಜೇಶ್ವರಿ ಕರಡಿ 24 ವರ್ಷದ ವಿಶ್ವನಾಥ್​ ನೆಲಗಿ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಇದೀಗ ಇಬ್ಬರದ್ದು ಕೊಲೆಯಾಗಿದ್ದು, ಆದರೆ ಶವಗಳು ಪತ್ತೆಯಾಗಿಲ್ಲ.

ಕಳೆದ ಎರಡು ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಷಯ ಯುವತಿ ಪೋಷಕರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಆಕೆಗೆ ಎಚ್ಚರಿಕೆ ನೀಡಿದ್ದಾರೆ. ಆತ ಕೆಳ ಜಾತಿಯವನಾಗಿದ್ದು, ಆತನ ಜೊತೆಗಿನ ಒಡನಾಟ ಬಿಡುವಂತೆ ಬುದ್ದಿ ಹೇಳಿದ್ದಾರೆ, ಜಾತಿ ವಿಚಾರವಾಗಿ ಈ ಹಿಂದೆ ಎರಡೂ ಕುಟುಂಬಗಳಲ್ಲಿ ಜಗಳವಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ರವಿ ಬೇವಿನಮಟ್ಟಿ, ಹನುಮಂತ ಬೇವಿನಮಟ್ಟಿ ಹಾಗೂ ಬೀರಪ್ಪ ದಳವಿ ಎಂಬ ಮೂವರನ್ನು ಬಂಧಿಸಲಾಗಿದೆ.

ಆರಂಭದಲ್ಲಿ ಜೋಡಿ ಓಡಿ ಹೋಗಿದ್ದಾರೆ ಎಂದು ಹೇಳಲಾಗಿತ್ತು. ಯುವಕನ ತಾಯಿ ಮಗ ಕಾಣಿಸುತ್ತಿಲ್ಲ ಎಂದು ದೂರು ದಾಖಲಿಸಿದ್ದರು. ಇತ್ತ ಮಗಳನ್ನು ಅಪಹರಿಸಲಾಗಿದೆ ಎಂದು ಅಪ್ರಾಪ್ತೆಯ ಪೋಷಕರು ದೂರು ದಾಖಲಿಸಿದ್ದರು. ಪೊಲೀಸರು ತನಿಖೆ  ವೇಳೆ ಅಪ್ರಾಪ್ತೆಯ ಪೋಷಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮರ್ಯಾದಾ ಹತ್ಯೆ  ಬೆಳಕಿಗೆ ಬಂದಿದೆ.

ವಿಶ್ವನಾಥ್ ಅವರ ಪೋಷಕರು ಜೀವನೋಪಾಯಕ್ಕಾಗಿ ಕೇರಳದ ಕಾಸರಗೋಡಿಗೆ ಕಳುಹಿಸಿದ್ದರು, ಅಲ್ಲಿಆತ ದಿನಗೂಲಿ ಕೆಲಸ ಮಾಡಲು ಪ್ರಾರಂಭಿಸಿದ್ದ. ಅಷ್ಟರಲ್ಲಿ ರಾಜೇಶ್ವರಿ ತನ್ನ ತಂದೆ-ತಾಯಿಗೆ ವಿಶ್ವನಾಥ್ ನನ್ನು ಮದುವೆಯಾಗುವ ಇಚ್ಛೆಯನ್ನು ತಿಳಿಸಿದ್ದಳು.

ಯುವತಿಯ ಕುಟುಂಬಸ್ಥರು ಹೆಣೆದ ಬಲೆಗೆ ವಿಶ್ವನಾಥ್‌ ಬಿದ್ದಿದ್ದ. ಮದುವೆ ಮಾಡಿಕೊಡುವುದಾಗಿ ಹೇಳಿ ಆತನನ್ನು ಕರೆಸಿಕೊಂಡಿದ್ದಾರೆ. ವಿಶ್ವನಾಥ್ ನರಗುಂದ ತಲುಪಿದಾಗ ಯುವತಿಯನ್ನು ಬೇರೆ ವಾಹನದಲ್ಲಿ ಕರೆತರುವಾಗ ಆರೋಪಿಗಳು ಆತನನ್ನು ಜೀಪಿನಲ್ಲಿ ಕೂಡಿ ಹಾಕಿದ್ದರು. ಇಬ್ಬರನ್ನೂ ವಾಹನದಲ್ಲಿಯೇ ಹತ್ಯೆ ಮಾಡಿ, ಶವಗಳನ್ನು ಕೃಷ್ಣಾ ನದಿಗೆ ಎಸೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. “ಮೃತದೇಹಗಳ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ’ ಎಂದು ಎಸ್‌ಪಿ ತಿಳಿಸಿದರು.

ಎರಡು ದಿನಗಳಿಂದ ವಿಶ್ವನಾಥ್ ಅವರನ್ನು ಸಂಪರ್ಕಿಸಲು ಸಾಧ್ಯವಾಗದಿದ್ದಾಗ, ಆತನ ಪೋಷಕರು ಅಕ್ಟೋಬರ್ 3 ರಂದು ನರಗುಂದ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ. ಬಾಲಕಿಯ ಕುಟುಂಬದವರು ಅಕ್ಟೋಬರ್ 7 ರಂದು ಬಾಗಲಕೋಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪಹರಣದ ದೂರು ದಾಖಲಿಸಿದ್ದರು.  ಕೃತ್ಯದಲ್ಲಿ ರಾಜೇಶ್ವರಿ ಅವರ ಪೋಷಕರು ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com