ಬೆಂಗಳೂರು: ಮೇಕ್ರಿ ಸರ್ಕಲ್ ನಿಂದ ಕಾವೇರಿ ಜಂಕ್ಷನ್ ವರೆಗೆ ರಸ್ತೆ ಅಗಲೀಕರಣ

ನಗರದ ಮೇಖ್ರಿ ವೃತ್ತ ಮತ್ತು ಕಾವೇರಿ ಥಿಯೇಟರ್ ಜಂಕ್ಷನ್ ನಡುವೆ ಬಳ್ಳಾರಿ ರಸ್ತೆಯನ್ನು 4-ಚತುಷ್ಪಥದಿಂದ ಷಟ್ಪಥಕ್ಕೆ ವಿಸ್ತರಿಸಲು ಸಿಎಂ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್ ಗೆ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ನಗರದ ಮೇಖ್ರಿ ವೃತ್ತ ಮತ್ತು ಕಾವೇರಿ ಥಿಯೇಟರ್ ಜಂಕ್ಷನ್ ನಡುವೆ ಬಳ್ಳಾರಿ ರಸ್ತೆಯನ್ನು 4-ಚತುಷ್ಪಥದಿಂದ ಷಟ್ಪಥಕ್ಕೆ ವಿಸ್ತರಿಸಲು ಸಿಎಂ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್ ಗೆ ತಿಳಿಸಿದೆ.

1,260 ಮೀಟರ್‌ ರಸ್ತೆ ವಿಸ್ತರಣೆಯಾಗಬೇಕಿದೆ. ಮೇಕ್ರಿ ವೃತ್ತದ ಬಳಿ 6-ಲೇನ್ ರಸ್ತೆಯಿಂದ, ಗಾಯತ್ರಿ ವಿಹಾರ್‌ನ ಗೇಟ್ 4 ರ ಬಳಿ ಇದು ಕಿರಿದಾಗುತ್ತದೆ. ಸುಮಾರು 630 ಮೀಟರ್ ಉದ್ದ ಮತ್ತು 3-3.5 ಮೀಟರ್ ಅಗಲದ ಈ ವಿಸ್ತರಣೆಯು 3-ಲೇನ್‌ನಿಂದ ಕಾವೇರಿ ಜಂಕ್ಷನ್‌ವರೆಗೆ 2-ಲೇನ್ ರಸ್ತೆಯಾಗಿ ಕೊನೆಗೊಳ್ಳುತ್ತದೆ. ಬಲಭಾಗದ ಮಾರ್ಗದ ಅಗಲವನ್ನು 7.5 ಮೀಟರ್‌ನಿಂದ 9.5 ಮೀಟರ್‌ಗೆ ಹೆಚ್ಚಿಸಿದರೆ, ಈಗ 6.5 ಮೀಟರ್‌ನಲ್ಲಿರುವ ಎಡಭಾಗವನ್ನು 9.5 ಮೀಟರ್‌ಗೆ ಹೆಚ್ಚಿಸಲಾಗುವುದು. ಇದರೊಂದಿಗೆ, ವಿಸ್ತರಣೆಯು ಎರಡೂ ಬದಿಗಳಲ್ಲಿ ಮೂರು ಲೇನ್ ಆಗಲಿದೆ.

ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ನಗರಾಭಿವೃದ್ಧಿ ಇಲಾಖೆ) ರಾಕೇಶ್ ಸಿಂಗ್ ಅವರು ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ್ದು, ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ, ಈ ಪ್ರದೇಶದಲ್ಲಿ ರಸ್ತೆ ವಿಸ್ತರಣೆಯ ಪ್ರಮಾಣವನ್ನು ಸೂಚಿಸುವಂತೆ ಸಮರ್ಪಣಾ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಸ್ಥೆ ಸಲ್ಲಿಸಿದೆ.

ಅಫಿಡವಿಟ್ ನ್ನು ದಾಖಲು ಮಾಡಿಕೊಂಡ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್ ಕಿಣಗಿ ಅವರಿದ್ದ ವಿಭಾಗೀಯ ಪೀಠವು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಅಫಿಡವಿಟ್ ಸಲ್ಲಿಸುವಂತೆ ಸೂಚಿಸಿ, ರಸ್ತೆ ಅಗಲೀಕರಣಕ್ಕೆ ವಿಳಂಬ ಮಾಡದೆ ಅನುಮತಿ ನೀಡುವಂತೆ ಸೂಚಿಸಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com