ಹುಬ್ಬಳ್ಳಿ: ಗಣೇಶ ಮೂರ್ತಿ ಹಿಂದೆ ಹಾಕಿದ್ದ ಬಾಲಗಂಗಾಧರ್ ತಿಲಕ್, ಸಾವರ್ಕರ್ ಪೋಸ್ಟರ್ ತೆರವುಗೊಳಿಸಿದ ಪಾಲಿಕೆ ಸಿಬ್ಬಂದಿ

ಬಿಗಿ ಪೊಲೀಸ್ ಭದ್ರತೆ ನಡುವೆ ಹಿಂದೂ ಸಂಘಟನೆಗಳು ಬುಧವಾರ ಬೆಳಗ್ಗೆ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದವು. ನಂತರ, ಕೆಲವು ಹಿಂದೂ ಸಂಘಟನೆಗಳು ಬುಧವಾರ ಮಧ್ಯಾಹ್ನ ವಿ ಡಿ ಸಾವರ್ಕರ್, ಭಗತ್ ಸಿಂಗ್ ಮತ್ತು ಶಿವಾಜಿ ಅವರ ಫ್ಲೆಕ್ಸ್‌ಗಳನ್ನು ಪ್ರವೇಶದ್ವಾರದಲ್ಲಿ ಹಾಕಿದವು.
ಗಣೇಶೋತ್ಸವದಲ್ಲಿ ಪ್ರಹ್ಲಾದ್ ಜೋಶಿ, ಶೆಟ್ಟರ್
ಗಣೇಶೋತ್ಸವದಲ್ಲಿ ಪ್ರಹ್ಲಾದ್ ಜೋಶಿ, ಶೆಟ್ಟರ್

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ (ಎಚ್‌ಡಿಎಂಸಿ) ಅಧಿಕಾರಿಗಳು ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯ ಹಿಂದೆ ಹಾಕಲಾಗಿದ್ದ ಬಾಲಗಂಗಾಧರ ತಿಲಕ್ ಮತ್ತು ವಿಡಿ ಸಾವರ್ಕರ್ ಅವರ ಭಾವಚಿತ್ರವಿರುವ ಪೋಸ್ಟರ್‌ಗಳನ್ನು ತೆರವುಗೊಳಿಸಿದ್ದಾರೆ.

ಈದ್ಗಾ ಮೈದಾನ ಎಂದೇ ಪ್ರಖ್ಯಾತವಾಗಿರುವ ರಾಣಿ ಚೆನ್ನಮ್ಮ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಎಚ್‌ಡಿಎಂಸಿ ಅನುಮತಿ ನೀಡಬೇಕೆಂದು ರಾಣಿಚೆನ್ನಮ್ಮ ಮೈದಾನ ಗಜಾನನ ಉತ್ಸವ ಸಮಿತಿ ಹಾಗೂ ವಿವಿಧ ಸಂಘಟನೆಗಳು ಮನವಿ ಮಾಡಿದ್ದವು. ಹೀಗಾಗಿ ಎಚ್‌ಡಿಎಂಸಿ ಒಪ್ಪಿಗೆ ನೀಡಿತು, ಆದರೆ ಅಂಜುಮನ್-ಎ-ಇಸ್ಲಾಂ ಕರ್ನಾಟಕ ಹೈಕೋರ್ಟ್‌ನ ಮಧ್ಯಪ್ರವೇಶವನ್ನು ಕೋರಿತ್ತು. ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆಯ ಸೆಕ್ಷನ್ 176 ರ ಅಡಿಯಲ್ಲಿ ಅಧಿಕಾರ ಚಲಾಯಿಸಲು ಎಚ್‌ಡಿಎಂಸಿ ಕಮಿಷನರ್‌ಗೆ ಸ್ವಾತಂತ್ರ್ಯವನ್ನು ನೀಡುವ ಆದೇಶವನ್ನು ನ್ಯಾಯಾಲಯವು ಅಂಗೀಕರಿಸಿತು.

ಬಿಗಿ ಪೊಲೀಸ್ ಭದ್ರತೆ ನಡುವೆ ಹಿಂದೂ ಸಂಘಟನೆಗಳು ಬುಧವಾರ ಬೆಳಗ್ಗೆ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದವು. ನಂತರ, ಕೆಲವು ಹಿಂದೂ ಸಂಘಟನೆಗಳು ಬುಧವಾರ ಮಧ್ಯಾಹ್ನ ವಿ ಡಿ ಸಾವರ್ಕರ್, ಭಗತ್ ಸಿಂಗ್ ಮತ್ತು ಶಿವಾಜಿ ಅವರ ಫ್ಲೆಕ್ಸ್‌ಗಳನ್ನು ಪ್ರವೇಶದ್ವಾರದಲ್ಲಿ ಹಾಕಿದವು. ರಾಣಿಚೆನ್ನಮ್ಮ ಮೈದಾನದ ಗಜಾನನ ಉತ್ಸವ ಸಮಿತಿ ಬಾಲಗಂಗಾಧರ ತಿಲಕ್ ಮತ್ತು ಸಾವರ್ಕರ್ ಅವರ ಫೋಟೋಗಳನ್ನು  ಹೊಂದಿರುವ ಬ್ಯಾನರ್ ಸಹ ಹಾಕಿದ್ದರು.

ಈದ್ಗಾ ಮೈದಾನದಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರು, ಫೋಟೋ ಇರುವ ಫ್ಲೆಕ್ಸ್ ಹಾಕಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ನಾಡಿನಲ್ಲಿ ಗಣೇಶೋತ್ಸವಕ್ಕೆ ನಾಂದಿ ಹಾಡಿದ ಬಾಲಗಂಗಾಧರ ತಿಲಕ್ ಹಾಗೂ ಸಾವರ್ಕರ್ ಅವರ ಚಿತ್ರವಿರುವ ಬ್ಯಾನರ್ ಹಾಕುತ್ತಿದ್ದೇವೆ ಎಂದು ಆಯೋಜಕರು ಫ್ಲೆಕ್ಸ್ ಹಾಕುವಲ್ಲಿ ಯಶಸ್ವಿಯಾದರು.

ಸಂಜೆಯ ವೇಳೆಗೆ ಎಚ್‌ಡಿಎಂಸಿ ಆಯುಕ್ತ ಡಾ.ಗೋಪಾಲಕೃಷ್ಣ ಬಿ ಅವರ ನಿರ್ದೇಶನದ ಮೇರೆಗೆ, ಪಾಲಿಕೆ ಸಿಬ್ಬಂದಿ ಗಣೇಶ ಮೂರ್ತಿಯ ಹಿಂದಿದ್ದ ಬ್ಯಾನರ್ ತೆಗೆಯಲು ಸಂಘಟಕರ ಮನವೊಲಿಸುವಲ್ಲಿ ಯಶಸ್ವಿಯಾದರು. ಮೈದಾನದಲ್ಲಿದ್ದ ಎಲ್ಲಾ ಫ್ಲೆಕ್ಸ್ ಮತ್ತು ಬ್ಯಾನರ್‌ಗಳನ್ನು ಸಂಘಟಕರು ತೆರವುಗೊಳಿಸಿದರು.

ಯಾವುದೇ ಫೋಟೋ, ಫ್ಲೆಕ್ಸ್ ಅಥವಾ ಯಾವುದೇ ಫೋಟೋಗಳನ್ನು ಹೊಂದಿರುವ ಬ್ಯಾನರ್ ಅನ್ನು ಹಾಕಬಾರದು ಸೇರಿದಂತೆ ಕೆಲವು ಷರತ್ತುಗಳೊಂದಿಗೆ ಮೈದಾನದಲ್ಲಿ ವಿಗ್ರಹವನ್ನು ಸ್ಥಾಪಿಸಲು ಎಚ್‌ಡಿಎಂಸಿ ಆಯುಕ್ತರು ಅನುಮತಿ ನೀಡಿದರು.

ಆದರೆ ಸಂಘಟಕರು ಅದನ್ನು ಉಲ್ಲಂಘಿಸಿ ಸೂಚನೆಯ ನಂತರ ಅವುಗಳನ್ನು ತೆಗೆದುಹಾಕಿದರು. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮತ್ತು ಬಿಜೆಪಿ ಮುಖಂಡರು ಬುಧವಾರ ಸಂಜೆ ಮೈದಾನಕ್ಕೆ ಭೇಟಿ ನೀಡಿ ಆರತಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com