
ಕಲಬುರಗಿ: ನಗರವನ್ನು ಸ್ವಚ್ಛವಾಗಿಡಲು ಕಲಬುರಗಿ ಮಹಾನಗರ ಪಾಲಿಕೆ ಹೊಸ ಐಡಿಯಾ ಮಾಡಿದೆ. 'ಸ್ವಚ್ಛ ಕಲಬುರಗಿಗಾಗಿ' ರಂಗೋಲಿ ಅಭಿಯಾನವನ್ನು ಆರಂಭಿಸಿದೆ.
ಸಾರ್ವಜನಿಕರು ಕಸ ಎಸೆಯುವ ಪ್ರದೇಶಗಳಲ್ಲಿ ಬೆಳಗ್ಗೆ ಹೊತ್ತು ಪೌರ ಕಾರ್ಮಿಕರು ಕಸ ಸಂಗ್ರಹಿಸಿದ ನಂತರ ಅಲ್ಲಿ ರಂಗೋಲಿ ಹಾಕುತ್ತಿದ್ದಾರೆ. ಇದರ ಮೂಲಕ ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ.
ಇದರಿಂದಾಗಿ ನಗರದಲ್ಲಿನ ಎಸೆ ಎಸೆಯುವ ಪ್ರದೇಶಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಭುವನೇಶ್ ಪಾಟೀಲ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
Advertisement