ಮೈಸೂರು: ವಿದ್ವಾಂಸ, ಇತಿಹಾಸಕಾರ ಪ್ರೊ.ಶೇಖ್ ಅಲಿ ನಿಧನ

ಇತಿಹಾಸ ತಜ್ಞ ಹಾಗೂ ಗೋವಾ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿ ಪ್ರೊ.ಬಿ.ಶೇಖ್ ಅಲಿ ಅನಾರೋಗ್ಯದಿಂದ ಮೈಸೂರಿನಲ್ಲಿ ನಿಧನರಾದರು.
ಶೇಖ್ ಅಲಿ
ಶೇಖ್ ಅಲಿ
Updated on

ಮೈಸೂರು: ಇತಿಹಾಸ ತಜ್ಞ ಹಾಗೂ ಗೋವಾ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿ ಪ್ರೊ.ಬಿ.ಶೇಖ್ ಅಲಿ ಅನಾರೋಗ್ಯದಿಂದ ಮೈಸೂರಿನಲ್ಲಿ ನಿಧನರಾದರು. ಪ್ರೊ ಅಲಿ (98) ಅವರು ಪತ್ನಿ, ಮಕ್ಕಳು  ಹಾಗೂ ಅಪಾರ ಸಂಖ್ಯೆಯ ವಿದ್ಯಾರ್ಥಿಗಳನ್ನು ಅಗಲಿದ್ದಾರೆ. ಟಿಪ್ಪು ವೃತ್ತದ ಹಳೆ ಖಬರಸ್ತಾನದಲ್ಲಿ ಗುರುವಾರ ಸಂಜೆ  ಅಂತ್ಯಕ್ರಿಯೆ ನಡೆಸಲಾಯಿತು.

ಶೇಖ್ ಅಲಿ  ಬ್ರಿಟಿಷರ ಕಾಲದಲ್ಲಿ ಮೈಸೂರು ಸಾಮ್ರಾಜ್ಯದ ಬಗ್ಗೆ ವ್ಯಾಪಕವಾದ ಸಂಶೋಧನೆ ನಡೆಸಿದ್ದರು. ಅವರು 32 ಪುಸ್ತಕಗಳನ್ನು ಬರೆದಿದ್ದಾರೆ ಮತ್ತು ಟಿಪ್ಪು ಸುಲ್ತಾನ್: ಎ ಸ್ಟಡಿ ಇನ್ ಡಿಪ್ಲೊಮಸಿ ಅಂಡ್ ಕಾನ್ಫ್ರಂಟೇಶನ್ ಸೇರಿದಂತೆ ಟಿಪ್ಪು ಸುಲ್ತಾನ್, ಹೈದರ್ ಅಲಿಯೊಂದಿಗೆ ಬ್ರಿಟಿಷ್ ಸಂಬಂಧಗಳು ಮತ್ತಿತರ ಕೃತಿಗಳನ್ನು ಸಂಪಾದಿಸಿದ್ದಾರೆ. 

ಸರಸ್ವತಿಪುರಂ ನಿವಾಸಿ ಶೇಖ್ ಅಲಿ ಅವರು ಮಾನಸಗಂಗೋತ್ರಿ ಕ್ಯಾಂಪಸ್‌ನಲ್ಲಿ ಬೆಳಗೆ ವಿಹಾರವನ್ನು ಇಷ್ಟಪಡುತ್ತಿದ್ದರು. ಅವರು ಪ್ರತಿಷ್ಠಿತ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳಾಗಿದ್ದರು. ಅವರು ಜಾತ್ಯತೀತತೆ, ಗಾಂಧಿಯವರ ಅಹಿಂಸಾ ಮಾರ್ಗಗಳು ಮತ್ತು ಸಾಂಸ್ಕೃತಿಕ ವೈವಿಧ್ಯತೆಯ ಗೌರವದಲ್ಲಿ ಬಲವಾದ ನಂಬಿಕೆಯನ್ನು ಹೊಂದಿದ್ದರು. ಬಡವರ ಶೈಕ್ಷಣಿಕ ಸಬಲೀಕರಣಕ್ಕಾಗಿ ಶ್ರಮಿಸಿದರು. 

ಪ್ರೊ ಅಲಿ ಅವರು ಬಿಎ (ಆನರ್ಸ್), ಮೈಸೂರು ವಿಶ್ವವಿದ್ಯಾನಿಲಯದಿಂದ ಎಂಎ ) ಮತ್ತು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯ ಮತ್ತು ಲಂಡನ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ.  ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು ಮತ್ತು 1986 ರಲ್ಲಿ ಇಂಡಿಯನ್ ಹಿಸ್ಟರಿ ಕಾಂಗ್ರೆಸ್, 47 ನೇ ಅಧಿವೇಶನದ ಅಧ್ಯಕ್ಷರಾಗಿದ್ದರು ಮತ್ತು ಕರ್ನಾಟಕ ಇತಿಹಾಸ ಸಮ್ಮೇಳನದ ಸಂಸ್ಥಾಪಕ-ಅಧ್ಯಕ್ಷರಲ್ಲದೆ ಆಸ್ಟ್ರೇಲಿಯಾದ ಕ್ಯಾನ್‌ಬೆರಾದಲ್ಲಿನ XXVIII ಇಂಟರ್ ನ್ಯಾಷನಲ್ ಕಾಂಗ್ರೆಸ್ ಆಫ್ ಓರಿಯಂಟಲಿಸ್ಟ್‌ಗಳ ಭಾರತೀಯ ಇತಿಹಾಸ ವಿಭಾಗದ ಅಧ್ಯಕ್ಷರಾಗಿದ್ದರು.

ಪ್ರೊಫೆಸರ್ ಆಲಿ  ಮೈಸೂರು ವಿಶ್ವವಿದ್ಯಾನಿಲಯದ ಮಾನವಿಕ ಮತ್ತು ಸಮಾಜ ವಿಜ್ಞಾನಗಳ ಸಂಶೋಧನೆಗಾಗಿ ಪ್ರತಿಷ್ಠಿತ ಗೋಲ್ಡನ್ ಜುಬಿಲಿ ಪ್ರಶಸ್ತಿಗೆ ಭಾಜನರಾಗಿದ್ದರು, ರಾಜ್ಯೋತ್ಸವ ಪ್ರಶಸ್ತಿ, ಮಿಥಿಕ್ ಸೊಸೈಟಿ ಆಫ್ ಇಂಡಿಯಾ ಪ್ರಶಸ್ತಿ ಮತ್ತು 2003 ರಲ್ಲಿ ಮೌಲಾನಾ ಜೌಹರ್ ಪ್ರಶಸ್ತಿಯನ್ನು ಪಡೆದಿದ್ದರು. ಅವರ ನಿವೃತ್ತಿಯ ನಂತರ ಮೈಸೂರಿನಲ್ಲಿ ಸುಲ್ತಾನ್ ಶಹೀದ್ ಎಜುಕೇಷನಲ್ ಟ್ರಸ್ಟ್ ಸ್ಥಾಪಿಸಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com