ಹೊರ ವರ್ತುಲ ರಸ್ತೆಯಲ್ಲಿ ಮೆಟ್ರೋ ಬ್ಯಾರಿಕೇಡ್‌ಗೆ ಕಾರು ಡಿಕ್ಕಿ; ಚಾಲಕನಿಗೆ ಗಾಯ

ಹೊರ ವರ್ತುಲ ರಸ್ತೆಯ ಮೆಟ್ರೊ ಬ್ಯಾರಿಕೇಡ್‌ಗೆ ವೇಗವಾಗಿ ಬಂದ ಎಲೆಕ್ಟ್ರಿಕ್ ಕಾರು ಡಿಕ್ಕಿ ಹೊಡೆದ ಘಟನೆ ನಿನ್ನೆ ಸಾಯಂಕಾಲ 4 ಗಂಟೆ ಸುಮಾರಿಗೆ ನಡೆದಿದೆ. ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಟಾಟಾ ನೆಕ್ಸಾನ್ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.
ಅಪಘಾತವಾದ ಕಾರು
ಅಪಘಾತವಾದ ಕಾರು

ಬೆಂಗಳೂರು: ಹೊರ ವರ್ತುಲ ರಸ್ತೆಯ ಮೆಟ್ರೊ ಬ್ಯಾರಿಕೇಡ್‌ಗೆ ವೇಗವಾಗಿ ಬಂದ ಎಲೆಕ್ಟ್ರಿಕ್ ಕಾರು ಡಿಕ್ಕಿ ಹೊಡೆದ ಘಟನೆ ನಿನ್ನೆ ಸಾಯಂಕಾಲ 4 ಗಂಟೆ ಸುಮಾರಿಗೆ ನಡೆದಿದೆ. ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಟಾಟಾ ನೆಕ್ಸಾನ್ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.

ಬೆಂಗಳೂರು ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಘಟನೆಯನ್ನು ಖಚಿತಪಡಿಸಿದ್ದಾರೆ. ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮೆಟ್ರೊಗಾಗಿ ಕೆಲಸ ಮಾಡುವ ಯಾರೊಬ್ಬರಿಗೂ ಏನೂ ಆಗಿಲ್ಲ ಎಂದಿದ್ದಾರೆ. 

ನಾನು ನಿನ್ನೆ ಸಾಯಂಕಾಲ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಸಂಜೆ 4.15 ರ ಹೊತ್ತಿಗೆ ಸಿಲ್ಕ್ ಬೋರ್ಡ್ ಸಿಗ್ನಲ್‌ನಿಂದ 500 ಮೀಟರ್‌ ಹಿಂದೆ ಈ ಮೂಲಕ ಹಾದುಹೋಗಿದ್ದೆ. ಬಿಳಿ ನೆಕ್ಸಾನ್ ಕಾರು ಬದಿಯಿಂದ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದಿದೆ. ಚಾಲಕನ ಏರ್‌ಬ್ಯಾಗ್‌ಗಳು ಹೊರಬಂದಿದ್ದು, ಮುಂಭಾಗ ಸಂಪೂರ್ಣ ಜಖಂಗೊಂಡಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. 

ಸ್ಥಳದಲ್ಲಿ ಮೆಟ್ರೊಗಾಗಿ AFCONS ನಿರ್ಮಾಣ ಕಾರ್ಯ ನಡಯುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com