ಬೆಳಗಾವಿಯ 13 ಕಲ್ಲಿನ ಕ್ವಾರಿಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಸರ್ಕಾರ ಆದೇಶ: ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಫಲಶ್ರುತಿ

'ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್' ((New Indian Express)  ನಲ್ಲಿ ಪ್ರಕಟವಾದ 'ಬೆಳಗಾವಿಯ ಕ್ವಾರಿ ಸ್ಫೋಟದಿಂದ ಜೀವಗಳು, ಅಣೆಕಟ್ಟು ಅಪಾಯದಲ್ಲಿದೆ' ಎಂಬ ವರದಿಯನ್ನು ಗಂಭೀರವಾಗಿ ಪರಿಗಣಿಸಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಕ್ವಾರಿಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಆದೇಶ ನೀಡಿದೆ.
ಕಲ್ಲಿನ ಕ್ವಾರಿ
ಕಲ್ಲಿನ ಕ್ವಾರಿ

ಬೆಳಗಾವಿ: 'ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್' ನಲ್ಲಿ (New Indian Express) ಪ್ರಕಟವಾದ 'ಬೆಳಗಾವಿಯ ಕ್ವಾರಿ ಸ್ಫೋಟದಿಂದ ಜೀವಗಳು, ಅಣೆಕಟ್ಟು ಅಪಾಯದಲ್ಲಿದೆ' ಎಂಬ ವರದಿಯನ್ನು ಗಂಭೀರವಾಗಿ ಪರಿಗಣಿಸಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಕ್ವಾರಿಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಆದೇಶ ನೀಡಿದೆ. ಸರ್ಕಾರ ನಿಗದಿಪಡಿಸಿದ ಷರತ್ತುಗಳನ್ನು ಪೂರೈಸುವವರೆಗೆ 13 ಕಲ್ಲು ಪುಡಿ ಮಾಡುವ ಘಟಕ ಕ್ವಾರಿಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಸರ್ಕಾರ ಆದೇಶ ಹೊರಡಿಸಿದೆ.

ಈ ಘಟಕಗಳಿಗೆ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸುವಂತೆ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಗೆ (ಹೆಸ್ಕಾಂ) ಗಣಿ ಇಲಾಖೆ ಸೂಚಿಸಿದೆ. ಲೋಕಾಯುಕ್ತ ಅಧಿಕಾರಿಗಳು ಕೂಡ ಕಲ್ಲು ಕ್ವಾರಿಗಳ ನಿಯಮ ಉಲ್ಲಂಘನೆಯ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಬೆಳಗಾವಿ ಲೋಕಾಯುಕ್ತ ಅಧಿಕಾರಿಗಳು ಕ್ವಾರಿಗಳ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಾನಿಯ ಅಂದಾಜು ಮಾಡಿದರು.

13 ಘಟಕಗಳು ಬೈಲಹೊಂಗಲ ತಾಲೂಕಿನ ಮರಿಕಟ್ಟಿ ಮತ್ತು ಗಣಿಕೊಪ್ಪ ಗ್ರಾಮಗಳಲ್ಲಿ ಜಿಲೆಟಿನ್ ಸ್ಫೋಟ ನಡೆಸುತ್ತಿದ್ದು, ಜನಜೀವನ, ಕೃಷಿ ಬೆಳೆಗಳು, ಸುತ್ತಮುತ್ತಲಿನ ಗ್ರಾಮಗಳ ಮನೆಗಳು, ತಿಗಡಿ ಗ್ರಾಮದ ಹರಿನಾಲ ಜಲ ಸಂಗ್ರಹಾಗಾರ ಹಾಗೂ ಗ್ರಾಮಸ್ಥರು ಸಂಚರಿಸುವ ಕಿರಿದಾದ ರಸ್ತೆಗೆ ಅಪಾಯ ತಂದೊಡ್ಡಿವೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com