ಬೆಂಗಳೂರು: ನಿರ್ದಿಷ್ಟ ಮಾರಾಟಗಾರರಿಂದ ಪುಸ್ತಕ ಖರೀದಿಸುವಂತೆ ಪೋಷಕರಿಗೆ ಒತ್ತಾಯಿಸಿದ ಶಾಲೆಗೆ ಸಿಬಿಎಸ್ ಇ ನೋಟಿಸ್

ಸಿಬಿಎಸ್‌ಇ ಮಾರ್ಗಸೂಚಿಗಳನ್ನು ಅನುಸರಿಸದೆ, ನಿರ್ದಿಷ್ಟ ಮಾರಾಟಗಾರರಿಂದ ಶಾಲಾ ಪುಸ್ತಕಗಳು ಮತ್ತು ಸಮವಸ್ತ್ರಗಳನ್ನು ಖರೀದಿಸುವಂತೆ ಪೋಷಕರನ್ನು ಒತ್ತಾಯಿಸಿದ ಮತ್ತು ಬಲವಂತದ ತಂತ್ರಗಳನ್ನು ಬಳಸಿದ್ದಕ್ಕಾಗಿ ಬೆಂಗಳೂರಿನ...
ಸಿಬಿಎಸ್ಇ
ಸಿಬಿಎಸ್ಇ
Updated on

ಬೆಂಗಳೂರು: ಸಿಬಿಎಸ್‌ಇ ಮಾರ್ಗಸೂಚಿಗಳನ್ನು ಅನುಸರಿಸದೆ, ನಿರ್ದಿಷ್ಟ ಮಾರಾಟಗಾರರಿಂದ ಶಾಲಾ ಪುಸ್ತಕಗಳು ಮತ್ತು ಸಮವಸ್ತ್ರಗಳನ್ನು ಖರೀದಿಸುವಂತೆ ಪೋಷಕರನ್ನು ಒತ್ತಾಯಿಸಿದ ಮತ್ತು ಬಲವಂತದ ತಂತ್ರಗಳನ್ನು ಬಳಸಿದ್ದಕ್ಕಾಗಿ ಬೆಂಗಳೂರಿನ ಚಿಮಣಿ ಹಿಲ್ಸ್‌ನಲ್ಲಿರುವ ಯುರೋ ಸ್ಕೂಲ್ ಗೆ ಸಿಬಿಎಸ್ ಇ ನೋಟಿಸ್ ಜಾರಿ ಮಾಡಿದೆ.

ಹೆಚ್ಚಿನ ಹಣ ಸಂಪಾದನೆಗಾಗಿ ಇಂತಹ ದಂಧೆಯಲ್ಲಿ ತೊಡಗಿರುವ ಹಲವು ಶಾಲೆಗಳಲ್ಲಿ ಈ ಸಮಸ್ಯೆ ತಲೆದೋರಿದೆ ಎಂದು ನಗರದ ಪೋಷಕರ ಸಂಘ ಆತಂಕ ವ್ಯಕ್ತಪಡಿಸಿದೆ. ಸಾಮಾನ್ಯವಾಗಿ NECRT ಪುಸ್ತಕಗಳನ್ನು ಬದಲಾದ ಬೆಲೆಗಳು ಮತ್ತು ಹೆಸರುಗಳೊಂದಿಗೆ ಮರುಮುದ್ರಣ ಮಾಡಲಾಗುತ್ತದೆ ಅಥವಾ ಅವುಗಳನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ ಮತ್ತು ನಿರ್ದಿಷ್ಟ ಮಾರಾಟಗಾರರಿಂದಲೇ ಖರೀದಿಸಲು ಪೋಷಕರನ್ನು ಸೂಚಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಕರ್ನಾಟಕ ವಾಯ್ಸ್ ಆಫ್ ಪೇರೆಂಟ್ಸ್ ಅಸೋಸಿಯೇಷನ್ ​​ಅಧ್ಯಕ್ಷ ಮೊಹಮ್ಮದ್ ಶಕೀಲ್ ಮಾತನಾಡಿ, ಹಲವು ಶಾಲೆಗಳು ಕಾನೂನನ್ನು ಉಲ್ಲಂಘಿಸುತ್ತಿವೆ ಮತ್ತು ಬದಲಾದ ಬೆಲೆಯಲ್ಲಿ ಪುಸ್ತಕಗಳನ್ನು ಮರುಮುದ್ರಣ ಮಾಡುವ ತಂತ್ರಗಳನ್ನು ಬಳಸುತ್ತಿವೆ. ಪುಸ್ತಕಗಳನ್ನು ಎರಡು ಭಾಗಗಳಾಗಿ ವಿಭಜಿಸಿ ವೆಚ್ಚವನ್ನು ದ್ವಿಗುಣಗೊಳಿಸುತ್ತಿವೆ ಅಥವಾ ನಿರ್ದಿಷ್ಟ ಮಾರಾಟಗಾರರ ಮೂಲಕ ಪುಸ್ತಕಗಳನ್ನು ಮಾರಾಟ ಮಾಡುತ್ತಿವೆ ಎಂದು ದೂರಿದ್ದಾರೆ.

ರಾಜ್ಯದ ಅಗತ್ಯಗಳಿಗೆ ಅನುಗುಣವಾಗಿ ಎನ್‌ಸಿಇಆರ್‌ಟಿ ಪುಸ್ತಕಗಳನ್ನು ಸ್ವಲ್ಪಮಟ್ಟಿಗೆ ತಿರುಚಲು ರಾಜ್ಯಗಳಿಗೆ ಸ್ವಾತಂತ್ರ್ಯವಿದೆ. ಆದರೆ ಶಾಲೆಗಳು ಅದನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ ಮತ್ತು ಅಂತಿಮವಾಗಿ ಖಾಸಗಿ ಪ್ರಕಾಶಕರ ಅಡಿಯಲ್ಲಿ ತಮ್ಮದೇ ಆದ ಪುಸ್ತಕಗಳನ್ನು ಮುದ್ರಿಸುತ್ತಿವೆ ಮತ್ತು ಅದಕ್ಕೆ ತಮ್ಮದೇ ಪಠ್ಯಕ್ರಮ ಎಂದು ಹೆಸರಿಸುತ್ತಿವೆ ಎಂದು ಅವರು ವಿವರಿಸಿದ್ದಾರೆ.

ಈ ಸಂಬಂಧ ಅಜಯ್ ಮರ್ಚೆಂಟ್ ಎಂಬ ಪೋಷಕರು ಅಂತಿಮವಾಗಿ ಡಿಸೆಂಬರ್ 2021ರಲ್ಲಿ CBSEಗೆ ಪತ್ರ ಬರೆದಿದ್ದು, ಶಾಲೆಯು CBSE ಸೂಚಿಸಿದ NCERT ಪಠ್ಯಪುಸ್ತಕಗಳನ್ನು ಬಳಸುತ್ತಿಲ್ಲ ಮತ್ತು ತಮ್ಮದೇ ಪಠ್ಯಕ್ರಮವನ್ನು ಮುದ್ರಿಸುವಲ್ಲಿ ಮತ್ತು ಪ್ರಕಟಿಸುವಲ್ಲಿ ತೊಡಗಿಸಿಕೊಂಡಿವೆ ಎಂದು ಹೇಳಿದ್ದರು. ಪೋಷಕರು ಸಮವಸ್ತ್ರಗಳು, ಪಠ್ಯಪುಸ್ತಕಗಳು, ಶೂಗಳು ಮತ್ತು ಇತರ ಅಗತ್ಯಗಳನ್ನು ನಿರ್ದಿಷ್ಟ ಬ್ರಾಂಡ್ ಮತ್ತು ಮಾರಾಟಗಾರರಿಂದಲೇ ಖರೀದಿಸಲು ಒತ್ತಾಯಿಸುತ್ತಿವೆ ಎಂದು ದೂರಿದ್ದರು.

ದೂರಿನ ಅನ್ವಯ ಸಿಬಿಎಸ್ ಇ ಯುರೋ ಸ್ಕೂಲ್ ಗೆ ನೋಟಿಸ್ ನೀಡಿದ್ದು, ಮಂಡಳಿಯ ನಿರ್ದೇಶನಗಳನ್ನು  ಮತ್ತು ಎಲ್ಲಾ ಮಾನದಂಡಗಳನ್ನು ಅನುಸರಿಸುವಂತೆ ಶಾಲೆಗೆ ಸೂಚಿಸಿದೆ. ಅಲ್ಲದೆ ಪೋಷಕರು ಪುಸ್ತಕಗಳು/ನೋಟ್‌ಬುಕ್‌ಗಳನ್ನು ಮುಕ್ತ ಮಾರುಕಟ್ಟೆಗಳಿಂದ ಖರೀದಿಸಲು ಸಮರ್ಥರಾಗಿದ್ದಾರೆಯೇ ಹೊರತು ನಿರ್ದಿಷ್ಟ ಮಾರಾಟಗಾರರಿಂದಲ್ಲ ಎಂದು ಸ್ಪಷ್ಟಪಡಿಸಿದೆ. ಈ ನೋಟಿಸ್ ಗೆ ಏಳು ದಿನಗಳೊಳಗೆ ‘ಕ್ರಮ ತೆಗೆದುಕೊಂಡ ವರದಿ’ ನೀಡುವಂತೆ ಸೂಚಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com