ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಖಾಸಗಿ ವಿಡಿಯೋ ಅಪ್ ಲೋಡ್; ಸ್ನೇಹಿತರ ಜೊತೆ ಸೇರಿ ವೈದ್ಯನ ಕೊಲೆ ಮಾಡಿದ ಪ್ರಿಯತಮೆ!
ಖಾಸಗಿ ಕ್ಷಣದ ಫೋಟೊ ಹಾಗೂ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಿಗೆ ಹಾಕಿದ್ದಕ್ಕೆ ಆಕ್ರೋಶಗೊಂಡ ಪ್ರಿಯತಮೆ ತನ್ನ ಮೂವರು ಸ್ನೇಹಿತರ ಜೊತೆಗೂಡಿ ಪ್ರಿಯಕರನನ್ನೇ ಕೊಲೆ ಮಾಡಿರುವ ಘಟನೆ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯ ಮೈಕೋಲೇಔಟ್‌ನಲ್ಲಿ ನಡೆದಿದೆ.
Published: 20th September 2022 11:26 AM | Last Updated: 20th September 2022 01:44 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಖಾಸಗಿ ಕ್ಷಣದ ಫೋಟೊ ಹಾಗೂ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಿಗೆ ಹಾಕಿದ್ದಕ್ಕೆ ಆಕ್ರೋಶಗೊಂಡ ಪ್ರಿಯತಮೆ ತನ್ನ ಮೂವರು ಸ್ನೇಹಿತರ ಜೊತೆಗೂಡಿ ಪ್ರಿಯಕರನನ್ನೇ ಕೊಲೆ ಮಾಡಿರುವ ಘಟನೆ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯ ಮೈಕೋಲೇಔಟ್‌ನಲ್ಲಿ ನಡೆದಿದೆ.
ವಿಕಾಸ್ ಕೊಲೆಯಾದ ಪ್ರಿಯಕರ. ಪ್ರತೀಷಾ ಮತ್ತು ಆಕೆಯ ಸ್ನೇಹಿತರಾದ ಸುಶೀಲ್, ಗೌತಮ್ ಬಂಧಿತರು. ಮತ್ತೊಬ್ಬ ಆರೋಪಿ ಸೂರ್ಯ ತಲೆಮರೆಸಿಕೊಂಡಿದ್ದಾನೆ.
ಚೆನ್ನೈ ಮೂಲದ ವಿಕಾಸ್ ವೈದ್ಯನಾಗಿದ್ದು, ಬಿಟಿಎಂ ಲೇಔಟ್ ನಲ್ಲಿ ವಾಸವಾಗಿದ್ದ, ಆತ ಪ್ರತೀಷಾ ಇಬ್ಬರು ಪ್ರೀತಿ ಮಾಡುತ್ತಿದ್ದ, ಆದರೆ ಆಕೆಯ ಜೊತೆಗಿದ್ದ ಖಾಸಗಿ ಕ್ಷಣಗಳಿದ್ದ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ ಲೋಡ್ ಮಾಡಿದ್ದ, ಈ ವಿಷಯ ತಿಳಿದ ಪ್ರತೀಷಾ ತನ್ನ ಗೆಳೆಯರಿಗೆ ವಿಷಯ ತಿಳಿಸಿದ್ದಳು. ಸ್ನೇಹಿತರ ಜೊತೆ ಸೇರಿ ನೆಲ ಒರೆಸುವ ಮಾಪ್ ಮತ್ತು ಪ್ಲಾಸ್ಟಿಕ್ ಬಾಟಲ್ ನಿಂದ ವಿಕಾಸ್ ಮೇಲೆ ಹಲ್ಲೆ ನಡೆಸಿದ್ದರು, ನಂತರ ವಿಕಾಸ್ ನನ್ನು ಆಸ್ಪತ್ರಗೆ ದಾಖಲಿಸಲಾಗಿತ್ತು, ಎರಡು ದಿನ ಕೋಮಾದಲ್ಲಿದ್ದ ವಿಕಾಸ್ ಸಾವನ್ನಪ್ಪಿದ್ದ.
ಇದನ್ನೂ ಓದಿ: ತನ್ನದೇ ಸಾವು ಸೃಷ್ಟಿಸಿ, ಬೇರೆಯವರ ಹೆಸರಿನಲ್ಲಿ ಬದುಕುತ್ತಿದ್ದ ಕುಖ್ಯಾತ ಗ್ಯಾಂಗ್ ಸ್ಟರ್ 7 ವರ್ಷಗಳ ಬಳಿಕ ಅರೆಸ್ಟ್!
ಸೆಪ್ಟಂಬರ್ 8 ರಂದು ವಿಕಾಸ್ ಗೆ ಸೇರಿದ ಲ್ಯಾಪ್ ಟಾಪ್ ನೋಡಿದ್ದ ಪ್ರತೀಷಾ, ಅದರಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಆಕೆಯ ಅಶ್ಲೀಲ ವಿಡಿಯೋಗಳನ್ನು ಅಪ್ ಲೋಡ್ ಮಾಡಿದ್ದನ್ನು ತಿಳಿದು ಆಕೆ ತನ್ನ ಸ್ನೇಹಿತ ಸುಶೀಲ್ ಗೆ ತಿಳಿಸಿದ್ದಳು.
ಹೊಸ ಮೈಕೋ ಲೇಔಟ್ ನಲ್ಲಿರುವ ಸುಶೀಲ್ ಮನೆಗೆ ವಿಕಾಸ್ ಮತ್ತು ಪ್ರತೀಷಾ ಬಂದಿದ್ದರು. ಈ ವೇಳೆಗಾಗಲೇ ಗೌತಮ್ ಮತ್ತು ಸೂರ್ಯ ಆ ಮನೆಯಲ್ಲಿದ್ದರು. ಫೋಟೋ ಅಪ್ ಲೋಡ್ ಮಾಡಿರುವ ಬಗ್ಗೆ ವಿಕಾಸ್ ನನ್ನು ಪ್ರಶ್ನಿಸಿದ್ದರು. ನಂತರ ಆತನ ಮೇಲೆ ಹಲ್ಲೆ ನಡೆಸಿದ್ದರು.