'ಸೈಮಾ' ಸಮಾರಂಭ ಮುಗಿದ ನಂತರ ಐಷಾರಾಮಿ ಹೊಟೇಲ್ ನಲ್ಲಿ ಭರ್ಜರಿ ಪಾರ್ಟಿ: ಆಯೋಜಕರು, ಹೋಟೆಲ್​ ಮ್ಯಾನೇಜರ್​ಗೆ ನೋಟಿಸ್

ಈ ಬಾರಿ ದಕ್ಷಿಣ ಭಾರತೀಯ ಚಿತ್ರರಂಗದ ‘ಸೈಮಾ’ ಪ್ರಶಸ್ತಿ ಪ್ರದಾನ (SIIMA Awards 2022) ಕಾರ್ಯಕ್ರಮ ಬೆಂಗಳೂರಿನಲ್ಲಿ ಏರ್ಪಾಡಾಗಿತ್ತು. 10ನೇ ವರ್ಷದ ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತೀಯ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಭಾಗಿ ಆಗಿದ್ದರು. 
ಸೈಮಾ ಪ್ರಶಸ್ತಿ ಪ್ರದಾನ
ಸೈಮಾ ಪ್ರಶಸ್ತಿ ಪ್ರದಾನ
Updated on

ಬೆಂಗಳೂರು: ಈ ಬಾರಿ ದಕ್ಷಿಣ ಭಾರತೀಯ ಚಿತ್ರರಂಗದ ‘ಸೈಮಾ’ ಪ್ರಶಸ್ತಿ ಪ್ರದಾನ (SIIMA Awards 2022) ಕಾರ್ಯಕ್ರಮ ಬೆಂಗಳೂರಿನಲ್ಲಿ ಏರ್ಪಾಡಾಗಿತ್ತು. 10ನೇ ವರ್ಷದ ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತೀಯ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಭಾಗಿ ಆಗಿದ್ದರು. 

ಈ ಕಾರ್ಯಕ್ರಮದ ಬಳಿಕ ಪ್ರತಿಷ್ಠಿತ ಸ್ಟಾರ್​ ಹೋಟೆಲ್​ನಲ್ಲಿ ಸೆಲೆಬ್ರಿಟಿಗಳು ಪಾರ್ಟಿ ಮಾಡಿದ್ದರು. ಅಷ್ಟೇ ಆಗಿದ್ದರೆ ಸುದ್ದಿಯಾಗುತ್ತಿರಲಿಲ್ಲ. ಸೂಕ್ತ ನಿಯಮಗಳನ್ನು ಪಾಲಿಸದೇ ಮಧ್ಯರಾತ್ರಿ 1 ಗಂಟೆಗೆ ಮುಕ್ತಾಯವಾಗಬೇಕಿದ್ದ ಪಾರ್ಟಿ ಬೆಳಗಿನ ಜಾವ ಮೂರೂವರೆಯವರೆಗೂ ಮುಂದುವರಿದಿತ್ತು. 

ಇದು ಪೊಲೀಸರ ಕೆಂಗಣ್ಣಿಗೆ ಕಾರಣವಾಗಿದ್ದು ಈ ಘಟನೆಗೆ ಸಂಬಂಧಿಸಿದಂತೆ ಕಬ್ಬನ್​ ಪಾರ್ಕ್​ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪಾರ್ಟಿ ಆಯೋಜಕರು ಮತ್ತು ಹೋಟೆಲ್​ ಮ್ಯಾನೇಜರ್​ಗೆ ನೋಟಿಸ್​ ನೀಡಲಾಗಿದ್ದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. 

ಚಿತ್ರರಂಗವೆಂದರೆ ಅಲ್ಲಿ ಪಾರ್ಟಿ, ಮೋಜು-ಮಸ್ತಿ ಸಾಮಾನ್ಯ. ‘ಸೈಮಾ’ ಸಮಾರಂಭ ಮುಗಿದ ನಂತರವೂ ಈ ರೀತಿ ಪಾರ್ಟಿ ಆಯೋಜನೆಗೊಂಡಿತ್ತು. ಅದರಲ್ಲಿ ಕನ್ನಡ ಚಿತ್ರರಂಗದ ಅನೇಕ ನಟ-ನಟಿಯರು, ತಂತ್ರಜ್ಞರು ಮಾತ್ರವಲ್ಲದೇ ಹಿಂದಿ ಮತ್ತು ತೆಲುಗು ಚಿತ್ರರಂಗದ ಸೆಲೆಬ್ರಿಟಿಗಳು ಕೂಡ ಭಾಗಿಯಾಗಿದ್ದರು.

ಬೆಂಗಳೂರಿನ ವಿಠಲ್​ ಮಲ್ಯ ರಸ್ತೆಯಲ್ಲಿ ಇರುವ ಐಷಾರಾಮಿ ಹೋಟೆಲ್​ನಲ್ಲಿ ಸೆಪ್ಟೆಂಬರ್​ 12ರಂದು ‘ಸೈಮಾ’ ಪಾರ್ಟಿ ನಡೆಯುತ್ತಿತ್ತು. ಈ ವೇಳೆ ಕಾನೂನು ಪಾಲನೆಯ ಪರಿಶೀಲನೆಗಾಗಿ ಪೊಲೀಸರು ರಾತ್ರಿ 12 ಗಂಟೆ ಸಮಯದಲ್ಲಿ ಹೋಟೆಲ್​ಗೆ ಭೇಟಿ ನೀಡಿದ್ದರು. ಒಂದು ಗಂಟೆಗೆ ಪಾರ್ಟಿ ಮುಗಿಸುವಂತೆ ಆಯೋಜಕರಿಗೆ ಪೊಲೀಸರು ಸೂಚನೆ ನೀಡಿದರು. ಆದರೆ ಅದನ್ನು ಪಾಲಿಸದೆ ನಸುಕಿನ 3.30ರವರೆಗೂ ಪಾರ್ಟಿ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com