ಬೆಂಗಳೂರು: ಕಾರಂತ್ ಲೇ ಔಟ್ ಟೆಂಡರ್ ಗೆ ಸುಪ್ರೀಂ ಕೋರ್ಟ್ ಗಡುವು ನಿಗದಿ

ನಗರದ ಡಾ.ಶಿವರಾಮ ಕಾರಂತ ಬಡಾವಣೆ ನಿರ್ಮಾಣದ ಟೆಂಡರ್ ಪ್ರಕ್ರಿಯೆ ಸೆಪ್ಟೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಕಾರಂತ್ ಲೇ ಔಟ್ ನಲ್ಲಿ ಅನಧಿಕೃತ ಕಟ್ಟಡವನ್ನು ಬಿಡಿಎ ನೆಲಸಮಗೊಳಿಸುತ್ತಿರುವುದು
ಕಾರಂತ್ ಲೇ ಔಟ್ ನಲ್ಲಿ ಅನಧಿಕೃತ ಕಟ್ಟಡವನ್ನು ಬಿಡಿಎ ನೆಲಸಮಗೊಳಿಸುತ್ತಿರುವುದು
Updated on

ಬೆಂಗಳೂರು: ನಗರದ ಡಾ.ಶಿವರಾಮ ಕಾರಂತ ಬಡಾವಣೆ ನಿರ್ಮಾಣದ ಟೆಂಡರ್ ಪ್ರಕ್ರಿಯೆ ಸೆಪ್ಟೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಇಲ್ಲಿಯವರೆಗೆ ಸ್ವಾಧೀನಪಡಿಸಿಕೊಂಡಿರುವ 2,250 ಎಕರೆ ಭೂಮಿಯಲ್ಲಿ ಒಟ್ಟು 25,000 ನಿವೇಶನಗಳನ್ನು ಯೋಜಿಸಲಾಗಿದೆ.

ಬಿಡಿಎ ಮತ್ತು ಕರ್ನಾಟಕ ರಾಜ್ಯ ಮತ್ತು ಇತರರ ನಡುವೆ ನಡೆಯುತ್ತಿರುವ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಎಸ್ ಅಬ್ದುಲ್ ನಜೀರ್ ಮತ್ತು ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಗುರುವಾರ ಈ ನಿರ್ದೇಶನ ನೀಡಿದರು. ಅಕ್ಟೋಬರ್ 10 ಅಥವಾ ಅದಕ್ಕೂ ಮೊದಲು ತನ್ನ ಸ್ಥಿತಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಬಿಡಿಎಗೆ ತಿಳಿಸಲಾಗಿದೆ.

ಆದೇಶದ ಪ್ರಕಾರ, ಬಡಾವಣೆಯೊಳಗೆ ಸಂಪರ್ಕಕ್ಕಾಗಿ ಅಗತ್ಯವಿರುವ 45 ಎಕರೆ ಮತ್ತು 17.25 ಗುಂಟಾಗಳನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನಾಲ್ಕು ವಾರಗಳ ಕಾಲ ಬಿಡಿಎಗೆ ಅನುಮತಿ ನೀಡಲು ಪೀಠವು ಒಪ್ಪಿಗೆ ನೀಡಿದೆ. ಕಾರಂತ್ ಲೇ ಔಟ್ ನಲ್ಲಿ ರಸ್ತೆಗಳನ್ನು ಒದಗಿಸಲು ಬಿಡಿಎಗೆ ಈ ಭೂಮಿ ಅಗತ್ಯವಿದೆ ಎಂದು ಬಿಡಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಲೇಔಟ್ ರಚಿಸಲು ಈಗಾಗಲೇ 2,475 ಕೋಟಿ ರೂ.ಗಳ ಟೆಂಡರ್ ಕರೆಯಲಾಗಿದೆ. ತಾಂತ್ರಿಕ ಪ್ರಕ್ರಿಯೆ ನಡೆಯುತ್ತಿದೆ. ಹಣಕಾಸು ಬಿಡ್‌ಗೆ ಸಂಬಂಧಿಸಿದಂತೆ ಸೆಪ್ಟೆಂಬರ್ 27 ರಂದು ಸಭೆ ಕರೆಯಲಾಗಿದ್ದು, ಇನ್ನೆರಡು ದಿನಗಳಲ್ಲಿ ಅಂತಿಮಗೊಳ್ಳಬಹುದು. ಸಾಮಾನ್ಯವಾಗಿ, ಅದನ್ನು ಬಿಡಿಎ ಮಂಡಳಿಯ ಒಪ್ಪಿಗೆಗಾಗಿ ಇಡಲಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com