ಆಗಸದಲ್ಲಿ ಏರ್ ಏಷ್ಯಾ ವಿಮಾನಕ್ಕೆ ಸಿಡಿಲು ಹೊಡೆತ: ಬೆಂಗಳೂರಿಗೆ ಹಿಂದಿರುಗಿದ ವಿಮಾನ!

ಅಪರೂಪದಲ್ಲಿ ಅಪರೂಪ ಎಂಬಂತೆ ಬೆಂಗಳೂರಿನಿಂದ ಹೈದರಾಬಾದ್‌ಗೆ ತೆರಳುತ್ತಿದ್ದ ಏರ್‌ಏಷ್ಯಾ ಇಂಡಿಯಾ ವಿಮಾನಕ್ಕೆ ಸಿಡಿಲು ಬಡಿದಿದೆ. ಇದರಿಂದ ವಿಮಾನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಿಂದಿರುಗಿದೆ.
ಏರ್ ಏಷ್ಯಾ ಇಂಡಿಯಾ ವಿಮಾನ
ಏರ್ ಏಷ್ಯಾ ಇಂಡಿಯಾ ವಿಮಾನ

ಬೆಂಗಳೂರು: ಅಪರೂಪದಲ್ಲಿ ಅಪರೂಪ ಎಂಬಂತೆ ಬೆಂಗಳೂರಿನಿಂದ ಹೈದರಾಬಾದ್‌ಗೆ ತೆರಳುತ್ತಿದ್ದ ಏರ್‌ಏಷ್ಯಾ ಇಂಡಿಯಾ ವಿಮಾನಕ್ಕೆ ಸಿಡಿಲು ಬಡಿದಿದೆ. ಇದರಿಂದ ವಿಮಾನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಿಂದಿರುಗಿದೆ. ವಿಮಾನದಲ್ಲಿದ್ದ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ. ಆದರೆ ವಿಮಾನಕ್ಕೆ ಸಣ್ಣಪುಟ್ಟ ಹಾನಿಯಾಗಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 91 ಪ್ರಮಾಣಿಕರನ್ನು ಹೊತ್ತ ಏರ್ ಏಷ್ಯಾ ವಿಮಾನಯಾನದ ಏರ್ ಬಸ್ ಎ320 ಬೆಳಗ್ಗೆ 7.39ರ ಸುಮಾರಿಗೆ ಟೆಕ್ ಆಫ್ ಆಗಿತ್ತು. ಆದರೆ ಆಗಸದ ಮಧ್ಯೆ ವಿಮಾನಕ್ಕೆ ಸಿಡಿಲು ಬಡಿದಿದೆ.

ಏರ್‌ಲೈನ್ ವಕ್ತಾರರ ಪ್ರಕಾರ, 'ಏರ್ ಏಷ್ಯಾ ಇಂಡಿಯಾ ಫ್ಲೈಟ್ I5-1576, ಬೆಂಗಳೂರಿನಿಂದ ಹೈದರಾಬಾದ್‌ಗೆ ಕಾರ್ಯನಿರ್ವಹಿಸುತ್ತಿತ್ತು. ಪ್ರತಿಕೂಲ ಹವಾಮಾನದಿಂದಾಗಿ ವಿಮಾನ ಬೆಂಗಳೂರಿಗೆ ಮರಳಿತು. ನಂತರ ವಿಮಾನಯಾನ ಸಂಸ್ಥೆಯು ನಡೆಸಿದ ತಪಾಸಣೆಯಲ್ಲಿ ವಿಮಾನಕ್ಕೆ ಸಿಡಿಲು ಹೊಡೆದಿರುವುದು ಪತ್ತೆಯಾಗಿದೆ ಎಂದರು.

ಸಿಡಿಲು ಬಡಿತ ಅಪರೂಪವಾಗಿದ್ದರೂ ಸಂಭವಿಸುತ್ತವೆ. ಆದರೆ ಸಿಡಿಲು ಬಡಿತದಿಂದ ಯಾವುದೇ ತೊಂದರೆ ಆಗುವುದಿಲ್ಲ. ಇನ್ನು ಪ್ರಯಾಣಿಕರಿಗೆ ಮತ್ತೊಂದು ವಿಮಾನದಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಟ್ವೀಟ್ ಮಾಡಿದ್ದಾರೆ.

ಬೆಂಗಳೂರಿಗೆ ಹಿಂತಿರುಗಿದ ವಿಮಾನಕ್ಕೆ ಇಂಧನ ತುಂಬುತ್ತಿದ್ದ ವೇಳೆ ವಿಮಾನಕ್ಕೆ ಹಾನಿಯಾಗಿದೆ ಎಂಬುದು ಏರ್‌ಲೈನ್ ಸಿಬ್ಬಂದಿಗೆ ಅರಿವಾಯಿತು ಎಂದು ಪ್ರಯಾಣಿಕ ಡಾ.ಅರುಣ್ ಮಾವಾಜಿ ಟ್ವೀಟ್ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com