ಬಿಬಿಎಂಪಿ ಚುನಾವಣೆ: ಮೀಸಲಾತಿ ವಿಷಯವಾಗಿ ಕೋರ್ಟ್ ಮೆಟ್ಟಿಲೇರಿದ ಆಕಾಂಕ್ಷಿಗಳು 

ಕರ್ನಾಟಕ ರಾಜ್ಯ ಸರ್ಕಾರ ಪ್ರಕಟಿಸಿರುವ ಮೀಸಲು ಅಧಿಸೂಚನೆ ಹಲವರ ಕೆಂಗಣ್ಣಿಗೆ ಗುರಿಯಾಗಿದೆ. 
ಬಿಬಿಎಂಪಿ
ಬಿಬಿಎಂಪಿ

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರ ಪ್ರಕಟಿಸಿರುವ ವಾರ್ಡ್ ಮೀಸಲು ಅಧಿಸೂಚನೆ ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಆಕಾಂಕ್ಷಿಗಳಾಗಿದ್ದ ಮಾಜಿ ಮೇಯರ್ ಗಳು, ಉಪಮೇಯರ್ ಗಳು, ಕೌನ್ಸಿಲ್ ನಲ್ಲಿರುವ ಆಡಳಿತ ಪಕ್ಷ, ವಿಪಕ್ಷಗಳ ನಾಯಕರು ಈಗ ಪ್ರಕಟಗೊಂಡಿರುವ ಮೀಸಲಾತಿಯ ಪ್ರಕಾರ ಚುನಾವಣೆ ನಡೆದರೆ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ. 

ಸರ್ಕಾರ ಹಲವು ಆಕಾಂಕ್ಷಿಗಳನ್ನು ಬದಿಗೆ ಸರಿಸಲು ಮಹಿಳೆಯರನ್ನು ಅಸ್ತ್ರವಾಗಿ ಬಳಸಿಕೊಂಡಿದೆ ಎಂಬ ಆರೋಪ ಕೇಳಿಬಂದಿದೆ. 243 ವಾರ್ಡ್ ಗಳಿಗೆ ಹೊರಡಿಸಲಾಗಿರುವ ಕರಡು ಅಧಿಸೂಚನೆಯ ಪ್ರಕಾರ, ಸಾಮಾನ್ಯ ವರ್ಗದ ಅಭ್ಯರ್ಥಿಗಳು ಹಾಗೂ ಸಾಮಾನ್ಯ ವರ್ಗಕ್ಕೆ ಸೇರಿದ ಮಹಿಳೆಯರು 129 ವಾರ್ಡ್ ಗಳಲ್ಲಿ ಮಾತ್ರ ಸ್ಪರ್ಧಿಸಬಹುದಾಗಿದೆ. 

ಬಿಜೆಪಿ ನಾಯಕರು ಈ ನಡೆಯನ್ನು ಉತ್ತಮ ನಡೆ ಎಂದು ಹೇಳಿದ್ದಾರೆ. ಇದರಿಂದ ಇತರರಿಗೂ ಅವಕಾಶ ಸಿಗಲಿದ್ದರೆ, ಇನ್ನೂ ಕೆಲವು ವ್ಯಕ್ತಿಗಳು ತಮ್ಮ ಬದಲಿಗೆ ತಮ್ಮ ತಮ್ಮ  ಪತ್ನಿಯರನ್ನು ಕಣಕ್ಕಿಳಿಸುವ ಯೋಜನೆ ಹೊಂದಿದ್ದಾರೆ.

ಬೆಂಗಳೂರು ಮಾಜಿ ಉಸ್ತುವಾರಿ ಸಚಿವ ಆರ್ ರಾಮಲಿಂಗಾರೆಡ್ಡಿ ಪ್ರಕಾರ ಸರ್ಕಾರ ಮಾರ್ಗಸೂಚಿಗಳನ್ನು ಪಾಲಿಸಿಲ್ಲ ಹಾಗೂ ಕಾಂಗ್ರೆಸ್ ನ ಆಕಾಂಕ್ಷಿಗಳನ್ನು ಚುನಾವಣೆಯಿಂದ ಸ್ಪರ್ಧಿಸುವುದನ್ನು ತಡೆಯುತ್ತಿದೆ ಎಂದು ಹೇಳಿದ್ದಾರೆ 

ಜನರಲ್ ವಿಭಾಗದಲ್ಲಿ 65 ವಾರ್ಡ್ ಗಳು ಮಾತ್ರವೇ ಇದ್ದು, ಈ ಪೈಕಿ 49 ರಲ್ಲಿ ಬಿಜೆಪಿ ಶಾಸಕರಿಗೆ ಹೆಚ್ಚಿನ ಅವಕಾಶವಿದೆ. ಬಿಟಿಎಂ ಲೇಔಟ್ ಸೆಗ್ಮೆಂಟ್ ನಲ್ಲಿ ನಾನು ಪ್ರತಿನಿಧಿಸುತ್ತಿದ್ದು, 8 ವಾರ್ಡ್ ಗಳ ಪೈಕಿ 7 ವಾರ್ಡ್ ಗಳನ್ನು ಮಹಿಳಾ ಮೀಸಲಾತಿ ಮಾಡಲಾಗಿದೆ.  ಗಾಂಧಿನಗರ ವಿಭಾಗದ ಎಲ್ಲಾ ವಾರ್ಡ್ ಗಳನ್ನೂ ಮಹಿಳೆಯರಿಗೆ ಮೀಸಲಿಡಲಾಗಿದೆ. 

ಈ ರೀತಿ ಮಾಡುವುದರಿಂದ ಆಕ್ರೋಶಗೊಳ್ಳುವ ನಾಯಕರು ವಿಷಯವನ್ನು ಕೋರ್ಟ್ ಗೆ ಎಳೆಯುತ್ತಾರೆ, ಈ ಮೂಲಕ ಚುನಾವಣೆಯನ್ನು ವಿಳಂಬ ಮಾಡಬಹುದು ಎಂಬ ಲೆಕ್ಕಾಚಾರ ಹೊಂದಿತ್ತು ಎಂದು ಬಿಬಿಎಂಪಿ ಚುನಾವಣೆಗಾಗಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ಅರ್ಜಿದಾರ ಎಂ ಶಿವರಾಜು ಹೇಳಿದ್ದಾರೆ. 

ಶಂಕರ ಮಠ ವಾರ್ಡ್ ನ್ನು ಎಸ್ ಸಿ ಸಮುದಾಯಕ್ಕೆ ಮೀಸಲಿಡಲಾಗಿದೆ, ನನ್ನ ರಾಜಕೀಯ ಜೀವನ ಅಂತ್ಯಗೊಳ್ಳುವುದಕ್ಕೆ ನಾನು ಸಚಿವ ಕೆ ಗೋಪಾಲಯ್ಯ ಅವರನ್ನು ಹೊಣೆ ಮಾಡುತ್ತೇನೆ. ಇದನ್ನು ಕೋರ್ಟ್ ನಲ್ಲಿ ಪ್ರಶ್ನೆ ಮಾಡದೇ ಬೇರೆ ದಾರಿಯೇ ಇಲ್ಲ ಎಂದು ಆಕಾಂಕ್ಷಿಯೊಬ್ಬರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com