ಪಿಎಸ್ಐ ಹಗರಣ: ಮತ್ತೆ 8 ಮಂದಿಯನ್ನು ಬಂಧಿಸಿದ ಸಿಐಡಿ; ನ್ಯಾಯಾಲಯಕ್ಕೆ ಹಾಜರು

ಪಿಎಸ್ಐ ಸಿಇಟಿ ಹಗರಣದ ಸಂಬಂಧ ಸಿಐಡಿ ಅಧಿಕಾರಿಗಳು ಮತ್ತೆ 8 ಮಂದಿಯನ್ನು ಕಲಬುರಗಿಯಲ್ಲಿ ಆ.04 ರಂದು ಸಂಜೆ ಬಂಧಿಸಿ ಆ.05 ರಂದು ಕೋರ್ಟ್ ಎದುರು ಹಾಜರುಪಡಿಸಿದ್ದಾರೆ. 
ಬಂಧನ
ಬಂಧನ

ಕಲಬುರಗಿ: ಪಿಎಸ್ಐ ಸಿಇಟಿ ಹಗರಣದ ಸಂಬಂಧ ಸಿಐಡಿ ಅಧಿಕಾರಿಗಳು ಮತ್ತೆ 8 ಮಂದಿಯನ್ನು ಕಲಬುರಗಿಯಲ್ಲಿ ಆ.04 ರಂದು ಸಂಜೆ ಬಂಧಿಸಿ ಆ.05 ರಂದು ಕೋರ್ಟ್ ಎದುರು ಹಾಜರುಪಡಿಸಿದ್ದಾರೆ. 

ಪಿಎಸ್ ಐ ಸಿಇಟಿಯಲ್ಲಿ ಹೈದರಾಬಾದ್ ಕರ್ನಾಟಕ ಕೋಟಾದ ಅಡಿಯಲ್ಲಿ ಮೊದಲ ರ್ಯಾಂಕ್ ಪಡೆದಿದ್ದ ಜೇವರ್ಗಿಯ ಭಾಗ್ಯವಂತ ರಾಯ ಜೋಗೂರ್, ರಾಯಚೂರಿನಲ್ಲಿ ಈಗ ಪೇದೆಯಾಗಿ ಕಾರ್ಯನಿರ್ವಹಿಸುತ್ತಿರುವ, ಸಿಇಟಿಯಲ್ಲಿ 4ನೇ ಶ್ರೇಣಿ ಪಡೆದಿದ್ದ ಕಲ್ಲಪ್ಪ ಸಿದ್ದಪ್ಪ ಅಲ್ಲಾಪುರ್, ಹೈದರಾಬಾದ್ ಕರ್ನಾಟಕ ಕೋಟಾದಡಿ 22 ನೇ ಶ್ರೇಣಿ ಪಡೆದಿದ್ದ ಶ್ರೀಶೈಲ್ ಹಚ್ಛಾದ್, ರವಿರಾಜ್, ಪೀರಪ್ಪ ಸಿಂದಾಳ್, ಸಿದ್ದುಗೌಡ ಶರಣಪ್ಪ ಪಾಟೀಲ್, ಸೋಮನಾಥ್ ಹಾಗೀ ವಿಜಯ್ ಕುಮಾರ್ ಗುಡೂರ್ ಬಂಧಿತ ಆರೋಪಿಗಳಾಗಿದ್ದಾರೆ. 

ಆರೋಪಿ ಸಿದ್ದುಗೌಡ ಪಾಟಿಲ್, ಹಗರಣದ ಪ್ರಮುಖ ಆರೋಪಿ, ಕಿಂಗ್ ಪಿನ್ ಆರ್ ಡಿ ಪಾಟೀಲ್ ಅವರ ಪತ್ನಿಯ ಸಹೋದರನಾಗಿದ್ದು, ಪ್ರಸ್ತುತ ಆತ ಯಾದಗಿರಿ ಜಿಲ್ಲೆಯ ಮುದ್ನಾಳ್ ನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಫ್ ಡಿಎ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

ಸಿಐಡಿ ಮೂಲಗಳ ಪ್ರಕಾರ ಪ್ರಮುಖ ಆರೋಪಿ ಆರ್ ಡಿ ಪಾಟಿಲ್ ಎಲ್ಲಾ ಇತರ 8 ಆರೋಪಿಗಳಿಗೆ ಅ.3 ರಂದು ಕಲಬುರಗಿಯ ವಿವಿಧ ಕೇಂದ್ರಗಳಲ್ಲಿ ನಡೆದ ಪರೀಕ್ಷೆಯಲ್ಲಿ ಉತ್ತರ ಬರೆಯಲು ಸಹಕಾರಿಯಾಗುವಂತೆ ಬ್ಲೂಟೂತ್ ನ್ನು ನೀಡಿದ್ದ.

ಪ್ರಮುಖ ಆರೋಪಿ ನೀಡಿದ್ದ ಮಾಹಿತಿಯ ಆಧಾರದಲ್ಲಿ 8 ಮಂದಿಯನ್ನು ಬಂಧಿಸಲಾಗಿದೆ. ಎಲ್ಲಾ ಆರೋಪಿಗಳು  ಈಗಾಗಲೇ ವಿಚಾರಣೆ ಎದುರಿಸಿದ್ದಾರೆ. 

ಡಿವೈಎಸ್ ಪಿಗಳಾದ ಶಂಕರ್ ಗೌಡ ಪಾಟಿಲ್, ಪ್ರಕಾಶ್ ರಾಥೋಡ್, ವೀರೇಂದ್ರ ಕುಮಾರ್ ಹಾಗೂ ಡಿಟೆಕ್ಟಿವ್ ವಿಂಗ್ ನ ಪಿಎಸ್ ಐ ಗಳಾದ ಆನಂದ್, ಯಶ್ವಂತ್ ಹಾಗೂ ಶಿವಪ್ರಸಾದ್ ನೆಲ್ಲೂರ್ ಅವರಿರುವ ತಂಡ ಆರೋಪಿಗಳ ವಿಚಾರಣೆ ನಡೆಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com