ಬೆಂಗಳೂರು ಹೊರವಲಯದ ಕಣ್ಮಿಣಿಕೆ ಮತ್ತು ಕೊಮ್ಮಘಟ್ಟದಲ್ಲಿ ಬಿಡಿಎ ಫ್ಲ್ಯಾಟ್ ಖರೀದಿಗೆ ವಕೀಲವೃಂದ ಆಸಕ್ತಿ!
ನಗರದ ಹೊರವಲಯ ಕಣ್ಮಿಣಿಕೆ ಮತ್ತು ಕೊಮ್ಮಘಟ್ಟದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ನಿರ್ಮಿಸಿರುವ ಅಪಾರ್ಟ್ ಮೆಂಟ್ ಗಳನ್ನು ಖರೀದಿಸುವವರಿಲ್ಲದೆ ಸಮಸ್ಯೆಯಾಗಿತ್ತು. ನಗರದಿಂದ ಬಹಳ ದೂರವಿದೆ ಎಂದು ಜನರು ಕೊಳ್ಳಲು ಆಸಕ್ತಿ ತೋರಿಸುತ್ತಿರಲಿಲ್ಲ.
Published: 06th August 2022 02:00 PM | Last Updated: 06th August 2022 02:23 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ನಗರದ ಹೊರವಲಯ ಕಣ್ಮಿಣಿಕೆ ಮತ್ತು ಕೊಮ್ಮಘಟ್ಟದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ನಿರ್ಮಿಸಿರುವ ಅಪಾರ್ಟ್ ಮೆಂಟ್ ಗಳನ್ನು ಖರೀದಿಸುವವರಿಲ್ಲದೆ ಸಮಸ್ಯೆಯಾಗಿತ್ತು. ನಗರದಿಂದ ಬಹಳ ದೂರವಿದೆ ಎಂದು ಜನರು ಕೊಳ್ಳಲು ಆಸಕ್ತಿ ತೋರಿಸುತ್ತಿರಲಿಲ್ಲ.
ಆದರೆ ಇದೀಗ ವಕೀಲರು ಬೃಹತ್ ಸಂಖ್ಯೆಯಲ್ಲಿ ಈ ಫ್ಲ್ಯಾಟ್ ಗಳನ್ನು ಕೊಳ್ಳಲು ಮುಂದೆ ಬಂದಿದ್ದಾರೆ. ಬಿಡಿಎ ನಿರ್ಮಿಸಿದ ಮನೆಗಳನ್ನು ಕಳೆದ ಜುಲೈ 30ರಂದು 270 ವಕೀಲರಿಗೆ ತೋರಿಸಲಾಗಿತ್ತು. ಇಷ್ಟು ಮಂದಿ ಬಂದವರಲ್ಲಿ ಅರ್ಧಕ್ಕೂ ಹೆಚ್ಚು ಮಂದಿ ವಕೀಲರು ಬಿಡಿಎ ಫ್ಲಾಟ್ ಗಳನ್ನು ಖರೀದಿಸಲು ಉತ್ಸುಕತೆ ತೋರಿಸಿದ್ದಾರೆ. 150ಕ್ಕೂ ಹೆಚ್ಚು ಫ್ಲಾಟ್ ಗಳನ್ನು ಖರೀದಿಸಲು ಆಸಕ್ತಿ ತೋರಿಸಿದ್ದು ಫ್ಲಾಟ್ ಗಳ ದರ ಬಗ್ಗೆ ಮಾತುಕತೆಗಳು ನಡೆಯುತ್ತಿವೆ. ನಾವು ಡಿಸ್ಕೌಂಟ್ ನೀಡಲು ಮುಂದಾಗಿದ್ದೇವೆ ಎಂದು ಬಿಡಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಾಗಡಿ ರಸ್ತೆಯಲ್ಲಿರುವ ಹುಣ್ಣಿಗೆರೆ ವಿಲ್ಲಾ ಪ್ರಾಜೆಕ್ಟ್ ನಲ್ಲಿ 3 ಬಿಎಚ್ ಕೆ ಮತ್ತು 4 ಬಿಎಚ್ ಕೆ ಮನೆಗಳಿವೆ. ಅದನ್ನು ಹಿರಿಯ ವಕೀಲರು ಖರೀದಿಸಲು ಮುಂದಾಗಿದ್ದಾರೆ. ಅವರು ಶೇಕಡಾ 10ರಷ್ಟು ದರದಲ್ಲಿ ರಿಯಾಯಿತಿ ಕೇಳುತ್ತಿದ್ದು ಬಿಡಿಎ ಶೇಕಡಾ 5ರಷ್ಟು ಕೊಡಲು ಮುಂದಾಗಿದೆ. ಸಹಮತಕ್ಕೆ ಬರಲು ಇನ್ನೂ ಮಾತುಕತೆ ನಡೆಯುತ್ತಿದೆ ಎಂದರು.
ಇದನ್ನೂ ಓದಿ: ಬಿಡಿಎ ನಿರ್ಮಿಸಿರುವ 'ಅತ್ಯಂತ ದುಬಾರಿ' ಫ್ಲಾಟ್‌ಗಳು ಶೀಘ್ರದಲ್ಲೇ ಮಾರಾಟ
ಖರೀದಿ-ಮಾರಾಟ ಪ್ರಕ್ರಿಯೆಗೆ ಕರ್ನಾಟಕ ಸರ್ಕಾರದ ಮತ್ತು ನಿಗಮದ ಒಪ್ಪಿಗೆ ಸಿಗಬೇಕಿದೆ. ಕಣ್ಮಿಣಿಕೆ ಮತ್ತು ಕೊಮ್ಮಘಟ್ಟದಲ್ಲಿರುವ 2BHK ಫ್ಲಾಟ್ ಗಳಿಗೆ ಬೇಡಿಕೆ ಹೆಚ್ಚಿರುವುದರಿಂದ ವಾಸ್ತು ಬೇಡಿಕೆಗಳಿಂದಾಗಿ ಪ್ರಸ್ತುತ ಎರಡು ವಿಭಿನ್ನ ದರಗಳಲ್ಲಿ ಮಾರಾಟ ಮಾಡಲಾಗುತ್ತದೆ. ಉತ್ತರ ದಿಕ್ಕಿನ ಮನೆ 25 ಲಕ್ಷ ರೂಪಾಯಿ, ದಕ್ಷಿಣ ದಿಕ್ಕಿನ ಮನೆ 26.5 ಲಕ್ಷ ರೂಪಾಯಿ, ವಿಲ್ಲಾಗಳು 3-BHK ಮತ್ತು 4-BHK ಆಗಿದ್ದು, ವೆಚ್ಚವು 85 ಲಕ್ಷದಿಂದ 1.1 ಲಕ್ಷದವರೆಗೆ ಇರುತ್ತದೆ ಎಂದರು. ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ TNIE ಜೊತೆಗೆ ಮಾತನಾಡಿ, ಸರ್ಕಾರಿ ಸಂಸ್ಥೆಯಿಂದ ನಿರ್ಮಿಸಲಾದ ಉತ್ತಮ ಗುಣಮಟ್ಟದ ಫ್ಲ್ಯಾಟ್‌ಗಳು ನಿರ್ಣಾಯಕ ಅಂಶವಾಗಿದೆ ಎಂದರು.