ಬಿಡಿಎ ನಿರ್ಮಿಸಿರುವ 'ಅತ್ಯಂತ ದುಬಾರಿ' ಫ್ಲಾಟ್‌ಗಳು ಶೀಘ್ರದಲ್ಲೇ ಮಾರಾಟ

ಬಿಡಿಎ ನಿರ್ಮಿಸಿರುವ ಅತ್ಯಂತ ದುಬಾರಿ ಫ್ಲಾಟ್ ಗಳು ಶೀಘ್ರದಲ್ಲೇ ಮಾರಾಟವಾಗಲಿವೆ. ಹೊರ ವರ್ತುಲ ರಸ್ತೆ ನಾಗರಭಾವಿಯಂತಹ ಪ್ರಮುಖ ಪ್ರದೇಶದಲ್ಲಿರುವ ಪ್ರತಿಯೊಂದು 3 ಬಿಹೆಚ್ ಕೆ ಫ್ಲಾಟ್ ಗಳ ಬೆಲೆ 1.04 ಕೋಟಿ ರೂಪಾಯಿ ಎಂದು ಬಿಡಿಎ ಮೂಲಗಳು ತಿಳಿಸಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬಿಡಿಎ ನಿರ್ಮಿಸಿರುವ ಅತ್ಯಂತ ದುಬಾರಿ ಫ್ಲಾಟ್ ಗಳು ಶೀಘ್ರದಲ್ಲೇ ಮಾರಾಟವಾಗಲಿವೆ. ಹೊರ ವರ್ತುಲ ರಸ್ತೆ ನಾಗರಭಾವಿಯಂತಹ ಪ್ರಮುಖ ಪ್ರದೇಶದಲ್ಲಿರುವ ಪ್ರತಿಯೊಂದು 3 ಬಿಹೆಚ್ ಕೆ ಫ್ಲಾಟ್ ಗಳ ಬೆಲೆ 1.04 ಕೋಟಿ ರೂಪಾಯಿ ಎಂದು ಬಿಡಿಎ ಮೂಲಗಳು ತಿಳಿಸಿವೆ. ಈ 120 ಫ್ಲಾಟ್ ವಸತಿ ಯೋಜನೆಯು ಮೈಸೂರು ರಸ್ತೆ ಮೆಟ್ರೋ ನಿಲ್ದಾಣದ 1 ಕಿ.ಮೀ ವ್ಯಾಪ್ತಿಯಲ್ಲಿ ಹೊರ ವರ್ತುಲ ರಸ್ತೆಯೊಂದಿಗೆ ಬಸ್ಸುಗಳ ಉತ್ತಮ ಸಂಪರ್ಕ ಹೊಂದಿರುವುದರಿಂದ ಅತ್ಯುತ್ತಮ ಸಾರ್ವಜನಿಕ ಸಾರಿಗೆ ಸಂಪರ್ಕದ ಅನುಕೂಲವಿದೆ.

ನಾಗರಭಾವಿಯಲ್ಲಿ 3 ಬಿಹೆಚ್ ಕೆ ಫ್ಲಾಟ್‌ಗಳನ್ನು ನೆಲಮಹಡಿ ಮತ್ತು 10 ಮಹಡಿಗಳ ಬ್ಲಾಕ್‌ಗಳಾಗಿ ನಿರ್ಮಿಸಲಾಗಿದೆ. ಐದನೇ ಮಹಡಿ ಮತ್ತು ಅದಕ್ಕಿಂತ ಮೇಲಿನ ಫ್ಲಾಟ್  ಬಯಸಿದರೆ ರೂ 1.04 ಕೋಟಿಗಿಂತ ಶೇ. 5 ರಷ್ಟು ಪ್ರೀಮಿಯಂ ವಿಧಿಸಲಾಗುತ್ತದೆ, ಇದು ಹೆಚ್ಚುವರಿಯಾಗಿ ರೂ. 50,000 ವರೆಗೆ ಇರಲಿದೆ ಎಂದು ಬಿಡಿಎ ಉನ್ನತ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ. ಗುತ್ತಿಗೆದಾರರು ಪೇಂಟಿಂಗ್ ಕೆಲಸ ಪೂರ್ಣಗೊಳಿಸುವ ಹಂತದಲ್ಲಿದ್ದಾರೆ. ಇತರ ಅಂತಿಮ ಕೆಲಸಗಳೂ ನಡೆಯುತ್ತಿವೆ ಎಂದು ಅವರು ಹೇಳಿದ್ದಾರೆ. 

ಸೆಪ್ಟೆಂಬರ್‌ನಲ್ಲಿ ಆನ್‌ಲೈನ್ ಬುಕಿಂಗ್‌ಗಳನ್ನು ಪ್ರಾರಂಭಿಸುವ ನಿರೀಕ್ಷೆಯಲ್ಲಿದ್ದೇವೆ. ಮೊದಲು ಬಂದವರಿಗೆ ಮೊದಲು ಸೇವೆಯ ಆಧಾರದ ಮೇಲೆ  ಆನ್‌ಲೈನ್‌ನಲ್ಲಿ ಮಾರಾಟ ಮಾಡಲಾಗುತ್ತದೆ. ಅವುಗಳು ಹಾಟ್‌ಕೇಕ್‌ಗಳಂತೆ ಮಾರಾಟವಾಗುತ್ತವೆ ಎಂದು ನಿರೀಕ್ಷಿಸುತ್ತಿದ್ದೇವೆ. ಫ್ಲಾಟ್ ಖರೀದಿಗೆ ಈಗಾಗಲೇ ತುಂಬಾ ಜನ ಆಸಕ್ತಿ ವ್ಯಕ್ತಪಡಿಸಿದ್ದು, ವಿಚಾರಣೆ ಮಾಡುತ್ತಿದ್ದಾರೆ. ಈ ಫ್ಲಾಟ್‌ಗಳ ಭವಿಷ್ಯದ ನಿವಾಸಿಗಳು  ಹೊರ ವರ್ತುಲ ರಸ್ತೆಗೆ ಸಂಪರ್ಕಿಸುವ ಸ್ಕೈವಾಕ್ ಈಗಾಗಲೇ ಅಸ್ತಿತ್ವದಲ್ಲಿದೆ. ದುರ್ಗಾ ಪರಮೇಶ್ವರಿ ದೇವಸ್ಥಾನದಂತಹ ಪ್ರಯೋಜನ ಕೂಡಾ ಸಿಗಲಿದೆ ಎಂದು ಅವರು ತಿಳಿಸಿದರು. 

ಅನೇಕ ಆಧುನಿಕ ಉಪಕರಣಗಳೊಂದಿಗೆ ತೆರೆದ ಜಿಮ್ ಕೂಡಾ ಇಲ್ಲಿದೆ. ಸಂಪೂರ್ಣ ಕಟ್ಟಡ ಪೂರ್ಣಗೊಂಡ ನಂತರ ವಿದ್ಯುತ್ ಮತ್ತು ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು, ಯಾವುದೇ ರೀತಿಯ ವಿಳಂಬವಾದರೆ ತಾತ್ಕಾಲಿಕ ವಿದ್ಯುತ್ ಸಂಪರ್ಕಕ್ಕಾಗಿ ನಾವು ಹೋಗಬಹುದು ಎಂದು ಅವರು ಹೇಳಿದರು.

ವಿಲ್ಲಾಗಳು ಕೂಡ ಸಿದ್ಧವಾಗುತ್ತಿವೆ: ಹುಣ್ಣಿಗೆರೆ ವಿಲ್ಲಾ- 4 ಬಿಹೆಚ್ ಕೆ ಹೊಂದಿದೆ. ಇದು ಮಾಗಡಿ ರಸ್ತೆ ಮತ್ತು ತುಮಕೂರು ರಸ್ತೆ ನಡುವೆ ಇದೆ. ಒಟ್ಟು 3 ಬಿಹೆಚ್ ಕೆಯ 320 ವಿಲ್ಲಾಗಳು,  ಮತ್ತು 4 ಬಿಹೆಚ್ ಕೆಯ 1 ಮತ್ತು 1 ಬಿಹೆಚ್ ಕೆಯ 320 ಫ್ಲಾಟ್ ಗಳನ್ನು ನಿರ್ಮಿಸಲಾಗುತ್ತಿದೆ. ಕ್ಲಬ್ ಹೌಸ್ ಮತ್ತು ಈಜುಕೊಳದಂತಹ ಸೌಕರ್ಯಗಳು ಇರಲಿವೆ. ಇದು ಮಾರ್ಚ್ 31, 2023 ರ ಗಡುವನ್ನು ಹೊಂದಿದ್ದರೂ, ಮುಂದಿನ ವರ್ಷದ ಜನವರಿಯೊಳಗೆ ಮಾರಾಟ ಮಾಡಲು ಬಿಡಿಎ ವಿಶ್ವಾಸ ಹೊಂದಿದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com