ಬೆಂಗಳೂರು: ವಿವಾಹಕ್ಕಾಗಿ ನಿಗದಿತ ಸಮಯಕ್ಕೆ ಡೆಲಿವರಿ ಆಗದ ಸೂಟ್, ದುಬಾರಿ ಬೆಲೆ ತೆರಬೇಕಾಯ್ತು ಡಿಟಿಡಿಸಿ!

ನಗರದ ಯುವಕನೋರ್ವ ದೂರದ ಊರಿನಲ್ಲಿ ವಿವಾಹವಾಗುತ್ತಿದ್ದ ತನ್ನ ಸ್ನೇಹಿತನಿಗೆ ಡಿಟಿಡಿಸಿ ಎಕ್ಸ್ ಪ್ರೆಸ್ ಮೂಲಕ ಉಡುಗೊರೆಯಾಗಿ ಕಳಿಸಿದ್ದ ಸೂಟ್ ನಿಗದಿತ ಸಮಯಕ್ಕೆ ತಲುಪದೇ ಆತನಿಗೆ ತೀವ್ರ ಮುಜುಗರವಾಗಿದ್ದು ಸಂಸ್ಥೆ ದುಬಾರಿ ಬೆಲೆ ತೆರಬೇಕಾಗಿ ಬಂದಿದೆ. 
ಡಿಟಿಡಿಸಿ
ಡಿಟಿಡಿಸಿ

ಬೆಂಗಳೂರು: ನಗರದ ಯುವಕನೋರ್ವ ದೂರದ ಊರಿನಲ್ಲಿ ವಿವಾಹವಾಗುತ್ತಿದ್ದ ತನ್ನ ಸ್ನೇಹಿತನಿಗೆ ಡಿಟಿಡಿಸಿ ಎಕ್ಸ್ ಪ್ರೆಸ್ ಮೂಲಕ ಉಡುಗೊರೆಯಾಗಿ ಕಳಿಸಿದ್ದ ಸೂಟ್ ನಿಗದಿತ ಸಮಯಕ್ಕೆ ತಲುಪದೇ ಆತನಿಗೆ ತೀವ್ರ ಮುಜುಗರವಾಗಿದ್ದು ಸಂಸ್ಥೆ ದುಬಾರಿ ಬೆಲೆ ತೆರಬೇಕಾಗಿ ಬಂದಿದೆ. 

ಪ್ರಮೋದ್ ಲೇಔಟ್ ನ ಸಿದ್ದೇಶ ಎಂಬಾತ ಹೈದರಾಬಾದ್ ನಲ್ಲಿ ವಿವಾಹವಾಗುತ್ತಿದ್ದ ತನ್ನ ಆಪ್ತ ಸ್ನೇಹಿತನೋರ್ವನಿಗೆ ಡಿಟಿಡಿಸಿ ಮೂಲಕ ಸೂಟ್ ಉಡುಗೊರೆಯಾಗಿ ಕಳಿಸಿದ್ದ. ಆದರೆ ನಿಗದಿತ ಸಮಯಕ್ಕೆ ಸರಿಯಾಗಿ ಅದು ತಲುಪದ ಕಾರಣ 
ವರ ಸೂಟ್ ಗಾಗಿ ಕೊನೆಯ ಕ್ಷಣದವರೆಗೂ ಪರದಾಡಬೇಕಾಯಿತು. 

ಸಂಸ್ಥೆಯ ನಿರ್ಲಕ್ಷ್ಯತನವನ್ನು ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಕೊಂಡೊಯ್ದ ಸಿದ್ದೇಶ ಅವರಿಗೆ ನ್ಯಾಯ ದೊರೆತಿದ್ದು, ನಿರ್ಲಕ್ಷ್ಯತನ ತೋರಿದ ಸಂಸ್ಥೆಗೆ ಹಾಗೂ ಉಳ್ಳಾಲ್ ನಲ್ಲಿರುವ ಅದರ ಶಾಖೆಗೆ ಸೂಟ್ ನ ಮೊತ್ತ 11,495 ರೂಪಾಯಿ, ಜೊತೆಗೆ ವಾರ್ಷಿಕ ಶೇ.10 ರಷ್ಟು ಬಡ್ಡಿ, ಬುಕಿಂಗ್ ಚಾರ್ಜ್ 500 ರೂಪಾಯಿ, ದಾವೆ ವೆಚ್ಚ ಸೇರಿದಂತೆ, 10,000 ರೂಪಾಯಿ ಸೇರಿ ಒಟ್ಟು 25,000 ರೂಪಾಯಿಗಳನ್ನು ನೀಡಬೇಕೆಂದು ಬೆಂಗಳೂರು ನಗರ ಎರಡನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಡಿಟಿಡಿಸಿ ಗೆ ನಿರ್ದೇಶನ ನೀಡಿದೆ. 

ಸರಕನ್ನು ನಿಗದಿತ ಸಮಯಕ್ಕೆ ತಲುಪಿಸಲು ಸಾಧ್ಯಾವಗದೇ ಇರುವುದು ದೂರುದಾರರ ಘನತೆಗೆ ಹಾನಿ ಉಂಟುಮಾಡಿದ್ದು, ತೀವ್ರ ಮುಜುಗರ ಎದುರಿಸಿದ್ದಾರೆ ಎಂದು ಆಯೋಗ ಹೇಳಿದೆ.

ಸಿದ್ದೇಶ (ದೂರುದಾರ) ಹಾಗೂ ಮನೀಷ್ ವರ್ಮಾ(ವರ) ಸಹೋದ್ಯೋಗಿಗಳಾಗಿದ್ದರು ನಂತರ 2017 ರ ವೇಳೆಗೆ ಆಪ್ತ ಸ್ನೇಹಿತರಾಗಿದ್ದು, ಸಿದ್ದೇಶ ಮನೀಷ್ ವರ್ಮಾ ಅವರ ವಿವಾಹಕ್ಕೆ ಸೂಟ್ ಉಡುಗೊರೆ ನೀಡುವುದಾಗಿ ಹೇಳಿದ್ದರು.
 
ಡಿ.1, 2019 ರಂದು ಹೈದರಾಬಾದ್ ನಲ್ಲಿ ವಿವಾಹವಾಗುತ್ತಿದ್ದ ವರ್ಮಾಗೆ ಸಿದ್ದೇಶ 2019 ರ ನ.25 ರಂದು ಸೂಟ್ ನ್ನು ಡಿಟಿಡಿಸಿ ಮೂಲಕ ಕೊರಿಯರ್ ಮಾಡಿದ್ದಾರೆ. ಆದರೆ ಅದು ತಲುಪಲಿಲ್ಲ. ಕೊನೆಗೆ ಕೊರಿಯರ್ ಮಾಡಲಾಗಿದ್ದ ಸೂಟ್ ಕಳೆದುಹೋಗಿದೆ, ಇದು ತಮ್ಮ ನಿಯಂತ್ರಣದಲ್ಲಿರಲಿಲ್ಲ, "ಭಗವಂತನ ಕ್ರಿಯೆ" ಎಂದು ಡಿಟಿಡಿಸಿ ಸಮಜಾಯಿಷಿ ನೀಡಿತ್ತು. ಅಷ್ಟೇ ಅಲ್ಲದೇ ಕೊರಿಯರ್ ನಲ್ಲಿದ್ದ ಸರಕಿನ ಮೌಲ್ಯವನ್ನು ದೂರುದಾರರು ಘೋಷಿಸಿಲ್ಲ. ಅಷ್ಟೇ ಅಲ್ಲದೇ ರಿಸ್ಕ್ ಸರ್ಚಾರ್ಜ್ ನ್ನು ಪಾವತಿಸಿಲ್ಲ ಬುಕ್ಕಿಂಗ್ ವೇಳೆ ಹೆಚ್ಚುವರಿ ಪ್ರೀಮಿಯಂ ನ್ನು ಪಾವತಿಸಿಲ್ಲ ಆದ್ದರಿಂದ ತಾವು ದೂರುದಾರರಿಗೆ ಯಾವುದೇ ಪರಿಹಾರ ನೀಡಬೇಕಿಲ್ಲ ಎಂಬ ಉದ್ಧಟತನವನ್ನೂ ಡಿಟಿಡಿಸಿ ತೋರಿತ್ತು. 

ಆದರೆ ಈ ಯಾವುದೇ ವಾದವನ್ನೂ ಆಲಿಸದ ಆಯೋಗ ರಿಸ್ಕ್ ಸರ್ಚಾರ್ಜ್ ಸ್ವೀಕರಿಸದಂತೆ ನಿಮ್ಮನ್ನು ಯಾರೂ ತಡೆದಿರಲಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com