ಮಡಿಕೇರಿ: ಗ್ರಾಮದಲ್ಲಿ ಒಂಟಿ ಸಲಗ ದಿಢೀರ್ ಪ್ರತ್ಯಕ್ಷ, ಶಾಂತಸ್ವಭಾವದ ಆನೆ ಕಂಡು ಗ್ರಾಮಸ್ಥರಿಗೆ ಅಚ್ಚರಿ!
ದಕ್ಷಿಣ ಕೊಡಗಿನ ನೆಲ್ಲಿಹುದಿಕೇರಿ ಗ್ರಾಮದಲ್ಲಿ ಇಂದು ಬೆಳಗ್ಗೆ ಒಂಟಿ ಸಲಗವೊಂದು ಕಾಣಿಸಿಕೊಂಡಿದ್ದು ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿತ್ತು. ಆದರೆ ಈ ಕಾಡಾನೆ ಯಾರಿಗೂ ತೊಂದರೆ ಕೊಡದೆ ಏನನ್ನು ಬೀಳಿಸದೆ ಮುಂದೆ ಸಾಗಿದ್ದು ಗಾಮಸ್ಥರಲ್ಲಿ ಅಚ್ಚರಿ ಮೂಡಿಸಿತು.
Published: 09th August 2022 03:57 PM | Last Updated: 09th August 2022 04:35 PM | A+A A-

ಗ್ರಾಮಕ್ಕೆ ಕಾಡಾನೆ ಭೇಟಿ
ಮಡಿಕೇರಿ: ದಕ್ಷಿಣ ಕೊಡಗಿನ ನೆಲ್ಲಿಹುದಿಕೇರಿ ಗ್ರಾಮದಲ್ಲಿ ಇಂದು ಬೆಳಗ್ಗೆ ಒಂಟಿ ಸಲಗವೊಂದು ಕಾಣಿಸಿಕೊಂಡಿದ್ದು ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿತ್ತು. ಆದರೆ ಈ ಕಾಡಾನೆ ಯಾರಿಗೂ ತೊಂದರೆ ಕೊಡದೆ ಏನನ್ನು ಬೀಳಿಸದೆ ಮುಂದೆ ಸಾಗಿದ್ದು ಗಾಮಸ್ಥರಲ್ಲಿ ಅಚ್ಚರಿ ಮೂಡಿಸಿತು.
ಗ್ರಾಮದ ಎಂಜಿ ಕಾಲೋನಿಯಲ್ಲಿ 800ಕ್ಕೂ ಹೆಚ್ಚು ನಿವಾಸಿಗಳು ವಾಸವಿದ್ದು, ಇಂದು ಬೆಳಗ್ಗೆ ಅಸಾಧಾರಣ ಪ್ರವಾಸಿಗನ ಭೇಟಿಯಾಗಿತ್ತು. ಜೋರಾಗಿ ಕೂಗುತ್ತಾ, ಆನೆ ಕಾಲೋನಿಯ ಹಲವಾರು ಮನೆಗಳಿಗೆ ಭೇಟಿ ನೀಡಿದ್ದು, ನಿವಾಸಿಗಳನ್ನು ಭಯ ಆವರಿಸುವಂತೆ ಮಾಡಿತ್ತು. ಆನೆಯನ್ನು ನೋಡಿದ ಕೆಲವರು ಅಲ್ಲಿಂದ ಓಡಿಹೋದರು.
ಆದರೆ ಆನೆ ಅವರನ್ನು ಹಿಂಬಾಲಿಸಲಿಲ್ಲ. ಆನೆಯು ಯಾವುದೇ ಹಾನಿಯಾಗದಂತೆ ನಿಂತಿದ್ದ ಆಟೋ ರಿಕ್ಷಾವನ್ನು ದಾಟಿ ನಂತರ ತಮ್ಮ ಮೊಬೈಲ್ ನಲ್ಲಿ ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದ ಗ್ರಾಮಸ್ಥರ ಕಡೆಗೆ ಹೊರಟಿತು. ಆನೆಯು ಗ್ರಾಮಸ್ಥರ ಸಮೀಪಕ್ಕೆ ಬರುತ್ತಿದ್ದಂತೆ ಕೆಲವರು ಜೋರಾಗಿ ಕಿರುಚಿದರು. ಶಬ್ದ ಕೇಳಿ ಎಚ್ಚೆತ್ತ ಆನೆ ಮನೆಗಳ ಮಧ್ಯೆ ಓಡಿ ಹೋಯಿತು.
'ಆದರೆ ಆನೆ ಆವೇಶದಲ್ಲಿ ಯಾವುದೇ ಮನೆಗಳಿಗೆ ಹಾನಿಯನ್ನುಂಟುಮಾಡಲಿಲ್ಲ. ಅದು ಯಾರ ಮೇಲೂ ದಾಳಿ ಮಾಡಲು ಪ್ರಯತ್ನಿಸಲಿಲ್ಲ. ಅದು ಜೋರಾಗಿ ಕೂಗುತ್ತಿತ್ತು. ಅದು ನಮಗೆ ಏನನ್ನೋ ಹೇಳಲು ಪ್ರಯತ್ನಿಸುತ್ತಿದೆ ಎಂದು ನಿವಾಸಿ ಮುರಳಿ ಎಂಬುವರು ಹೇಳಿದ್ದಾರೆ.
ಇದನ್ನೂ ಓದಿ: ಕೊಡಗು ಜಿಲ್ಲೆಯ ನೆಲ್ಲಿಹುದಿಕೇರಿಯಲ್ಲಿ ವಿದ್ಯುತ್ ತಂತಿ ತಗುಲಿ ಎರಡು ಕಾಡಾನೆಗಳು ಸಾವು
ಈ ವೇಳೆ ಕೆಲ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಬಂದ ಅಧಿಕಾರಿಗಳು ಆನೆಯನ್ನು ಮತ್ತೆ ಕಾಡಿಗೆ ಓಡಿಸುವಲ್ಲಿ ಯಶಸ್ವಿಯಾದರು. ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಕಾರಣ ಆನೆ ಗ್ರಾಮಕ್ಕೆ ನುಗ್ಗಿರುವ ಶಂಕೆ ವ್ಯಕ್ತವಾಗಿದೆ. 'ಆನೆಯ ಅಸಾಮಾನ್ಯ, ಸ್ನೇಹಪರ ನಡವಳಿಕೆಯು ಇದು ಪಳಗಿದ ಆನೆಯೇ ಎಂದು ನಮಗೆ ಆಶ್ಚರ್ಯವಾಗುವಂತೆ ಮಾಡಿತು. ಬಹುಶಃ, ಯಾರಾದರೂ ಪಳಗಿದ ಆನೆಯನ್ನು ಬೇರೆಡೆಯಿಂದ ಇಲ್ಲಿನ ಕಾಡಿಗೆ ಓಡಿಸಿದ್ದಾರೆನೋ ಎಂದು ಅನೇಕ ನಿವಾಸಿಗಳು ತಮ್ಮ ತಮ್ಮಲ್ಲೇ ಮಾತನಾಡಿಕೊಂಡರು.