ಕೋವಿಡ್ ನಂತರ ಮೊದಲ ಬಾರಿಗೆ ಲಾಭದಲ್ಲಿ ಮೆಟ್ರೊ ರೈಲು ನಿಗಮ; ಪ್ರಯಾಣಿಕರ ಸಂಖ್ಯೆ ಹೆಚ್ಚಳ, ಆದಾಯ ಏರಿಕೆ
ಕಳೆದ ಕೆಲವು ತಿಂಗಳುಗಳಲ್ಲಿ ಮೆಟ್ರೊ ರೈಲನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ನಿಗಮ ಲಾಭಕ್ಕೆ ಮರಳಲು ಮತ್ತೆ ಸಾಧ್ಯವಾಗಿದೆ, ಕೋವಿಡ್ ಪೂರ್ವ ಸ್ಥಿತಿಗತಿಗೆ ಸಂಸ್ಥೆ ಮರಳಿದೆ ಎನ್ನಬಹುದು.
Published: 13th August 2022 09:27 AM | Last Updated: 13th August 2022 12:22 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಕಳೆದ ಕೆಲವು ತಿಂಗಳುಗಳಲ್ಲಿ ಮೆಟ್ರೊ ರೈಲನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ನಿಗಮ ಲಾಭಕ್ಕೆ ಮರಳಲು ಮತ್ತೆ ಸಾಧ್ಯವಾಗಿದೆ, ಕೋವಿಡ್ ಪೂರ್ವ ಸ್ಥಿತಿಗತಿಗೆ ಸಂಸ್ಥೆ ಮರಳಿದೆ ಎನ್ನಬಹುದು.
2022-2023 ರ ಮೊದಲ ತ್ರೈಮಾಸಿಕದಲ್ಲಿ ನಿಗಮಕ್ಕೆ 12 ಲಕ್ಷಕ್ಕೂ ಅಧಿಕ ಲಾಭವಾಗಿದೆ. ಈ ಹಣಕಾಸು ವರ್ಷದ ಜೂನ್ 30ಕ್ಕೆ ಕೊನೆಗೊಳ್ಳುವ ತ್ರೈಮಾಸಿಕಕ್ಕೆ BMRCL ನ ವಹಿವಾಟುಗಳನ್ನು ಮಂಡಳಿಯ ಸಭೆಯಲ್ಲಿ ಮಂಡಿಸಿ ಅನುಮೋದಿಸಲಾಯಿತು.
ಕಾರ್ಯಾಚರಣೆಗಳ ಒಟ್ಟು ಆದಾಯವು 98.85 ಕೋಟಿ ರೂಪಾಯಿಗಳಷ್ಟಿದ್ದರೆ, ಅದರ ವೆಚ್ಚವು 17.83 ಕೋಟಿ ರೂಪಾಯಿಗಳು. ಒಟ್ಟಾರೆ ಖರ್ಚುಗಳನ್ನು ಕಡಿತಗೊಳಿಸಿದ ನಂತರ, ಒಟ್ಟು ಲಾಭವು 12 ಲಕ್ಷ ರೂಪಾಯಿಗಳಷ್ಟಾಗಿದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಿಂದಿನ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ನಿಗಮದ ಒಟ್ಟು ಆದಾಯವು 70 ಕೋಟಿ ರೂಪಾಯಿಗಳಾಗಿವೆ.
ಇದನ್ನೂ ಓದಿ: ಇಂಟರ್ಚೇಂಜ್ ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕಿಂಗ್, ವಾಣಿಜ್ಯ ಸಂಕೀರ್ಣ ನಿರ್ಮಾಣ?
ಮಾರ್ಚ್ 2022ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಮೆಟ್ರೊ ರೈಲು ಸಂಚಾರದಿಂದ 193 ಕೋಟಿ ರೂಪಾಯಿಗಳನ್ನು ಗಳಿಸಿದೆ. ಒಟ್ಟಾರೆ ವೆಚ್ಚಗಳು 221.64 ಕೋಟಿ ರೂಪಾಯಿಗಳಾಗಿವೆ. ದೊಡ್ಡ ಧನಾತ್ಮಕ ಅಂಶವೆಂದರೆ BMRCL ತನ್ನ ಸಾಲಗಳಿಗೆ ಪಾವತಿಸುತ್ತಿದ್ದ ಬಡ್ಡಿ ಮೊತ್ತದಲ್ಲಿ ಭಾರಿ ಕುಸಿತವಾಗಿದೆ. "ನಾವು ತ್ರೈಮಾಸಿಕದಲ್ಲಿ ಪಾವತಿಸಿದ ಬಡ್ಡಿಯು 17.83 ಕೋಟಿಗಳಾಗಿದ್ದು, ಹಿಂದಿನ ತ್ರೈಮಾಸಿಕದಲ್ಲಿ ನಾವು ಪಾವತಿಸಿದ 24.18 ಕೋಟಿಗಿಂತ ಗಣನೀಯ ಇಳಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
BMRCL ನ ಕಾರ್ಯನಿರ್ವಾಹಕ ನಿರ್ದೇಶಕ ಎ ಎಸ್ ಶಂಕರ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿ, ಮೆಟ್ರೊ ರೈಲಿನಲ್ಲಿ ಜನ ಕಿಕ್ಕಿರಿದು ಪ್ರಯಾಣಿಸುತ್ತಿದ್ದಾರೆ. ದಿನಕ್ಕೆ ಸರಾಸರಿ 4.7 ಲಕ್ಷ ಪ್ರಯಾಣಿಕರನ್ನು ಹೊಂದಿದ್ದೇವೆ. ಶನಿವಾರದಂದು ಮೂರು ಬಾರಿ 5 ಲಕ್ಷ ಪ್ರಯಾಣಿಕರನ್ನು ದಾಟಿದ್ದೇವೆ. ಹಿಂದೆ ವಾರಾಂತ್ಯದಲ್ಲಿ ಸವಾರರ ಸಂಖ್ಯೆ ಇಳಿಮುಖವಾಗುತ್ತಿತ್ತು, ಮುಂದಿನ ನಾಲ್ಕು ತಿಂಗಳಲ್ಲಿ, ಹಲವು ದಿನಗಳಲ್ಲಿ 5 ಲಕ್ಷದಷ್ಟು ಜನರು ಪ್ರಯಾಣಿಸಬಹುದು ಎಂಬ ಭರವಸೆಯಿದೆ ಎಂದರು.
ಇದನ್ನೂ ಓದಿ: ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದಲ್ಲಿ ಖಾದಿ ಜಾತ್ರೆ: ಬಿಎಂಆರ್ಸಿಎಲ್
ಕಳೆದ ತಿಂಗಳು ಜುಲೈನಲ್ಲಿ ಒಟ್ಟು 146 ಲಕ್ಷ ಪ್ರಯಾಣಿಕರು ದಿನಕ್ಕೆ ಸರಾಸರಿ 4.7 ಲಕ್ಷದಷ್ಟು ಪ್ರಯಾಣಿಕರು ಮೆಟ್ರೊ ರೈಲಿನಲ್ಲಿ ಪ್ರಯಾಣಿಸಿದ್ದಾರೆ. ಜೂನ್‌ನಲ್ಲಿ, ನಾವು ದಿನಕ್ಕೆ ಸರಾಸರಿ 4.6 ಲಕ್ಷ ಸವಾರರನ್ನು ಹೊಂದಿದ್ದೇವೆ, ಅಂದರೆ ಪ್ರತಿದಿನ 10 ಸಾವಿರ ಮಂದಿ ಮೆಟ್ರೊ ರೈಲಿನಲ್ಲಿ ಪ್ರಯಾಣಿಸಿದ್ದಾರೆ ಎಂದು ಶಂಕರ್ ತಿಳಿಸಿದರು.