ಇಂಟರ್‌ಚೇಂಜ್ ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕಿಂಗ್, ವಾಣಿಜ್ಯ ಸಂಕೀರ್ಣ ನಿರ್ಮಾಣ?
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ತನ್ನ ಆದಾಯವನ್ನು ಹೆಚ್ಚಿಸಲು ಮತ್ತು ಪ್ರಯಾಣಿಕರಿಗೆ ಅನುಕೂಲವಾಗುವಂತೆ, ಎರಡು ಪ್ರಮುಖ ಇಂಟರ್‌ಚೇಂಜ್ ಮೆಟ್ರೋ ನಿಲ್ದಾಣಗಳಲ್ಲಿ ಮಲ್ಟಿ-ಲೆವೆಲ್ ಪಾರ್ಕಿಂಗ್ ವ್ಯವಸ್ಥೆ ಮತ್ತು ವಾಣಿಜ್ಯ ಸಂಕೀರ್ಣಗಳ ನಿರ್ಮಾಣಕ್ಕೆ ಗಂಭೀರ ಚಿಂತನೆಯಲ್ಲಿ ತೊಡಗಿದೆ.
Published: 12th August 2022 12:35 PM | Last Updated: 12th August 2022 01:22 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ತನ್ನ ಆದಾಯವನ್ನು ಹೆಚ್ಚಿಸಲು ಮತ್ತು ಪ್ರಯಾಣಿಕರಿಗೆ ಅನುಕೂಲವಾಗುವಂತೆ, ಎರಡು ಪ್ರಮುಖ ಇಂಟರ್‌ಚೇಂಜ್ ಮೆಟ್ರೋ ನಿಲ್ದಾಣಗಳಲ್ಲಿ ಮಲ್ಟಿ-ಲೆವೆಲ್ ಪಾರ್ಕಿಂಗ್ ವ್ಯವಸ್ಥೆ ಮತ್ತು ವಾಣಿಜ್ಯ ಸಂಕೀರ್ಣಗಳ ನಿರ್ಮಾಣಕ್ಕೆ ಗಂಭೀರ ಚಿಂತನೆಯಲ್ಲಿ ತೊಡಗಿದೆ.
ಹೌದು.. ನಗರದ ಎರಡು ಪ್ರಮುಖ ಮೆಟ್ರೋ ನಿಲ್ದಾಣಗಳಾದ ಕೆಂಪೇಗೌಡ ನಿಲ್ದಾಣ ಮತ್ತು ನಿರ್ಮಾಣ ಹಂತದಲ್ಲಿರುವ ಕೃಷ್ಣರಾಜಪುರಂ (ಕೆಆರ್ ಪುರಂ) ಮೆಟ್ರೋ ನಿಲ್ದಾಣದಲ್ಲಿ ಮಲ್ಟಿ-ಲೆವೆಲ್ ಪಾರ್ಕಿಂಗ್ ವ್ಯವಸ್ಥೆ ಮತ್ತು ವಾಣಿಜ್ಯ ಸಂಕೀರ್ಣಗಳ ನಿರ್ಮಾಣಕ್ಕೆ ಬಿಎಂಆರ್ ಸಿಎಲ್ ಯೋಜನೆ ರೂಪಿಸುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ: ಲಾಲ್ ಬಾಗ್ ಫ್ಲವರ್ ಶೋ ನೋಡುಗರಿಗೆ ಮೆಟ್ರೋದಿಂದ 30 ರೂ. ಟಿಕೆಟ್ ಬಿಡುಗಡೆ
ಈ ಕುರಿತು ಬಿಎಂಆರ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಮಾಹಿತಿ ನೀಡಿದ್ದು, 'ಮಲ್ಟಿ-ಲೆವೆಲ್ ಪಾರ್ಕಿಂಗ್ ವ್ಯವಸ್ಥೆ ಮತ್ತು ವಾಣಿಜ್ಯ ಸಂಕೀರ್ಣಗಳ ನಿರ್ಮಾಣ, ಮೆಟ್ರೊ ತನ್ನ ಆದಾಯದ ಶೇಕಡಾ 25 ರಷ್ಟನ್ನು ಶುಲ್ಕರಹಿತ ವಿಧಾನಗಳ ಮೂಲಕ ಗಳಿಸುವ ಪ್ರಯತ್ನದ ಭಾಗವಾಗಿದೆ ಎಂದು ಹೇಳಿದರು.
'ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ ಸೌಲಭ್ಯಗಳನ್ನು ಒದಗಿಸುವ ಕ್ರಮವನ್ನು ಬಹಳ ಹಿಂದೆಯೇ ಯೋಜಿಸಲಾಗಿತ್ತು ಮತ್ತು ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಅದಕ್ಕೆ ಅತ್ಯಂತ ಬಲವಾದ ಅಡಿಪಾಯವನ್ನು ಹಾಕಲಾಯಿತು. ಕೆಆರ್ ಪುರಂ ನಿಲ್ದಾಣದ ಬಳಿ ನಾವು ಜಾಗವನ್ನು ಹೊಂದಿದ್ದೇವೆ, ಇದು ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗ ಅತ್ಯಂತ ಜನನಿಬಿಡ ನಿಲ್ದಾಣವಾಗಲಿದೆ ಮತ್ತು ಇದೇ ಕಾರಣಕ್ಕೆ ಇಲ್ಲಿ ಈ ಸೌಕರ್ಯಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ದೇಶದಲ್ಲೇ ಮೊದಲು: ಎಂಜಿ ರಸ್ತೆಯ ನಮ್ಮ ಮೆಟ್ರೋ ನಿಲ್ದಾಣದಲ್ಲಿ 5G ನೆಟ್‌ವರ್ಕ್ ಪರೀಕ್ಷೆ!
ಎರಡು ಪ್ರಸ್ತಾವನೆಗಳ ಆರ್ಥಿಕ ಕಾರ್ಯಸಾಧ್ಯತೆಯನ್ನು ಅನ್ವೇಷಿಸುವ ಕಾರ್ಯವನ್ನು ರಾಜ್ಯ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಅಂಗಸಂಸ್ಥೆ I-DECK ಗೆ ವಹಿಸಲಾಗಿದ್ದು, ಈ ಉದ್ದೇಶಕ್ಕಾಗಿ ಕೆಆರ್ ಪುರಂ ಬಳಿ ಸುಮಾರು ಒಂದು ಎಕರೆ ಪ್ರದೇಶವನ್ನು ಗುರುತಿಸಲಾಗಿದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದು ಅನೇಕ ಕಚೇರಿಗಳು ಅಥವಾ ಅಂಗಡಿಗಳನ್ನು ಹೊರತುಪಡಿಸಿ ಸುಮಾರು 200 ನಾಲ್ಕು-ಚಕ್ರ ವಾಹನಗಳು ಮತ್ತು 1500 ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್ ಗೆ ಅವಕಾಶ ಕಲ್ಪಿಸುತ್ತದೆ. ಕೆಜಿ ಮೆಟ್ರೊ ನಿಲ್ದಾಣದಲ್ಲಿ, 8 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ನಾಲ್ಕು ಅಥವಾ ಆರು ಮಹಡಿಗಳ ಪಾರ್ಕಿಂಗ್-ಕಮರ್ಷಿಯಲ್ ಕಾಂಪ್ಲೆಕ್ಸ್ ಅನ್ನು ಹೊಂದಲು ನಾವು ಎದುರು ನೋಡುತ್ತಿದ್ದೇವೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಬೆಂಗಳೂರು: ಅಂಡರ್ ಗ್ರೌಂಡ್ ಮೆಟ್ರೊ ನಿಲ್ದಾಣದ ಲಿಫ್ಟ್ ಬಳಸಲು ಟೋಕನ್ ವ್ಯವಸ್ಥೆ!
ಮೆಟ್ರೋದ ನೇರಳೆ ಮಾರ್ಗ ಮತ್ತು ಹಸಿರು ಮಾರ್ಗಕ್ಕೆ ಕೆಂಪೇಗೌಡ ಇಂಟರ್‌ಚೇಂಜ್ ಆಗಿದ್ದರೆ, ಕೆಆರ್ ಪುರಂ ಹೊರ ವರ್ತುಲ ರಸ್ತೆ ಮಾರ್ಗ ಮತ್ತು ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ಮಾರ್ಗದ ನಡುವೆ ಇಂಟರ್‌ಚೇಂಜ್ ಆಗಿ ಕಾರ್ಯನಿರ್ವಹಿಸುತ್ತದೆ. ವೈಟ್‌ಫೀಲ್ಡ್ ಮಾರ್ಗವನ್ನು ಪ್ರಾರಂಭಿಸಲು ನಿರ್ಧರಿಸಿದಾಗ ಕೆಆರ್ ಪುರಂ ನಿಲ್ದಾಣವು ವರ್ಷಾಂತ್ಯದ ವೇಳೆಗೆ ಪ್ರಾರಂಭವಾಗಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.