ಮೈಲುಗಟ್ಟಲೇ ಹಾಡಿಯಲ್ಲಿ ಸಾಗಿ ಆದಿವಾಸಿ ಕುಗ್ರಾಮಗಳಲ್ಲಿ 'ತ್ರಿವರ್ಣ ಧ್ವಜ' ವಿತರಿಸಿದ ಅಧಿಕಾರಿಗಳು!

ಅರಣ್ಯದೊಳಗಿರುವ ನೂರಾರು ಮನೆಗಳಿಗೆ ರಾಷ್ಟ್ರ ಧ್ವಜ ಹಂಚಲಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳ ಪ್ರಯತ್ನ ನಿಜಕ್ಕೂ ಶ್ಲಾಘನೀಯವಾಗಿದೆ.
ಜೋಯಿಡಾ ತಾಲೂಕಿನ ಹಪಕರ್ಣಿ ಗ್ರಾಮದಲ್ಲಿ ತ್ರಿವರ್ಣ ಧ್ವಜ ವಿತರಿಸಿದ ಅಧಿಕಾರಿಗಳು
ಜೋಯಿಡಾ ತಾಲೂಕಿನ ಹಪಕರ್ಣಿ ಗ್ರಾಮದಲ್ಲಿ ತ್ರಿವರ್ಣ ಧ್ವಜ ವಿತರಿಸಿದ ಅಧಿಕಾರಿಗಳು

ಜೋಯಿಡಾ: ಉತ್ತರ ಕನ್ನಡ ಜಿಲ್ಲೆ ಜೋಯಿಡಾ ತಾಲೂಕಿನ ಆದಿವಾಸಿ ಕುಗ್ರಾಮದಲ್ಲಿ ವಾಸಿಸುತ್ತಿರುವ 80 ವರ್ಷದ ವೃದ್ಧ ಬಾಬು ಹಲವಾರು ವರ್ಷಗಳಿಂದ ತ್ರಿವರ್ಣ ಧ್ವಜವನ್ನೇ ನೋಡಿರಲಿಲ್ಲ. ಪಂಚಾಯಿತಿ ಸದಸ್ಯರನ್ನೊಳಗೊಂಡ ತಂಡ ತ್ರಿವರ್ಣ ಧ್ವಜದೊಂದಿಗೆ ಬಂದು ಬಾಗಿಲು ಬಡಿದಾಗ ಆಶ್ಚರ್ಯಗೊಂಡರು. ಈ ವರ್ಷದ ಇವರೊಬ್ಬರೇ ಮಾತ್ರ ತ್ರಿವರ್ಣ ಧ್ವಜ ಪಡೆದಿಲ್ಲ. ಅರಣ್ಯದೊಳಗಿರುವ ನೂರಾರು ಮನೆಗಳಿಗೆ ರಾಷ್ಟ್ರ ಧ್ವಜ ಹಂಚಲಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳ ಪ್ರಯತ್ನ ನಿಜಕ್ಕೂ ಶ್ಲಾಘನೀಯವಾಗಿದೆ.

 ಪಂಚಾಯಿತಿ ಮತ್ತು ರಾಜ್ಯ ಅರಣ್ಯ ಇಲಾಖೆ ಅಧಿಕಾರಿಗಳು ಸುರಿಯುತ್ತಿದ್ದ ಮಳೆಯ ನಡುವೆ ಜಿಗಣೆ ಮೆತ್ತಿಕೊಂಡ ಹಾಡಿಯಲ್ಲಿ ಸಾಗಿ ಕೊನೆಯ ಮನೆಗೂ ತ್ರಿವರ್ಣ ಧ್ವಜ ವಿತರಿಸಿದ್ದಾರೆ. ಜೋಯಿಡಾ ತಾಲೂಕಿನ ಅನೇಕ ಸಣ್ಣ ಹಳ್ಳಿಗಳು ಶಾಲೆಗಳು ಅಥವಾ ಸರ್ಕಾರಿ ಕಚೇರಿಗಳನ್ನು ಹೊಂದಿಲ್ಲ. ಇಲ್ಲಿನ ಅನೇಕ ವೃದ್ಧರು ಹೊರಗೆ ಬರಲ್ಲ ಅಥವಾ ಮನೆಗಳಲ್ಲಿ ಟಿವಿ ಕೂಡಾ ಇಲ್ಲ. ಇದರಿಂದಾಗಿ ಅವರು ತ್ರಿವರ್ಣ ಧ್ವಜ ಕೂಡಾ ನೋಡಿಲ್ಲ.  ಕಾಡಂಚಿನ  ನೂರಾರು ಮನೆಗಳೊಂದಿಗೆ ಬಜರ್ ಕುಂಗ್ ಪಂಚಾಯತ್ ದೊಡ್ಡ ಪಂಚಾಯಿತಿಯಾಗಿದೆ.

ಹರ್ ಘರ್ ತಿರಂಗಾ ಅಭಿಯಾನಕ್ಕೂ ಮುಂಚೆ ಪಂಚಾಯಿತಿ ಪಂಚಾಯಿತಿ ವಿವರದ ಯೋಜನೆಯೊಂದನ್ನು ರೂಪಿಸಿ, ರಾಷ್ಟ್ರ ಧ್ವಜ ವಿತರಿಸಿದ್ದಾರೆ. ಪ್ರತಿಪಕ್ಷ ಕೂಡಾ ಈ ಯೋಜನೆಗೆ ಸಾಥ್ ನೀಡಿದ್ದು, ಆದಿವಾಸಿ ಕುಗ್ರಾಮಕ್ಕೆ ಸಾಗಿದ್ದಾರೆ. ಆರಂಭದಲ್ಲಿ ಅಭಿಯಾನದ ಯೋಜನೆ ಕೈಗೊಂಡಾಗ ಮಳೆ ಕಾರಣ ಮನೆಗಳಿಗೆ ತಲುಪುದು ಅಸಾಧ್ಯ ಎಂದುಕೊಂಡಿದ್ದೇವು. ಪ್ರವಾಹದಿಂದಾಗಿ ದಿಗ್ಗಿ ಹಳ್ಳಿಯ ಕುಗ್ರಾಮದಿಂದ ತಂಡ ಹಿಂತಿರುಗಿತ್ತು. ನೀರಿನ ಮಟ್ಟ ಕಡಿಮೆಯಾದ  ಎರಡು ದಿನಗಳ ನಂತರ ತ್ರಿವರ್ಣ ಧ್ವಜವನ್ನು ನೀಡಲಾಯಿತು ಎಂದು ಪಂಚಾಯಿತಿ ಸದಸ್ಯರೊಬ್ಬರು ಹೇಳಿದರು.

ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಕುಂಬಾರವಾಡ ವನ್ಯಜೀವಿ ವಿಭಾಗದ ಸಿಬ್ಬಂದಿ ಕೂಡಾ ಇದಕ್ಕೆ ನೆರವಾಗಿದ್ದಾರೆ. ಕಳ್ಳ ಬೇಟೆಗಾರರ ನಿಗ್ರಹದ ಸಿಬ್ಬಂದಿ, ಆದಿವಾಸಿ ಕುಗ್ರಾಮಗಳಿಗೆ ತ್ರಿವರ್ಣಧ್ವಜ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಆರ್ ಎಫ್ ಒ  ಶಶಿಧರ್ ಪಾಟೀಲ್ ತಿಳಿಸಿದರು. ಮನೆಗಳ ಮುಂಭಾಗ ರಾಷ್ಟ್ರಧ್ವಜ ಹಾರಾಟದ ಬಗ್ಗೆ ಕೇಳಿದ್ದೇವು ಆದರೆ, ಮನೆಗಳ ಹತ್ತಿರ ಬಂದು ರಾಷ್ಟ್ರಧ್ವಜ ಹಂಚುವ ಬಗ್ಗೆ ನಿರೀಕ್ಷೆ ಇರಲಿಲ್ಲ. ಮುಂದಿನ ವರ್ಷದವರೆಗೂ ರಾಷ್ಟ್ರಧ್ವಜವನ್ನು ಇಟ್ಟುಕೊಂಡಿರುವುದಾಗಿ ದಗ್ಗಿ ಬಳಿಯ ಹಳ್ಳಿಯೊಂದರ ನಿವಾಸಿ ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com