ನಿಷೇಧಾಜ್ಞೆ ನಡುವೆಯೂ ಶಿವಮೊಗ್ಗದಲ್ಲಿ ಮುಂದುವರಿದ ಗಲಭೆ: ಭದ್ರಾವತಿಯಲ್ಲಿ ಹಿಂದೂ ಕಾರ್ಯಕರ್ತ ಸುನಿಲ್ ಮೇಲೆ ಹಲ್ಲೆ, ಆಸ್ಪತ್ರೆಗೆ ದಾಖಲು

ವೀರ ಸಾವರ್ಕರ್ -ಟಿಪ್ಪು ಫ್ಲೆಕ್ಸ್ ಹರಿದು ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಆರಂಭವಾದ ಗಲಾಟೆ, ಚಾಕು ಇರಿತ ನಿಷೇಧಾಜ್ಞೆ ನಡುವೆಯೂ ಇಂದು ಮಂಗಳವಾರ ಕೂಡ ಮುಂದುವರಿದಿದೆ.
ಗಾಯಾಳು ಸುನಿಲ್
ಗಾಯಾಳು ಸುನಿಲ್

ಶಿವಮೊಗ್ಗ: ವೀರ ಸಾವರ್ಕರ್ -ಟಿಪ್ಪು ಫ್ಲೆಕ್ಸ್ ಹರಿದು ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಆರಂಭವಾದ ಗಲಾಟೆ, ಚಾಕು ಇರಿತ ನಿಷೇಧಾಜ್ಞೆ ನಡುವೆಯೂ ಇಂದು ಮಂಗಳವಾರ ಕೂಡ ಮುಂದುವರಿದಿದೆ.

ಕಳೆದ ಆರು ತಿಂಗಳಿನಿಂದ ಹಿಂದೂ ಕಾರ್ಯಕರ್ತ ಹರ್ಷ ಕೊಲೆ, ಕೋಮು ಗಲಭೆಗೆ ಸುದ್ದಿಯಾಗಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೊಮ್ಮೆ ಅಂತಹದ್ದೇ ವಾತಾವರಣ ಎದ್ದಿದೆ. 

ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಪೊಲೀಸರು ಪಥ ಸಂಚಲನ ನಡೆಸಿ ದುಷ್ಕರ್ಮಿಗಳಲ್ಲಿ ಭಯ ಹುಟ್ಟಿಸಲು ಮತ್ತು ನಾಗರಿಕರಲ್ಲಿ ಧೈರ್ಯ ತುಂಬಲು ಯತ್ನಿಸಿದರೂ ಯುವಕರು ಕ್ಯಾರೇ ಅನ್ನುತ್ತಿಲ್ಲ.

ಇಂದು ನಿಷೇಧಾಜ್ಞೆಯ ನಡುವೆಯೂ ಭದ್ರಾವತಿಯ (Bhadravati) ನೆಹರು ಬಡಾವಣೆಯಲ್ಲಿ ಗಲಾಟೆ ನಡೆದು ಕಾರ್ಯಕರ್ತನ ಮೇಲೆ ಹಲ್ಲೆ ನಡೆದಿದ್ದು, ಚಾಕುವಿನಿಂದ ಇರಿಯಲು ಯತ್ನಿಸಲಾಗಿದೆ. ಕಾರ್ಯಕರ್ತ ಸುನಿಲ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದು ಗಾಯಾಳುವನ್ನು ಪ್ರಸ್ತುತ ಭದ್ರಾವತಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹಳೇ ನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಡಿಚ್ಚಿ ಆಲಿಯಾಸ್​ ಮುಬಾರಕ್​ ಸೇರಿದಂತೆ ಮೂವರ ಮೇಲೆ ಹಲ್ಲೆ ಆರೋಪ ಕೇಳಿಬರುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com