ಅಥಣಿ: 60 ವಿದ್ಯಾರ್ಥಿಗಳಿದ್ದ ಶಾಲಾ ಬಸ್- ಕಂಟೈನರ್ ಮುಖಾಮುಖಿ ಡಿಕ್ಕಿ; ಚಾಲಕರು ಸ್ಥಳದಲ್ಲೇ ಸಾವು

ಬೆಳಗಾವಿ ಜಿಲ್ಲೆ ಅಥಣಿ ಹೊರವಲಯದಲ್ಲಿ ಇಂದು ಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಶಾಲಾ ಬಸ್ ಕಂಟೈನರ್ ಗೆ ಡಿಕ್ಕಿ ಹೊಡೆದಿದ್ದು, ಈ ಎರಡು ವಾಹನಗಳ ಚಾಲಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಶಾಲಾ ಬಸ್- ಕಂಟೈನರ್ ಡಿಕ್ಕಿ
ಶಾಲಾ ಬಸ್- ಕಂಟೈನರ್ ಡಿಕ್ಕಿ

ಅಥಣಿ: ಬೆಳಗಾವಿ ಜಿಲ್ಲೆ ಅಥಣಿ ಹೊರವಲಯದಲ್ಲಿ ಇಂದು ಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಶಾಲಾ ಬಸ್ ಕಂಟೈನರ್ ಗೆ ಡಿಕ್ಕಿ ಹೊಡೆದಿದ್ದು, ಈ ಎರಡು ವಾಹನಗಳ ಚಾಲಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅದೃಷ್ಟವಶಾತ್ ವಿದ್ಯಾರ್ಥಿಗಳು ಸಣ್ಣ ಪುಟ್ಟ ಗಾಯಗಳಿಂದ ಪ್ರಾಣಪಾಯದಿಂದ ಪಾರಾಗಿದ್ದಾರೆ. ಈ ಭಯಾನಕ ಅಪಘಾತದಿಂದ ಇಡೀ ಅಥಣಿ ಪಟ್ಟಣ ಆತಂಕಗೊಂಡಿದೆ. ಘಟನೆಯನ್ನು ಕಂಡ ವಿದ್ಯಾರ್ಥಿಗಳು ಭಯಭೀತರಾಗಿ ಪೋಷಕರು ಸ್ಥಳಕ್ಕೆ ತಲುಪುವವರೆಗೂ ಚೀರಾಡುತ್ತಿದ್ದರು.

8 ರಿಂದ 16 ವರ್ಷ ವಯೋಮಾನದ 60ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದ ಅಥಣಿಯ ಬಾಣಜವಾಡ ಆಂಗ್ಲ ಮಾಧ್ಯಮ ಶಾಲಾ ಬಸ್ ಬೆಳಗ್ಗೆ 8 ಗಂಟೆ ಸಮಯದಲ್ಲಿ ಅಥಣಿಯಿಂದ  ಶೇಡಬಾಳ ರಸ್ತೆ ಕಡೆಗೆ ಹೊರಟಿತ್ತು. ಆದರೆ, ಶೇಡಬಾಳ ರಸ್ತೆಯಿಂದ ಅಥಣಿ ಕಡೆಗೆ ಹೋಗುತ್ತಿದ್ದ ಕಂಟೈನರ್ ವಾಹನ ಶಾಲಾ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಭೀಕರ ಅಪಘಾತದಲ್ಲಿ ಶಾಲಾ ಬಸ್ ಮತ್ತು ಕಂಟೈನರ್‌ನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.

<strong>ಗಾಯಗೊಂಡಿರುವ ವಿದ್ಯಾರ್ಥಿ</strong>
ಗಾಯಗೊಂಡಿರುವ ವಿದ್ಯಾರ್ಥಿ

ಶಾಲಾ ಬಸ್ ಗಳ ಚಾಲಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬಸ್ ನಲ್ಲಿದ್ದ ಮಹಿಳಾ ಶಿಕ್ಷಕಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಬೆಳಗಾವಿಯ ಕೆಎಲ್ ಇ ಆಸ್ಪ್ರೆಗೆ ಕರೆದೊಯ್ಯಲಾಗಿದೆ. ಸುಮಾರು 30 ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. 30 ವಿದ್ಯಾರ್ಥಿಗಳಿಗೆ ಯಾವುದೇ ಗಾಯವಾಗಿಲ್ಲ ಆದರೆ, ಘಟನೆ ನಂತರ ಭೀತಿಗೊಂಡಿದ್ದು, ತಮ್ಮ ಪೋಷಕರೊಂದಿಗೆ ಮನೆಗೆ ತೆರಳಿದರು.

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೊಲೀಸ್ ಅಧಿಕಾರಿಗಳು, ರಕ್ಷಣಾ ತಂಡ, ತಾಲೂಕ್ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದು, ಗಾಯಾಗಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಮಧ್ಯೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಪಾಟೀಲ್, ಹೆಚ್ಚುವರಿ ಎಸ್ ಪಿ ಮಹಾನಿಂಗ್ ನಂದಗವಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com