ದೇವರು ಇಂಥದ್ದನ್ನೇ ತಿಂದು ಬಾ ಎಂದು ಹೇಳಿದ್ದಾರಾ ಎಂದ ಸಿದ್ದರಾಮಯ್ಯ, ಅವರು ಮಾಂಸಾಹಾರ ಸೇವಿಸಿಲ್ಲ ಎಂದ ವೀಣಾ ಅಚ್ಚಯ್ಯ!

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವಕು ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ ಮೊಟ್ಟೆ ಎಸೆದಿದ್ದ ಘಟನೆ ಬಳಿಕ ಇದೀಗ ಮತ್ತೊಂದು ವಿವಾದ ಅವರ ಬೆನ್ನತ್ತಿದೆ. ಸಿದ್ದರಾಮಯ್ಯ ಅವಕು ಮಧ್ಯಾಹ್ನ ನಾಟಿ ಕೋಳಿ ಸಾರು ಊಟ ಮಾಡಿ, ಸಂಜೆ ದೇವಸ್ಥಾನಕ್ಕೆ ಭೇಟಿ ನೀಡಿದ್ದರು ಎಂಬುದು ಇದೀಗ ವಿವಾದಕ್ಕೆ ಕಾರಣವಾಗಿದೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವಕು ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ ಮೊಟ್ಟೆ ಎಸೆದಿದ್ದ ಘಟನೆ ಬಳಿಕ ಇದೀಗ ಮತ್ತೊಂದು ವಿವಾದ ಅವರ ಬೆನ್ನತ್ತಿದೆ. ಸಿದ್ದರಾಮಯ್ಯ ಅವಕು ಮಧ್ಯಾಹ್ನ ನಾಟಿ ಕೋಳಿ ಸಾರು ಊಟ ಮಾಡಿ, ಸಂಜೆ ದೇವಸ್ಥಾನಕ್ಕೆ ಭೇಟಿ ನೀಡಿದ್ದರು ಎಂಬುದು ಇದೀಗ ವಿವಾದಕ್ಕೆ ಕಾರಣವಾಗಿದೆ.

ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಸಿದ್ದರಾಮಯ್ಯ. ನಾನು ಯಾರಿಗೂ ಭಯ ಪಡುವ ಪ್ರಶ್ನೆಯಿಲ್ಲ. ನಾವು ಸಂವಿಧಾನ ಜನರಿಗೆ ಮಾತ್ರ ಭಯ ಪಡುತ್ತೇನೆ. ದೇವರು ಇಂಥದ್ದನ್ನೇ ತಿಂದು ಬಾ ಎಂದು ಹೇಳಿದ್ದಾರಾ? ಮಧ್ಯಾಹ್ನ ತಿಂದು ಸಂಜೆ ಹೋಗಬಾರದಾ? ಹಾಗಿದ್ದರೆ, ಹಿಂದಿನ ದಿನ ಮಾಂಸ ತಿಂದು ದೇವಸ್ಥಾನಕ್ಕೆ ಹೋಗಬಹುದಾ? ಬಿಜೆಪಿಯವರು ಇಲ್ಲಸಲ್ಲದ ವದಂತಿ ಹಬ್ಬಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಇನ್ನೊಂದೆಡೆ ಮಾಜಿ ಎಂಎಲ್‌ಸಿ ವೀಣಾ ಅಚ್ಚಯ್ಯ ಮಾತನಾಡಿ, ನಮ್ಮ ಮನೆಗೆ ಬಂದಿದ್ದಾಗ ಸಿದ್ದರಾಮಯ್ಯ ಮಾಂಸ ಸೇವಿಸಿರಲಿಲ್ಲ. ಸಿದ್ದರಾಮಯ್ಯನವರು ಅಕ್ಕಿ ರೊಟ್ಟಿ, ಕಾಳುಪಲ್ಯ ಸೇವಿಸಿದ್ದರು. ಸಿದ್ದರಾಮಯ್ಯ ಮಾಂಸಾಹಾರ ಸೇವಿಸಿದ್ದರು ಎನ್ನುವುದು ಸುಳ್ಳು. ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡಿ ಅವರ ವಿರುದ್ಧ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಅಂದು ನಾನು ಚಪಾತಿ, ಮಟನ್ ಮತ್ತು ನಾಟಿ ಕೋಳಿ ಸಾರು ಮಾಡಿದ್ದು ನಿಜ. ಸಿದ್ದರಾಮಯ್ಯ ಅವರಿಗಾಗಿಯೇ ನಾಟಿ ಕೋಟಿ ಸಾಂಬಾರ್ ಮಾಡಿದ್ದೆವು. ಆದರೆ ಸಿದ್ದರಾಮಯ್ಯ ಅವರು ನಮ್ಮ ಮನೆಯಲ್ಲಿ ಮಾಂಸಾಹಾರ ಸೇವಿಸಿಲ್ಲ. ನಾನೇ ಊಟ ಬಡಿಸಿದ್ದೆ. ಸಿದ್ದರಾಮಯ್ಯ ಅವರು ಅಕ್ಕಿ ರೊಟ್ಟಿ ಕಾಳು ಪಲ್ಯ ಸೇವಿಸಿದ್ದರು. ಅವರ ಜೊತೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಕೂಡ ಬಂದಿದ್ದರು. ಅವರೂ ಕೂಡ ಅಕ್ಕಿರೊಟ್ಟಿ, ಅನ್ನ ಸಾಂಬರ್ ಸೇವಿಸಿದರು. ಇದೆಲ್ಲವೂ ಸುಳ್ಳು ಆರೋಪವಷ್ಟೆ. ಮಡಿಕೇರಿ ಅಂದರೆ ಅತಿಥಿ ಸತ್ಕಾರಕ್ಕೆ ಹಸರುವಾಸಿ ಎಂದಿದ್ದಾರೆ.

ಮಡಿಕೇರಿಯ ಅತಿಥಿ ಗೃಹದಲ್ಲಿ‌ ಮಧ್ಯಾಹ್ನ ಕೋಳಿ ಸಾರು‌ ಸವಿದಿದ್ದ ಸಿದ್ದರಾಮಯ್ಯ, ಮಧ್ಯಾಹ್ನದ ಬಳಿಕ ಕೊಡ್ಲಿಪೇಟೆಯ ಬಸವೇಶ್ವರ ದೇವಸ್ಥಾನಕ್ಕೆ‌ ಭೇಟಿ ನೀಡಿದ್ದಾರೆ ಎನ್ನಲಾಗುವ ಫೋಟೊ, ವಿಡಿಯೋ ಸಾಮಾಜಿಕ‌ ಜಾಲತಾಣದಲ್ಲಿ ವೈರಲ್‌ ಆಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com