ವಿಜಯಪುರ ಕಾಂಗ್ರೆಸ್ ಕಚೇರಿ ಗೋಡೆಗೆ ವೀರ ಸಾವರ್ಕರ್ ಫೋಟೋ: ಆರೋಪಿ ಬಸವರಾಜ ಹೂಗಾರ ಬಂಧಿಸುವಂತೆ ಆಗ್ರಹ
ರಾಜ್ಯದಲ್ಲಿ ವೀರ ಸಾವರ್ಕರ್ ಭಾವಚಿತ್ರ ಅಂಟಿಸುವ ವಿವಾದ ಕಾಡ್ಗಿಚ್ಚಿನಂತೆ ವಿವಿಧ ಜಿಲ್ಲೆಗಳಿಗೆ ಹಬ್ಬುತ್ತಿದೆ. ನಿನ್ನೆ ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಸಾವರ್ಕರ್ ಫೋಟೋಗಳನ್ನು ಹಿಂದೂಪರ ಸಂಘಟನೆ ಸದಸ್ಯರೊಬ್ಬರು ಅಂಟಿಸಿದ್ದಾರೆ.
Published: 22nd August 2022 11:30 AM | Last Updated: 22nd August 2022 01:56 PM | A+A A-

ವಿಜಯಪುರ ಕಾಂಗ್ರೆಸ್ ಕಚೇರಿ ಗೋಡೆಗೆ ವೀರ ಸಾವರ್ಕರ್ ಫೋಟೋ ಅಂಟಿಸಿದ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ
ವಿಜಯಪುರ: ರಾಜ್ಯದಲ್ಲಿ ವೀರ ಸಾವರ್ಕರ್ ಭಾವಚಿತ್ರ ಅಂಟಿಸುವ ವಿವಾದ ಕಾಡ್ಗಿಚ್ಚಿನಂತೆ ವಿವಿಧ ಜಿಲ್ಲೆಗಳಿಗೆ ಹಬ್ಬುತ್ತಿದೆ. ನಿನ್ನೆ ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಸಾವರ್ಕರ್ ಫೋಟೋಗಳನ್ನು ಹಿಂದೂಪರ ಸಂಘಟನೆ ಸದಸ್ಯರೊಬ್ಬರು ಅಂಟಿಸಿದ್ದಾರೆ.
ಇದೇ ಸಂದರ್ಭದಲ್ಲಿ ಹಲವು ಹಿಂದೂ ಸಂಘಟನೆಗಳ ಕಾರ್ಯಕರ್ತರು ಇದೇ ತಿಂಗಳು ಕೊನೆಗೆ ಇರುವ ಹಿಂದೂಗಳ ಪ್ರಮುಖ ಹಬ್ಬ ಗಣೇಶ ಚತುರ್ಥಿ ಅಂಗವಾಗಿ 9 ದಿನಗಳ ಕಾಲ ವೀರ ಸಾವರ್ಕರ್ ಭಾವಚಿತ್ರವನ್ನು ಅಲ್ಲಲ್ಲಿ ನೇತಾಡಿಸಲು ತೀರ್ಮಾನಿಸಿದ್ದಾರೆ. ನಿನ್ನೆ ಕಾಂಗ್ರೆಸ್ ಕಚೇರಿ ಹೊರಗೆ ಹಿಂದೂಪರ ಸಂಘಟನೆ ಸದಸ್ಯರು ತಡರಾತ್ರಿ ಆಗಮಿಸಿ ಹತ್ತಕ್ಕೂ ಹೆಚ್ಚು ಫೋಟೋ ಅಂಟಿಸಿದ್ದಾರೆ. ಕಾಂಗ್ರೆಸ್ ಕಚೇರಿಯ ಬಾಗಿಲು, ಬೋರ್ಡ್, ಗೋಡೆಗಳಿಗೆ ಫೋಟೋ ಅಂಟಿಸಿ ಪರಾರಿಯಾಗಿದ್ದಾರೆ.
ಇಂದು ಬೆಳಗ್ಗೆ ಕಾಂಗ್ರೆಸ್ ಕಚೇರಿಗೆ ಸಿಬ್ಬಂದಿ ಬಂದು ನೋಡಿದಾಗ ವಿಷಯ ಗಮನಕ್ಕೆ ಬಂದಿದ್ದು ಪೊಲೀಸರಿಗೆ ವಿಷಯ ಮುಟ್ಟಿಸಿದರು. ಪೊಲೀಸರ ಭದ್ರತೆ ನಡುವೆ ಕಾಂಗ್ರೆಸ್ ಕಾರ್ಯಕರ್ತರು ಇಂದು ವಿ ಡಿ ಸಾವರ್ಕರ್ ಫೋಟೋಗಳನ್ನು ಕಚೇರಿ ಗೋಡೆಯಿಂದ ಕಿತ್ತೆಸೆದರು.
ಇಂದು ಬಿಜೆಪಿ ಯುವ ಮೋರ್ಚಾ ಮಹಾನಗರ ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಘೋಷಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿ ಹಾಗೂ ಸುತ್ತಮುತ್ತ ಪೊಲೀಸ್ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
Police security has been tightened in & around the District Congress Office after BJP Yuva Morcha announced that they would picket the office of the-grand-old-party in #Vijayapura. @XpressBengaluru @KannadaPrabha @ramupatil_TNIE @naushadbijapur @DKShivakumar @siddaramaiah pic.twitter.com/TmThShV8qG
— Mahesh M Goudar। ಮಹೇಶ್ ಮ ಗೌಡರ (@MahiPEN_TNIE) August 22, 2022
ಸಾವರ್ಕರ್ ಫೋಟೋ ಅಂಟಿಸಿದ್ದು ನಾನೇ: ಇನ್ನು ಇಂದು ಮಾಧ್ಯಮ ಪ್ರತಿನಿಧಿಗಳ ಮುಂದೆ ಹೇಳಿಕೆ ನೀಡಿರುವ ವಿಜಯಪುರ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಬಸವರಾಜ ಹೂಗಾರ, ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ನವರು ಸಾವರ್ಕರ್ ಫೋಟೋ ಸುಟ್ಟಿದ್ದರು. ಈ ಮೂಲಕ ವಿ.ಡಿ.ಸಾವರ್ಕರ್ಗೆ ಅಪಮಾನ ಮಾಡಿದ್ದಾರೆ. ಇಂಥ ವಿವಾದ ಸೃಷ್ಟಿಸುವ ಕೆಲಸ ಪದೇಪದೆ ಮಾಡುತ್ತಿದ್ದಾರೆ.
ವಿವಾದ ಅಂತ್ಯಗೊಳಿಸಲು ಕಾಂಗ್ರೆಸ್ ಕಚೇರಿ ಗೋಡೆಗೆ ಸಾವರ್ಕರ್ ಫೋಟೋ ಅಂಟಿಸಿದ್ದೇನೆ. ಸಾವರ್ಕರ್ ಫೋಟೋ ಅಂಟಿಸಿದ್ದು ದೊಡ್ಡ ಅಪರಾಧವಲ್ಲ. ಸಾವರ್ಕರ್ ಬಗ್ಗೆ ಮಾತನಾಡುವುದನ್ನು ಇಲ್ಲಿಗೆ ನಿಲ್ಲಿಸಿದರೆ ಸರಿ, ಇಲ್ಲದಿದ್ದರೆ ನಾಳೆ ‘ಕೈ’ ನಾಯಕರ ಮನೆಗಳಿಗೆ ಫೋಟೋ ಹೋಗುತ್ತೆ, ಅದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹೇಳಿದ್ದಾರೆ. ಲಜ್ಜೆಗೇಡಿತನ ಕೆಲಸ ಮಾಡುತ್ತಿರುವ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದ ಅವರು, ಇಂದು ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.
In the presence of @VIJAYAPURPOLICE ,the @BJP4Karnataka party workers once again posted the photos of V D Savarkar on Congress office in #Vijayapura. @XpressBengaluru @KannadaPrabha @ramupatil_TNIE @naushadbijapur @AshwiniMS_TNIE @CMofKarnataka @siddaramaiah @MBPatil pic.twitter.com/CcoEZKPq19
— Mahesh M Goudar। ಮಹೇಶ್ ಮ ಗೌಡರ (@MahiPEN_TNIE) August 22, 2022
ಹೂಗಾರ್ ಅವರನ್ನು ಬಂಧಿಸಬೇಕು: ಕಾಂಗ್ರೆಸ್ ಕಚೇರಿ ಗೋಡೆಗೆ ಸಾವರ್ಕರ್ ಫೋಟೋ ಅಂಟಿಸಿರುವ ಬಸವರಾಜ ಹೂಗಾರ ಅವರನ್ನು ಪೊಲೀಸರು ತಕ್ಷಣ ಬಂಧಿಸಬೇಕು, ಒಂದು ವೇಳೆ ಪೊಲೀಸರು ಬಂಧಿಸುವಲ್ಲಿ ವಿಫಲರಾದರೆ ಬಿಜೆಪಿಯವರು ವಿರೋಧಿಸುವ ಟಿಪ್ಪು ಸುಲ್ತಾನ್ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರ ಫೋಟೋಗಳನ್ನು ಬಿಜೆಪಿ ಕಚೇರಿ ಹೊರಗೆ ಅಂಟಿಸುತ್ತೇವೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಜು ಅಲಗೂರು ಹೇಳಿದ್ದಾರೆ.
DCC president Raju Alagur said, “If the @VIJAYAPURPOLICE fails to arrest accused B Hugar, who allegedly pasted photos of VD Savarkar, we will also paste the photos of the freedom fighters including #TippuSultan who have been disliked by the @BJP4Karnataka.” @XpressBengaluru pic.twitter.com/6vjLBfMP6T
— Mahesh M Goudar। ಮಹೇಶ್ ಮ ಗೌಡರ (@MahiPEN_TNIE) August 22, 2022