ಬೆಳಗಾವಿಯಲ್ಲಿ ಇನ್ನೂ ಸೆರೆಸಿಗದ ಚಿರತೆ: ಸೋಷಿಯಲ್ ಮೀಡಿಯಾ ತುಂಬೆಲ್ಲ ಮೀಮ್ಸ್, ಟ್ರೋಲ್ಸ್

ಇಲ್ಲಿನ ಗಾಲ್ಫ್ ಕ್ಲಬ್ ಮೈದಾನ ಬಳಿ ಚಿರತೆ ಕಾಣಿಸಿಕೊಂಡು ಬರೋಬ್ಬರಿ 20 ದಿನಗಳು ಕಳೆದಿದ್ದು ಇನ್ನೂ ಪತ್ತೆಯಾಗಿ ಸೆರೆಸಿಗದಿರುವುದು ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಭಾರೀ ಸಮಸ್ಯೆ ಮತ್ತು ಸವಾಲಾಗಿದೆ. 
ಚಿರತೆಗೆ ಸಂಬಂಧಿಸಿದ ಮೀಮ್ಸ್
ಚಿರತೆಗೆ ಸಂಬಂಧಿಸಿದ ಮೀಮ್ಸ್

ಬೆಳಗಾವಿ: ಇಲ್ಲಿನ ಗಾಲ್ಫ್ ಕ್ಲಬ್ ಮೈದಾನ ಬಳಿ ಚಿರತೆ ಕಾಣಿಸಿಕೊಂಡು ಬರೋಬ್ಬರಿ 20 ದಿನಗಳು ಕಳೆದಿದ್ದು ಇನ್ನೂ ಪತ್ತೆಯಾಗಿ ಸೆರೆಸಿಗದಿರುವುದು ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಭಾರೀ ಸಮಸ್ಯೆ ಮತ್ತು ಸವಾಲಾಗಿದೆ. 

ಕಳೆದ ಆಗಸ್ಟ್ 5ರಂದು ಬೆಳಗಾವಿಯ ಜಾಧವ ನಗರದಲ್ಲಿ ಕಟ್ಟಡ ಕಾರ್ಮಿಕನ ಮೇಲೆ ದಾಳಿ ಮಾಡಿದ ಚಿರತೆ ನಂತರ ವಾರದ ಹಿಂದೆ ಗಾಲ್ಫ್ ಕ್ಲಬ್‌ನಲ್ಲಿ ಅವಿತುಕೊಂಡಿರುವ ಸುದ್ದಿ ಕೇಳಿದಾಗ ಮೊದಲೆಲ್ಲ ಜನರಲ್ಲಿ ಆತಂಕದ ಛಾಯೆ ಮೂಡಿಸಿತ್ತು. ನಂತರ ಒಂದು ದಿನ ಇದ್ದಕ್ಕಿದ್ದಂತೆ ನಸುಕಿನ ಜಾವ ಮಾರ್ಗ ಮೂಲಕ ಹಾದುಹೋಗಿದ್ದು ಬಸ್ ಚಾಲಕ ವಿಡಿಯೊ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದರು.

ಚಿರತೆ ಕಾಣಿಸಿಕೊಂಡ ಕಾರಣಕ್ಕೆ ಗಾಲ್ಪ್ ಕ್ಲಬ್‌ ಸುತ್ತಲಿನ ಪ್ರದೇಶಗಳ 22 ಶಾಲೆಗಳು ಬಂದ್‌ ಆಗಿ ಸಾವಿರಕ್ಕೂ ಹೆಚ್ಚು ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ತೊಂದರೆಯಾಗುತ್ತಿದೆ. 20 ದಿನವಾದರೂ ಸೆರೆಹಿಡಿಯಲಾಗದೆ ಇನ್ನೆಷ್ಟು ದಿನ ಈ ಆತಂಕ ಎಂಬ ಅಸಮಾಧಾನ ಜನರಿಂದ ವ್ಯಕ್ತವಾಗುತ್ತಿದೆ.

ಈ ಮಧ್ಯೆ ಚಿರತೆ ಇನ್ನೂ ಸೆರೆಸಿಗದಿರುವ ಹಿನ್ನೆಲೆಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಮೀಮ್ಸ್ ಗಳು, ಟ್ರೋಲ್ ಗಳು ಹರಿದಾಡುತ್ತಿವೆ. ಬೆಳಗಾವಿ ಬಿಟ್ ಹೋಗಲ್ಲ, ಯಾರಪ್ಪಂದ್ ಬೆಳಗಾವಿ ನಂದೈತಿ, ಗಣೇಶ ಹಬ್ಬ ಮುಗಿಸ್ಕೊಂಡ್ ಹೋಗ್ತೀನಿ, ಚಿರತೆಯ ಚಿತ್ರ ಹಾಕಿ ಆಧಾರ್ ಕಾರ್ಡು ಮಾಡಿಸಿರುವಂತಹ ಫೋಟೋಗಳು ಸಾಕಷ್ಟು ಹರಿದಾಡುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com