ಬೆಂಗಳೂರು ಏರ್ ಪೋರ್ಟ್ ಲ್ಲಿ 100 ಕೋಟಿ ರೂ. ಮೌಲ್ಯದ ಹೆರಾಯಿನ್ ವಶ

ಕಳೆದ ಮೂರು ವಾರಗಳ ಅವಧಿಯಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯದ (DRI) ಬೆಂಗಳೂರು ಘಟಕವು ರಾಜ್ಯದಲ್ಲಿ ಎರಡನೇ ಅತಿ ದೊಡ್ಡ ಹೆರಾಯಿನ್ ವಶಪಡಿಸಿಕೊಂಡಿದ್ದು, ಮಾರುಕಟ್ಟೆಯಲ್ಲಿ ಸುಮಾರು 100 ಕೋಟಿ ಮೌಲ್ಯದ 14 ಕಿಲೋಗ್ರಾಂ ಮಾದಕ ವಸ್ತುವನ್ನು ವಶಪಡಿಸಿಕೊಂಡಿದೆ. 
ಬೆಂಗಳೂರು ಏರ್ ಪೋರ್ಟಲ್ಲಿ ವಶಪಡಿಸಿಕೊಂಡಿರುವ ಹೆರಾಯಿನ್
ಬೆಂಗಳೂರು ಏರ್ ಪೋರ್ಟಲ್ಲಿ ವಶಪಡಿಸಿಕೊಂಡಿರುವ ಹೆರಾಯಿನ್

ಬೆಂಗಳೂರು: ಕಳೆದ ಮೂರು ವಾರಗಳ ಅವಧಿಯಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯದ (DRI) ಬೆಂಗಳೂರು ಘಟಕವು ರಾಜ್ಯದಲ್ಲಿ ಎರಡನೇ ಅತಿ ದೊಡ್ಡ ಹೆರಾಯಿನ್ ವಶಪಡಿಸಿಕೊಂಡಿದ್ದು, ಮಾರುಕಟ್ಟೆಯಲ್ಲಿ ಸುಮಾರು 100 ಕೋಟಿ ಮೌಲ್ಯದ 14 ಕಿಲೋಗ್ರಾಂ ಮಾದಕ ವಸ್ತುವನ್ನು ವಶಪಡಿಸಿಕೊಂಡಿದೆ. 

ಇಥಿಯೋಪಿಯಾದಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (KIA) ಬಂದ ತೆಲಂಗಾಣ ಮೂಲದವರ ಸಾಮಾನು ಸರಂಜಾಮುಗಳನ್ನು ವಶಪಡಿಸಿಕೊಂಡ ವೇಳೆ ಹೆರಾಯಿನ್ ಪತ್ತೆಯಾಗಿದೆ. ಮೊನ್ನೆ ಆಗಸ್ಟ್ 19 ರಂದು ನಡೆದ ಜಪ್ತಿ ಇದೀಗ ಬೆಳಕಿಗೆ ಬಂದಿದೆ. 

ವಿಶ್ವಾಸಾರ್ಹ ಮೂಲಗಳಿಂದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಈ ಬಗ್ಗೆ ಮಾಹಿತಿ ಸಿಕ್ಕಿದ್ದು, ಇಥಿಯೋಪಿಯನ್ ಏರ್‌ಲೈನ್ಸ್‌ನಿಂದ ಅಡಿಸ್ ಅಬಾಬಾದಿಂದ ಬೆಂಗಳೂರು ತಲುಪಿದ 45 ವರ್ಷದ ಪ್ರಯಾಣಿಕನನ್ನು ಸಂದೇಹ ಮೇಲೆ ತಡೆದು ಆತನ ಸಾಮಾನು ಸರಂಜಾಮುಗಳನ್ನು ಪರಿಶೀಲನೆ ನಡೆಸಿದಾಗ ಕಪ್ಪು ಬಣ್ಣದ ವಸ್ತುವಿನಲ್ಲಿ ಏನೋ ಮರೆಮಾಚಿಕೊಂಡಿರುವುದು ಕಂಡುಬಂತು. 

ಪರೀಕ್ಷಿಸಿದಾಗ ಹೆರಾಯಿನ್ ಪತ್ತೆಯಾಗಿದೆ. ಅದನ್ನು ದೆಹಲಿಗೆ ವಿಮಾನದಲ್ಲಿ ಕಳ್ಳಸಾಗಣೆ ಮಾಡಲು ಯೋಜಿಸುತ್ತಿದ್ದರು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆತ ಟಿಕೆಟ್ ಕಾಯ್ದಿರಿಸುವ ಮೊದಲು ಆತನನ್ನು ತಡೆದು ಬಂಧಿಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಹೆರಾಯಿನ್ ಜೊತೆ ಬಂದವನು ತವರೂರಿನಲ್ಲಿ ನಿರುದ್ಯೋಗಿಯಾಗಿದ್ದನು. ಉದ್ಯೋಗವನ್ನು ಹುಡುಕುವ ಭರವಸೆಯೊಂದಿಗೆ ಇಥಿಯೋಪಿಯಾಕ್ಕೆ ಹೋಗಿದ್ದನು. ದೆಹಲಿಯಲ್ಲಿರುವ ಜನರಿಗೆ ಮಾದಕ ವಸ್ತು ಪೂರೈಸಿ ಹಣ ಗಳಿಸುವ ಆಸೆಯಿಂದ ಆಮಿಷಕ್ಕೊಳಗಾಗಿದ್ದನು. 

ಹೆರಾಯಿನ್ ನ್ನು ಬಳಕೆಗಾಗಿ ಬಳಕೆದಾರರಿಗೆ ಮಾರಾಟ ಮಾಡುವ ಮೊದಲು ಇದನ್ನು ಟಾಲ್ಕಮ್ ಅಥವಾ ಸೀಮೆಸುಣ್ಣದ ಪುಡಿಯೊಂದಿಗೆ ಬೆರೆಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಆತನ ವಿರುದ್ಧ ನಾರ್ಕೋಟಿಕ್ ಡ್ರಗ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ ಆಕ್ಟ್, 1985 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಇದಕ್ಕೂ ಹಿಂದೆ ಎರಡು ಬಾರಿ ಹೆರಾಯಿನ್ ವಶ: ಇದಕ್ಕೂ ಮುನ್ನ ಇಥಿಯೋಪಿಯಾದಿಂದ ಅಕ್ರಮವಾಗಿ ಸಾಗಿಸಲಾಗಿದ್ದ 112 ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್ ನ್ನು ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಕಳೆದ ಆಗಸ್ಟ್ 1 ರಂದು ಡಿಆರ್ ಐ ವಶಪಡಿಸಿಕೊಂಡಿದೆ. 

ಭಾರತಕ್ಕೆ ಹೊರದೇಶಗಳಿಂದ ಹೆರಾಯಿನ್ ಕಳ್ಳಸಾಗಣೆ ಹೆಚ್ಚುತ್ತಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಬೆಂಗಳೂರಿನಲ್ಲಿ 280 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ವ್ಯಸನಕಾರಿ ವಸ್ತುಗಳನ್ನು ಒಳಗೊಂಡ 8 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಮತ್ತೊಂದು ಮೂಲಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com