ಮಂಡ್ಯ ಜನತೆಗೆ ಸಿಹಿ ಸುದ್ದಿ: ಆಗಸ್ಟ್ 31ಕ್ಕೆ ಮೈಶುಗರ್ ಕಾರ್ಖಾನೆ ಪುನರಾರಂಭ

ಕಳೆದ ನಾಲ್ಕು ವರ್ಷಗಳಿಂದ ಸಕ್ಕರೆ ಉತ್ಪಾದನೆಯನ್ನು ಸ್ಥಗಿತಗೊಳಿಸಿರುವ ಮಂಡ್ಯದ ಮೈಶುಗರ್ ಸಕ್ಕರೆ ಕಾರ್ಖಾನೆಯು ಆಗಸ್ಟ್ 31 ರಿಂದ ಪ್ರಾಯೋಗಿಕವಾಗಿ ಕಬ್ಬು ಅರೆಯುವ ಕಾರ್ಯವನ್ನು ಪುನರಾರಂಭಿಸಲಿದೆ...
ಮೈಷುಗರ್ ಕಾರ್ಖಾನೆ
ಮೈಷುಗರ್ ಕಾರ್ಖಾನೆ

ಮೈಸೂರು: ಕಳೆದ ನಾಲ್ಕು ವರ್ಷಗಳಿಂದ ಸಕ್ಕರೆ ಉತ್ಪಾದನೆಯನ್ನು ಸ್ಥಗಿತಗೊಳಿಸಿರುವ ಮಂಡ್ಯದ ಮೈಶುಗರ್ ಸಕ್ಕರೆ ಕಾರ್ಖಾನೆಯು ಆಗಸ್ಟ್ 31 ರಿಂದ ಪ್ರಾಯೋಗಿಕವಾಗಿ ಕಬ್ಬು ಅರೆಯುವ ಕಾರ್ಯವನ್ನು ಪುನರಾರಂಭಿಸಲಿದೆ ಎಂದು ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ತಿಳಿಸಿದ್ದಾರೆ.

ಭಾನುವಾರ ನವೀಕರಣಗೊಂಡ ಮೈಶುಗರ್ ಕಾರ್ಖಾನೆಯ ವಿವಿಧ ಘಟಕಗಳನ್ನು ಪರಿಶೀಲಿಸಿದ ಅವರು, ಸೆಪ್ಟೆಂಬರ್ 10 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೈಶುಗರ್ ಕಾರ್ಖಾನೆ ಪುನರಾರಂಭಕ್ಕೆ ಚಾಲನೆ ನೀಡಲಿದ್ದಾರೆ. ಕಾರ್ಖಾನೆಯ ಕಠಿಣ ಅವಧಿಯಲ್ಲಿ ಆರ್ಥಿಕವಾಗಿ ಬೆಂಬಲ ನೀಡಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.

ಸಿಎಂ ಬೊಮ್ಮಾಯಿ ಅವರು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ, ಮೈಶುಗರ್ ಕಾರ್ಖಾನೆ ಪುನಶ್ಚೇತನಗೊಳಿಸಿದ್ದಾರೆ. ಭವಿಷ್ಯದಲ್ಲಿ ಕಾರ್ಖಾನೆ ಸಕ್ಕರೆ ಉತ್ಪಾದನೆ ನಿಲ್ಲುವುದಿಲ್ಲ ಎಂದು ಮುನೇನಕೊಪ್ಪ ಹೇಳಿದರು.

ಸ್ಥಗಿತಗೊಂಡಿರುವ ಯಂತ್ರೋಪಕರಣಗಳನ್ನು ದುರಸ್ತಿಗೊಳಿಸಲಾಗಿದ್ದು, ಇದಕ್ಕೆ ಹೆಚ್ಚು ಸಮಯ ತೆಗೆದುಕೊಂಡಿತು. ಇದು ಮೈಸೂರು ರಾಜ್ಯದ ಹೆಮ್ಮೆಯಾಗಿದೆ ಎಂದು ಸಚಿವರು ತಿಳಿಸಿದರು.

ಮಂಡ್ಯ ತಾಲೂಕಿನ ಮೈಸೂರು ಕಾರ್ಖಾನೆ ವ್ಯಾಪ್ತಿಯಲ್ಲಿ ಬೆಳೆದ 4 ಲಕ್ಷ ಟನ್ ಕಬ್ಬನ್ನು ಖರೀದಿಸಲು ಮೈಸೂರು ಕಾರ್ಖಾನೆ ಒಪ್ಪಂದ ಮಾಡಿಕೊಂಡಿದೆ. ಸೆಸ್ಕಾಂಗೆ ಬಾಕಿ ಉಳಿದಿದ್ದ 31 ಕೋಟಿ ರೂ. ವಿದ್ಯುತ್ ಬಿಲ್‌ ಅನ್ನು ಸರ್ಕಾರ ಪಾವತಿಸಿದೆ ಎಂದು ಸಚಿವರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com