ಬೆಂಗಳೂರು-ಮೈಸೂರು ಹೆದ್ದಾರಿ ಜಲಾವೃತ: ಇಂಜಿನಿಯರ್ ಗಳಿಗೆ ಪ್ರಶಸ್ತಿ ಕೊಡಬೇಕು- ಡಿಕೆ ಶಿವಕುಮಾರ್ 

ಭಾರೀ ಮಳೆಯಿಂದ ಜಲಾವೃತಗೊಂಡಿದ್ದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ   ಪರಿಶೀಲನೆ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಯೋಜನೆ ರೂಪಿಸಿ, ಕಾರ್ಯಗತಗೊಳಿಸಿದ ಇಂಜಿನಿಯರ್ ಗಳಿಗೆ ಪ್ರತಿಷ್ಠಿತ ಪ್ರಶಸ್ತಿ ಕೊಡಬೇಕು, ಇಂಜಿನಿಯರ್ ಗಳಿಗೆ ಪ್ರಶಸ್ತಿ ಕೊಡುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಲಾಗುವುದು ಎಂದರು.
ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್

ಬೆಂಗಳೂರು:  ಭಾರೀ ಮಳೆಯಿಂದ ಜಲಾವೃತಗೊಂಡಿದ್ದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ   ಪರಿಶೀಲನೆ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಯೋಜನೆ ರೂಪಿಸಿ, ಕಾರ್ಯಗತಗೊಳಿಸಿದ ಇಂಜಿನಿಯರ್ ಗಳಿಗೆ ಪ್ರತಿಷ್ಠಿತ ಪ್ರಶಸ್ತಿ ಕೊಡಬೇಕು, ಇಂಜಿನಿಯರ್ ಗಳಿಗೆ ಪ್ರಶಸ್ತಿ ಕೊಡುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಲಾಗುವುದು ಎಂದರು.

ಹೆದ್ದಾರಿ ಅಭಿವೃದ್ಧಿಪಡಿಸುವಾಗ ಯಾರೇ ಆದರೂ ಕನಿಷ್ಠ ಸಾಮಾನ್ಯ ಜ್ಞಾನ ಹೊಂದಿರಬೇಕು, ಹೆದ್ದಾರಿ ಇದೀಗ ಕೆರೆಯಂತಾಗಿದೆ ಎಂದು ಶಿವಕುಮಾರ್ ಗುಡುಗಿದರು. ಮುಖ್ಯಮಂತ್ರಿ ರಾಮನಗರ ಭೇಟಿ ವೇಳೆಯಲ್ಲಿ ಪ್ರವಾಹ ಪೀಡಿತರಿಗೆ ಪರಿಹಾರ ಬಿಡುಗಡೆ ಮಾಡದ ಕ್ರಮಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು. 

ಈ ಮಧ್ಯೆ ಎಕ್ಸ್ ಪ್ರೆಸ್ ವೇ ಅತ್ಯುತ್ತಮವಾಗಿದೆ ಎಂದು ಕರೆದಿರುವ ಸಂಸದ ಪ್ರತಾಪ್ ಸಿಂಹ ವಿರುದ್ಧ ಜೆಡಿಎಸ್ ಮುಖಂಡ ಹೆಚ್. ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಒಂದು ವೇಳೆ ಪ್ರತಾಪ್ ಸಿಂಹ ಸಂಗಬಸಪ್ಪನ ದೊಡ್ಡಿಗೆ ಬಂದರೆ ನೀರಿನಲ್ಲಿ ಸ್ವೀಮ್ ಮಾಡಿ ಎಂಜಾಯ್ ಮಾಡಬಹುದು ಎಂದರು.

ಈ ಹಿಂದೆ ಎಕ್ಸ್ ಪ್ರೆಸ್ ವೇ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಫೋಸ್ಟ್ ವೊಂದನ್ನು ಮಾಡಿದ್ದ ಪ್ರತಾಪ್ ಸಿಂಹ, ರಾಮನಗರ ಜಿಲ್ಲೆಯಲ್ಲಿ ಕುಮಾರಸ್ವಾಮಿ ಹಾಗೂ ಡಿಕೆ ಸುರೇಶ್ ಅವರಿಂದ ಕೆರೆಗಳು, ಕಾಲುವೆಗಳ ಒತ್ತುವರಿಯಾಗಿದ್ದು, ಅವುಗಳನ್ನು ಮೊದಲು ತೆರವುಗೊಳಿಸುವಂತೆ ಪರೋಕ್ಷವಾಗಿ ಉಲ್ಲೇಖಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com