ರಾಯಚೂರು: ಸ್ನೇಹಿತ, ಆತನ ಸಹಚರನಿಂದ ಅಪ್ರಾಪ್ತೆಗೆ ಬಲವಂತವಾಗಿ ಮದ್ಯ ಕುಡಿಸಿ ಲೈಂಗಿಕ ಕಿರುಕುಳ!
ರಾಯಚೂರು ಜಿಲ್ಲೆಯಲ್ಲಿ ಅಪ್ರಾಪ್ತೆಯೊಬ್ಬಳಿಗೆ ಆಕೆಯ ಸ್ನೇಹಿತ ಮತ್ತು ಆತನ ಸಹಚರ ಸೇರಿಕೊಂಡು ಬಲವಂತವಾಗಿ ಮದ್ಯ ಕುಡಿಸಿದ್ದು, ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
Published: 03rd December 2022 10:55 AM | Last Updated: 03rd December 2022 06:21 PM | A+A A-

ಪ್ರಾತಿನಿಧಿಕ ಚಿತ್ರ
ರಾಯಚೂರು: ಜಿಲ್ಲೆಯಲ್ಲಿ ಅಪ್ರಾಪ್ತೆಯೊಬ್ಬಳಿಗೆ ಆಕೆಯ ಸ್ನೇಹಿತ ಮತ್ತು ಆತನ ಸಹಚರ ಸೇರಿಕೊಂಡು ಬಲವಂತವಾಗಿ ಮದ್ಯ ಕುಡಿಸಿದ್ದು, ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಹೊಸಪೇಟೆ ಪಟ್ಟಣದ ಬಳಿ ಈ ಘಟನೆ ನಡೆದಿದ್ದು, ಸಂತ್ರಸ್ತೆಯ ತಾಯಿ ಪೊಲೀಸರಿಗೆ ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ಪೊಲೀಸರ ಪ್ರಕಾರ, ಒಂಬತ್ತನೇ ತರಗತಿಯಲ್ಲಿ ಓದುತ್ತಿರುವ ಸಿಂಧನೂರು ನಿವಾಸಿಯಾದ ಸಂತ್ರಸ್ತ ಬಾಲಕಿ ನವೆಂಬರ್ 25 ರಂದು ತನ್ನ ತಾಯಿಯ ಮನೆಗೆ ಹೋಗಿದ್ದಳು.
ನವೆಂಬರ್ 27 ರಂದು ಹೊಸಪೇಟೆಯಿಂದ ಸಿಂಧನೂರಿಗೆ ವಾಪಸ್ಸಾಗುತ್ತಿದ್ದಾಗ ಸ್ನೇಹಿತ ಸಚಿನ್ ಕರೆ ಮಾಡಿ ವಾಪಸ್ ಬರುವಂತೆ ಹೇಳಿದ್ದಾನೆ. ಮತ್ತೆ ಆಕೆ ಹೊಸಪೇಟೆಗೆ ಹಿಂತಿರುಗಿದಾಗ ಸಚಿನ್ ಸ್ನೇಹಿತನ ಜೊತೆ ಸೇರಿ ಬಲವಂತವಾಗಿ ಪ್ರವಾಸಕ್ಕೆ ಕರೆದೊಯ್ದಿದ್ದಾನೆ.
ಆಕೆಯನ್ನು ಗಂಗಾವತಿಯ ಅಂಜನಾದ್ರಿ ಬೆಟ್ಟಕ್ಕೆ ಕರೆದೊಯ್ಯುವ ವೇಳೆ ಚಲಿಸುತ್ತಿದ್ದ ಕಾರಿನಲ್ಲಿಯೇ ಮದ್ಯ ಸೇವಿಸುವಂತೆ ಒತ್ತಾಯಿಸಿದ್ದಾರೆ. ಬಳಿಕ ಅನುಚಿತವಾಗಿ ಸ್ವರ್ಶಿಸಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ.
ಅಲ್ಲಿಂದ ಹಿಂದಿರುಗಿದ ನಂತರ, ಬಾಲಕಿ ತನ್ನ ತಾಯಿಯೊಂದಿಗೆ ಈ ವಿಚಾರವನ್ನು ಹಂಚಿಕೊಂಡಿದ್ದು, ಬಳಿಕ ಪೊಲೀಸರನ್ನು ಸಂಪರ್ಕಿಸಿದ್ದಾರೆ.
ಈ ಸಂಬಂಧ ಮುಂದಿನ ತನಿಖೆ ನಡೆಯುತ್ತಿದೆ.