ಹಾವೇರಿ: 185 ಕೆಜಿ ತೂಕದ ಮಹಿಳೆಗೆ ಶಸ್ತ್ರ ಚಿಕಿತ್ಸೆ ನಡೆಸಿ ಪ್ರಾಣ ಉಳಿಸಿದ ಸರ್ಕಾರಿ ಆಸ್ಪತ್ರೆ ವೈದ್ಯರು!

ಹಾವೇರಿ ಸರ್ಕಾರಿ ಆಸ್ಪತ್ರೆಯ ವೈದ್ಯರ ತಂಡವೊಂದು 185 ಕೆಜಿ ತೂಕದ  48 ವರ್ಷದ ಮಹಿಳೆಯೊಬ್ಬರಿಗೆ ಅಪರೂಪದ ಕರುಳಿನ ಶಸ್ತ್ರ ಚಿಕಿತ್ಸೆ ನಡೆಸುವ ಮೂಲಕ ಅವರ ಜೀವವನ್ನು ಉಳಿಸಿದ್ದಾರೆ. ಈ ಶಸ್ತ್ರ ಚಿಕಿತ್ಸೆ ಕಷ್ಟ ಎಂದು ಹೇಳಿ ಅನೇಕ ಚಿಕಿತ್ಸೆ ನೀಡಲು ಅನೇಕ ಖಾಸಗಿ ಆಸ್ಪತ್ರೆಗಳು ಕೈ ಚೆಲ್ಲಿದ ನಂತರ ಸರ್ಕಾರಿ ವೈದ್ಯರು ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ. 
ಚೇತರಿಸಿಕೊಂಡ ಚಂದ್ರಮ್ಮ ಅವರೊಂದಿಗೆ ವೈದ್ಯರ ತಂಡ
ಚೇತರಿಸಿಕೊಂಡ ಚಂದ್ರಮ್ಮ ಅವರೊಂದಿಗೆ ವೈದ್ಯರ ತಂಡ

ಹಾವೇರಿ: ಹಾವೇರಿ ಸರ್ಕಾರಿ ಆಸ್ಪತ್ರೆಯ ವೈದ್ಯರ ತಂಡವೊಂದು 185 ಕೆಜಿ ತೂಕದ  48 ವರ್ಷದ ಮಹಿಳೆಯೊಬ್ಬರಿಗೆ ಅಪರೂಪದ ಕರುಳಿನ ಶಸ್ತ್ರ ಚಿಕಿತ್ಸೆ ನಡೆಸುವ ಮೂಲಕ ಅವರ ಜೀವವನ್ನು ಉಳಿಸಿದ್ದಾರೆ. ಈ ಶಸ್ತ್ರ ಚಿಕಿತ್ಸೆ ಕಷ್ಟ ಎಂದು ಹೇಳಿ ಅನೇಕ ಚಿಕಿತ್ಸೆ ನೀಡಲು ಅನೇಕ ಖಾಸಗಿ ಆಸ್ಪತ್ರೆಗಳು ಕೈ ಚೆಲ್ಲಿದ ನಂತರ ಸರ್ಕಾರಿ ವೈದ್ಯರು ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ. 

ಸೊಮಾಲಾಪುರದ ರೋಗಿ ಚಂದ್ರಮ್ಮ ಉಸಿರಾಟದ ತೊಂದರೆಯಿಂದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು.  ಅವರಿಗೆ ಅಪರೂಪದ ಶಸ್ತ್ರ ಚಿಕಿತ್ಸೆ ಅಗತ್ಯವಿದೆ, ಆದರೆ ಮಹಿಳೆ ಹೆಚ್ಚು ತೂಕವಿರುವ ಕಾರಣ ಶಸ್ತ್ರ ಚಿಕಿತ್ಸೆ ಮಾಡಲು ಕಷ್ಟಸಾಧ್ಯ ಎಂದು ವೈದ್ಯರು ಹೇಳಿದ್ದರು. ನಂತರ ಕುಟುಂಬ ಸದಸ್ಯರನ್ನು ಮಹಿಳೆಯನ್ನು ಹಾವೇರಿಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದಿದ್ದು, ನಾಲ್ಕು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ ಆಕೆಯನ್ನು ಬದುಕಿಸಲಾಗಿದೆ. 

ತೂಕ ಹೆಚ್ಚಾಗಿದ್ದರಿಂದ ಚಂದ್ರಮ್ಮ ಅವರಿಗೆ ಉಸಿರಾಟದ ತೊಂದರೆಯಿತ್ತು. ಅಲ್ಲದೇ ಆಕೆಯ ಕರುಳು ಹಾನಿಯಾಗಿತ್ತು. ಅದನ್ನು ಶಸ್ತ್ರ ಚಿಕಿತ್ಸೆ ವೇಳೆ ತೆಗೆಯಲಾಯಿತು ಎಂದು ರಾಣಿಬೆನ್ನೂರಿನ ವೈದ್ಯ ಡಾ. ನಿರಂಜನ್ ತಿಳಿಸಿದರು. ಹಾವೇರಿ ಜಿಲ್ಲಾಸ್ಪತ್ರೆ ಸರ್ಜನ್ ಆಗಿರುವ ಡಾ. ನಿರಂಜನ್ ನೇತೃತ್ವದಲ್ಲಿನ ವೈದ್ಯರ ತಂಡ ಶಸ್ತ್ರ ಚಿಕಿತ್ಸೆ ನಡೆಸಿ ಚಂದ್ರಮ್ಮ ಅವರ ಪ್ರಾಣ ಉಳಿಸಿದ್ದಾರೆ.

 ರೋಗಿಯ ಹೃದಯ ಬಡಿತ, ನಾಡಿ ಮಿಡಿತ ಕಡಿಮೆಯಿತ್ತು. ಅದು ಗಂಭೀರವಾದ ಪ್ರಕರಣವಾಗಿತ್ತು. ಬೊಜ್ಜು ಅಲ್ಲದೇ, ರಕ್ತದೊತ್ತಡ, ಸಕ್ಕರೆ ಪ್ರಮಾಣ ಕೂಡಾ ಹೆಚ್ಚಾಗಿತ್ತು. ಆದಾಗ್ಯೂ, ನಮ್ಮ ತಂಡದ ಪ್ರಯತ್ನದೊಂದಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಯಿತು. ಸದ್ಯ ಮಹಿಳೆ ಆರೋಗ್ಯದಿಂದ ಇರುವುದಾಗಿ ಡಾ. ನಿರಂಜನ್ ತಿಳಿಸಿದರು. 

ಅಪರೂಪದ ಶಸ್ತ್ರ ಚಿಕಿತ್ಸೆ ಮೂಲಕ ತನನ್ನು ಬದುಕಿಸಿದ ವೈದ್ಯರಿಗೆ ಚಂದ್ರಮ್ಮ ಧನ್ಯವಾದ ಸಲ್ಲಿಸಿದ್ದಾರೆ. ಬೆಂಗಳೂರು ಮತ್ತು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತೋರಿಸಿ ಎಲ್ಲಾ ಭರವಸೆ ಕಳೆದುಕೊಂಡಿದ್ದೇವು. ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ  ನೀಡಿರಲಿಲ್ಲ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ವೈದ್ಯರೂ ಕೂಡಾ ಚಂದ್ರಮ್ಮ ಬದುಕಲ್ಲ ಅಂತಾನೇ ಹೇಳಿದ್ರು.  ಆದರೆ, ನಮ್ಮ ಕುಟುಂಬಕ್ಕೆ ಪವಾಡ ರೀತಿಯಲ್ಲಿ ದೊರೆತ ಹಾವೇರಿ ವೈದ್ಯರ ತಂಡಕ್ಕೆ ಧನ್ಯವಾದ ಸಲ್ಲಿಸುವುದಾಗಿ ಚಂದ್ರಮ್ಮ ಅವರ ಸಂಬಂಧಿಯೊಬ್ಬರು ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com